AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ತಂಡಗಳು, 66 ಖಾಲಿ ಸ್ಥಾನಗಳು: ಬೆಳಗ್ಗೆ 11 ಗಂಟೆಗೆ ಐಪಿಎಲ್ ಹರಾಜು ಆರಂಭ

ಮುಂದಿನ ಐಪಿಎಲ್ ಹರಾಜು ಡಿಸೆಂಬರ್ 16 ರಂದು ಗೋವಾದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವುದು ಖಚಿತವಾಗಿದೆ. ಎಲ್ಲಾ 10 ತಂಡಗಳು ಆಟಗಾರರನ್ನು ಉಳಿಸಿಕೊಂಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿವೆ, ಹಲವು ಸ್ಟಾರ್ ಆಟಗಾರರನ್ನು ಕೈಬಿಡಲಾಗಿದೆ. ಹರಾಜಿನಲ್ಲಿ 66 ಸ್ಥಾನಗಳು ಖಾಲಿಯಿದ್ದು, 25 ವಿದೇಶಿ ಆಟಗಾರರಿಗೆ ಅವಕಾಶವಿದೆ. ಯಾವ ತಂಡ ಯಾರನ್ನು ಖರೀದಿಸಲಿದೆ ಎಂಬ ಕುತೂಹಲ ಹೆಚ್ಚಿದೆ.

10 ತಂಡಗಳು, 66 ಖಾಲಿ ಸ್ಥಾನಗಳು: ಬೆಳಗ್ಗೆ 11 ಗಂಟೆಗೆ ಐಪಿಎಲ್ ಹರಾಜು ಆರಂಭ
Ipl 2027
ಪೃಥ್ವಿಶಂಕರ
|

Updated on: Nov 18, 2026 | 5:06 PM

Share

ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಎಲ್ಲಾ 10 ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ಬಾರಿ ಹಲವು ಸ್ಟಾರ್ ಹಾಗೂ ಅನುಭವಿ ಆಟಗಾರರನ್ನು ತಂಡಗಳು ಕೈಬಿಟ್ಟಿವೆ. ಹೀಗಾಗಿ ಇದೀಗ ಎಲ್ಲರ ಚಿತ್ತ ಆಟಗಾರರ ಹರಾಜಿನ ಮೇಲಿದೆ. ಈಗಾಗಲೇ ಬಿಸಿಸಿಐ ಹರಾಜಿನ ದಿನಾಂಕವನ್ನೂ ಪ್ರಕಟಿಸಿದ್ದು, ಇನ್ನೇನು ಒಂದು ತಿಂಗಳಷ್ಟೇ ಬಾಕಿ ಇದೆ. ಈ ಬಾರಿಯ ಹರಾಜು ಕೂಡ ವಿಶೇಷವಾಗಿರಲಿದ್ದು, ಬೆಳಗ್ಗೆಯಿಂದಲೇ ಪ್ರಕ್ರಿಯೆ ಆರಂಭವಾಗಿ ಸಂಜೆಯವರೆಗೂ ಮುಂದುವರಿಯಲಿದೆ.

ಬೆಳಗ್ಗೆ 11 ಗಂಟೆಗೆ ಐಪಿಎಲ್ ಹರಾಜು

ಐಪಿಎಲ್ 2027ರ ಆಟಗಾರರ ಹರಾಜು ಡಿಸೆಂಬರ್ 16ರಂದು ನಡೆಯುವುದು ಖಚಿತವಾಗಿದೆ. ಈ ಹಿಂದೆ ಹರಾಜಿನ ದಿನಾಂಕದ ಬಗ್ಗೆ ಮಾಹಿತಿ ಹೊರಬಿದ್ದಿತ್ತಾದರೂ, ಇದೀಗ ಅಧಿಕೃತವಾಗಿ ದೃಢಪಟ್ಟಿದೆ. ಈ ಬಾರಿ ವಿದೇಶದಲ್ಲಿ ಹರಾಜು ನಡೆಸುವ ಬದಲು ಭಾರತದ ಗೋವಾದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಬುಧವಾರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಚಾಲನೆ ಸಿಗಲಿದೆ. ಕಳೆದ ಕೆಲವು ವರ್ಷಗಳಿಂದ ಹರಾಜು ಸಂಜೆ ಆರಂಭವಾಗಿ ತಡರಾತ್ರಿಯವರೆಗೂ ನಡೆಯುತ್ತಿತ್ತು. ಆದರೆ ಈ ಬಾರಿ ಬೆಳಗ್ಗೆಯೇ ಹರಾಜು ಶುರುವಾಗಲಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಹಗಲಿನಲ್ಲೇ ತಮ್ಮ ನೆಚ್ಚಿನ ಆಟಗಾರರ ಬಿಡ್ಡಿಂಗ್ ವೀಕ್ಷಿಸಬಹುದು.

10 ತಂಡ, 66 ಸ್ಥಾನಗಳು

ಎಲ್ಲಾ 10 ತಂಡಗಳ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಒಟ್ಟು 66 ಸ್ಥಾನಗಳು ಖಾಲಿ ಉಳಿದಿವೆ. ಈ ಸ್ಥಾನಗಳನ್ನು ತುಂಬಲು ಫ್ರಾಂಚೈಸಿಗಳು ಹರಾಜಿನಲ್ಲಿ ಆಟಗಾರರನ್ನು ಖರೀದಿಸಬೇಕಿದೆ. ಈ ಪೈಕಿ 25 ವಿದೇಶಿ ಆಟಗಾರರಿಗೆ ಅವಕಾಶವಿದೆ. ಈಗಾಗಲೇ ಆಟಗಾರರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಗುಜರಾತ್ ಟೈಟಾನ್ಸ್ ಮುಂಚೂಣಿಯಲ್ಲಿದೆ. ಗುಜರಾತ್ ತಂಡ ಒಟ್ಟು 22 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಲಾ 19 ಆಟಗಾರರನ್ನು ಉಳಿಸಿಕೊಂಡಿವೆ. ಹೀಗಾಗಿ ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ಯಾವ ತಂಡ ಯಾರನ್ನು ಖರೀದಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಧೋನಿಯನ್ನು ‘ತಲಾ’ ಎಂದು ಕರೆಯುವುದೇಕೆ? ಈ ಹೆಸರಿನ ಹಿಂದಿದೆ ದೊಡ್ಡ ಕಥೆ

10 ತಂಡಗಳ ವಿವರ ಇಂತಿದೆ

ತಂಡ

ಉಳಿದಿರುವ ಹಣ

ಖಾಲಿ ಸ್ಥಾನಗಳು

ವಿದೇಶಿ ಆಟಗಾರರ ಸ್ಥಾನ

ಲಕ್ನೋ ಸೂಪರ್ ಜೈಂಟ್ಸ್

47.45 ಕೋಟಿ

7

3

ಕೋಲ್ಕತ್ತಾ ನೈಟ್ ರೈಡರ್ಸ್

41.65 ಕೋಟಿ

8

3

ಸನ್‌ರೈಸರ್ಸ್ ಹೈದರಾಬಾದ್

40.15 ಕೋಟಿ

7

3

ಡೆಲ್ಲಿ ಕ್ಯಾಪಿಟಲ್ಸ್

39.50 ಕೋಟಿ

9

4

ಮುಂಬೈ ಇಂಡಿಯನ್ಸ್

32.60 ಕೋಟಿ

9

2

ಚೆನ್ನೈ ಸೂಪರ್ ಕಿಂಗ್ಸ್

28.05 ಕೋಟಿ

6

2

ರಾಜಸ್ಥಾನ್ ರಾಯಲ್ಸ್

27.05 ಕೋಟಿ

6

2

ಪಂಜಾಬ್ ಕಿಂಗ್ಸ್

18.60 ಕೋಟಿ

6

2

ರಾಯಲ್ ಚಾಲೆಂಜರ್ಸ್ ಬೆಂಗಳೂರು

14.15 ಕೋಟಿ

6

1

ಗುಜರಾತ್ ಟೈಟಾನ್ಸ್

8.75 ಕೋಟಿ

3

2

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ