AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿಯನ್ನು ‘ತಲಾ’ ಎಂದು ಕರೆಯುವುದೇಕೆ? ಈ ಹೆಸರಿನ ಹಿಂದಿದೆ ದೊಡ್ಡ ಕಥೆ

ಮಹೇಂದ್ರ ಸಿಂಗ್ ಧೋನಿ ಐಪಿಎಲ್​ಗೆ ಆಟಗಾರನಾಗಿ ವಿದಾಯ ಹೇಳಿದ್ದಾರೆ. ಈ ಮೂಲಕ ಕ್ರಿಕೆಟ್​ನಲ್ಲಿ ಅವರ ಯುಗಾಂತ್ಯವಾಗಿದೆ. ಅಭಿಮಾನಿಗಳಿಂದ 'ಕ್ಯಾಪ್ಟನ್ ಕೂಲ್' ಎಂದೂ ಕರೆಯಲ್ಪಡುವ ಧೋನಿಗೆ 'ತಲಾ' ಎಂಬ ಪ್ರೀತಿಯ ಹೆಸರು ಬಂದಿದ್ದು ಹೇಗೆ? ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ನೀಡಿದ ಈ ತಮಿಳು ಪದದ ಅರ್ಥ ನಾಯಕ ಎಂದಾಗಿದೆ. ಧೋನಿಯ ತಾಳ್ಮೆ, ನಾಯಕತ್ವ ಮತ್ತು ಅಭಿಮಾನಿಗಳೊಂದಿಗಿನ ಭಾವನಾತ್ಮಕ ಸಂಬಂಧ ಈ ಹೆಸರನ್ನು ಜನಪ್ರಿಯಗೊಳಿಸಿದೆ.

ಧೋನಿಯನ್ನು 'ತಲಾ' ಎಂದು ಕರೆಯುವುದೇಕೆ? ಈ ಹೆಸರಿನ ಹಿಂದಿದೆ ದೊಡ್ಡ ಕಥೆ
ಎಂಎಸ್ ಧೋನಿ
ಪೃಥ್ವಿಶಂಕರ
|

Updated on: Nov 18, 2026 | 12:56 PM

Share

ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಆಟಗಾರನಾಗಿ ಕ್ರಿಕೆಟ್​ನಲ್ಲಿ ಧೋನಿಯ ಯುಗಾಂತ್ಯವಾಗಿದೆ. 2020 ರಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಧೋನಿ, ಇದೀಗ ಐಪಿಎಲ್​ನಿಂದಲೂ ಆಟಗಾರನಾಗಿ ದೂರ ಸರಿದಿದ್ದಾರೆ. ಮೈದಾನದಲ್ಲಿ ಎಂತಹ ಸಂದರ್ಭದಲ್ಲೂ ತನ್ನ ತಾಳ್ಮೆ, ನಾಯಕತ್ವ ಮತ್ತು ಪಂದ್ಯದ ಕೊನೆಯ ಕ್ಷಣದವರೆಗೂ ಗೆಲುವಿಗಾಗಿ ಹೋರಾಡುವ ಛಲದಿಂದಲೇ ಭಾರತಕ್ಕೆ ಅದೇಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಧೋನಿಯನ್ನು ಅಭಿಮಾನಿಗಳು ಕ್ಯಾಪ್ಟನ್ ಕೂಲ್, ಮಹೀ ಎಂತೆಲ್ಲಾ ಕರೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಧೋನಿಯನ್ನು ತಲಾ ಎಂದು ಕರೆಯುವುದು ಚಾಲ್ತಿಗೆ ಬಂದಿತು. ಹಾಗಾದರೆ ಧೋನಿಗೆ ತಲಾ ಎಂದು ಹೆಸರಿಟ್ಟಿದ್ದು ಯಾರು? ಈ ಹೆಸರಿನ ಹಿಂದಿರುವ ಅರ್ಥವೇನು? ಧೋನಿಗೆ ಈ ಹೆಸರು ಹೇಗೆ ಬಂತು? ಎಂಬುದನ್ನು ನೋಡುವುದಾದರೆ..

ಎಲ್ಲರಿಗೂ ಗೊತ್ತಿರುವಂತೆ ಧೋನಿ ತನ್ನ ಐಪಿಎಲ್‌ ವೃತ್ತಿಜೀವನವನ್ನು ಭಾಗಶಃ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿಯೇ ಕಳೆದವರು. 2 ಆವೃತ್ತಿಗಳಲ್ಲಿ ಧೋನಿ ಬೇರೆ ತಂಡದ ಪರ ಆಡಿದ್ದನ್ನು ಬಿಟ್ಟರೆ, ಉಳಿದೆಲ್ಲ ಆವೃತ್ತಿಗಳಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಧೋನಿಯನ್ನು ತಲಾ ಎಂದು ಕರೆಯಲಾರಂಭಿಸಿದರು. ಹಾಗಿದ್ದರೆ ತಲಾ ಎಂಬ ಪದದ ಅರ್ಥವೇನು? ಎಂಬುದನ್ನು ನೋಡುವುದಾದರೆ..

‘ತಲಾ’ ಪದದ ಅರ್ಥವೇನು?

ತಲಾ ಎಂಬುದು ತಮಿಳು ಭಾಷೆಯ ಪದ. ಇದರ ಅರ್ಥ ನಾಯಕ, ಮುಖ್ಯಸ್ಥ ಅಥವಾ ತಂಡವನ್ನು ಮುನ್ನಡೆಸುವ ವ್ಯಕ್ತಿ ಎಂದಾಗಿದೆ. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಹಲವು ವರ್ಷಗಳಿಂದ ಅಭಿಮಾನಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಹೀಗಾಗಿ ತಮಿಳುನಾಡಿನ ಅಭಿಮಾನಿಗಳು ಅವರಿಗೆ ಪ್ರೀತಿಯಿಂದ ತಲಾ ಎಂಬ ಹೆಸರನ್ನು ನೀಡಿದ್ದಾರೆ.

ಈ ಹೆಸರಿಡಲು ಕಾರಣವೇನು?

ಭಾರತೀಯ ಕ್ರಿಕೆಟ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸಿದ ರೀತಿ ಅವರನ್ನು ವಿಶೇಷ ನಾಯಕನನ್ನಾಗಿ ಮಾಡಿದೆ. ಪಂದ್ಯದ ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಆತುರಪಡದೆ, ಶಾಂತವಾಗಿ ನಿರ್ಧಾರ ತೆಗೆದುಕೊಳ್ಳುವ ಅವರ ಗುಣ ಅಭಿಮಾನಿಗಳನ್ನು ಮೆಚ್ಚಿಸಿದೆ. ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟ ಧೋನಿ, ಸಿಎಸ್‌ಕೆ ತಂಡಕ್ಕೂ ಹಲವು ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಅವರ ಈ ನಾಯಕತ್ವದ ಗುಣವೇ ತಲಾ ಎಂಬ ಹೆಸರನ್ನು ಮತ್ತಷ್ಟು ಜನಪ್ರಿಯಗೊಳಿಸಿದೆ.

ಚೆನ್ನೈಗೆ 5 ಟ್ರೋಫಿ ಗೆದ್ದುಕೊಟ್ಟ ಧೋನಿಗೂ ಈ ತಂಡದ ವಿರುದ್ಧ ಗೆಲುವಿಲ್ಲ..!

ಐಪಿಎಲ್​ ವೇಳೆ ತಲಾ ತಲಾ ಎಂಬ ಕೂಗು

ಚೆನ್ನೈ ತಂಡದ ಪಂದ್ಯ ನಡೆಯುವಾಗ ಕ್ರೀಡಾಂಗಣದಲ್ಲಿ ಅಭಿಮಾನಿಗಳು ತಲಾ… ತಲಾ… ಎಂದು ಕೂಗುವುದು ಸಾಮಾನ್ಯ. ಸಾಮಾಜಿಕ ಜಾಲತಾಣಗಳಲ್ಲೂ #Thala ಮತ್ತು #WhistlePodu ಹ್ಯಾಷ್‌ಟ್ಯಾಗ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಅಭಿಮಾನಿಗಳ ಬ್ಯಾನರ್‌ಗಳು, ಹಾಡುಗಳು, ಪೋಸ್ಟರ್‌ಗಳು, ಮೀಮ್ಸ್ ಹಾಗೂ ಚೆನ್ನೈನ ಸ್ಥಳೀಯ ವ್ಯಾಪಾರಗಳಲ್ಲೂ ತಲಾ ಹೆಸರು ಕಾಣಸಿಗುತ್ತದೆ. ಹೀಗೆ ಈ ಹೆಸರು ಕ್ರಿಕೆಟ್ ಅಭಿಮಾನಿಗಳ ಸಂಭ್ರಮದ ಒಂದು ಭಾಗವೇ ಆಗಿದೆ.

ಒಟ್ಟಿನಲ್ಲಿ, ತಲಾ ಎಂಬುದು ಧೋನಿಗೆ ನೀಡಿರುವ ಒಂದು ಸಾಮಾನ್ಯ ಬಿರುದಲ್ಲ. ಅದು ಅಭಿಮಾನಿಗಳ ಗೌರವ, ಪ್ರೀತಿ, ನಂಬಿಕೆ ಮತ್ತು ಭಾವನಾತ್ಮಕ ಸಂಬಂಧದ ಸಂಕೇತವಾಗಿದೆ. ನಾಯಕನಾಗಿ ತಂಡವನ್ನು ಮುನ್ನಡೆಸಿದ ರೀತಿ, ಚೆನ್ನೈ ತಂಡದೊಂದಿಗಿನ ದೀರ್ಘಕಾಲದ ನಂಟು ಹಾಗೂ ಅಭಿಮಾನಿಗಳ ಮೇಲಿನ ಪ್ರೀತಿ ಧೋನಿಯನ್ನು ತಲಾ ಆಗಿ ರೂಪಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ