AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈಗೆ 5 ಟ್ರೋಫಿ ಗೆದ್ದುಕೊಟ್ಟ ಧೋನಿಗೂ ಈ ತಂಡದ ವಿರುದ್ಧ ಗೆಲುವಿಲ್ಲ..!

ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಎಂ.ಎಸ್. ಧೋನಿ ಪ್ರಮುಖರು. ಸಿಎಸ್‌ಕೆಗೆ 5 ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಆದರೆ, ತಮ್ಮ ಸುದೀರ್ಘ ನಾಯಕತ್ವದ ಅವಧಿಯಲ್ಲಿ, ಧೋನಿ ಒಂದು ತಂಡದ ವಿರುದ್ಧ ಮಾತ್ರ ಎಂದಿಗೂ ಗೆಲುವು ಸಾಧಿಸಿಲ್ಲ. 2016ರಲ್ಲಿ ರೈಸಿಂಗ್ ಪುಣೆ ಪರ ನಾಯಕನಾಗಿದ್ದಾಗ ಗುಜರಾತ್ ಲಯನ್ಸ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದರು. ಇದು ಅವರ ನಾಯಕತ್ವದ ಒಂದು ಅಚ್ಚರಿಯ ದಾಖಲೆಯಾಗಿದೆ.

ಚೆನ್ನೈಗೆ 5 ಟ್ರೋಫಿ ಗೆದ್ದುಕೊಟ್ಟ ಧೋನಿಗೂ ಈ ತಂಡದ ವಿರುದ್ಧ ಗೆಲುವಿಲ್ಲ..!
ಎಂಎಸ್ ಧೋನಿImage Credit source: PTI
ಪೃಥ್ವಿಶಂಕರ
|

Updated on: Nov 18, 2026 | 12:27 PM

Share

ಮಹೇಂದ್ರ ಸಿಂಗ್ ಧೋನಿ ಎಂದರೆ ಐಪಿಎಲ್‌ನಲ್ಲಿ ಯಶಸ್ಸಿನ ಮತ್ತೊಂದು ಹೆಸರು. ತಮ್ಮ ನಾಯಕತ್ವದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬರೋಬ್ಬರಿ ಐದು ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟಿರುವ ಧೋನಿ, ಐಪಿಎಲ್ ಇತಿಹಾಸದ ಯಶಸ್ವಿ ನಾಯಕರಲ್ಲಿ ಒಬ್ಬರು. ನಾಯಕನಾಗಿ ಒಟ್ಟು 235 ಪಂದ್ಯಗಳನ್ನು ಮುನ್ನಡೆಸಿರುವ ಅವರು, 136 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಐಪಿಎಲ್‌ನಲ್ಲಿ ಬಹುತೇಕ ಎಲ್ಲಾ ತಂಡಗಳ ವಿರುದ್ಧವೂ ಗೆಲುವಿನ ರುಚಿ ಕಂಡಿರುವ ಧೋನಿ ಹೆಸರಿನಲ್ಲಿ ಒಂದು ಅಚ್ಚರಿಯ ದಾಖಲೆ ಇದೆ. ಅದೇನೆಂದರೆ, ಐಪಿಎಲ್‌ನಲ್ಲಿ ನಾಯಕನಾಗಿ ಧೋನಿ ಒಂದೇ ಒಂದು ಪಂದ್ಯವನ್ನೂ ಗೆಲ್ಲದ ತಂಡವೊಂದಿದೆ!

ಆ ತಂಡ ಯಾವುದು ಗೊತ್ತಾ?

ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಎಂ.ಎಸ್. ಧೋನಿ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವಾಗದ ತಂಡ ಗುಜರಾತ್ ಲಯನ್ಸ್. 2016ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಧೋನಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅದೇ ವರ್ಷ ಸುರೇಶ್ ರೈನಾ ನಾಯಕತ್ವದಲ್ಲಿ ಗುಜರಾತ್ ಲಯನ್ಸ್ ತಂಡವೂ ಐಪಿಎಲ್‌ಗೆ ಪದಾರ್ಪಣೆ ಮಾಡಿತ್ತು. 2016ರ ಆವೃತ್ತಿಯಲ್ಲಿ ಧೋನಿ ನಾಯಕತ್ವದ ಪುಣೆ ತಂಡವು ಗುಜರಾತ್ ಲಯನ್ಸ್ ವಿರುದ್ಧ ಎರಡು ಬಾರಿ ಮುಖಾಮುಖಿಯಾಗಿತ್ತು. ಆದರೆ ಈ ಎರಡೂ ಪಂದ್ಯಗಳಲ್ಲೂ ಧೋನಿ ಪಡೆ ಸೋಲು ಕಂಡಿತ್ತು.

ಎರಡು ಪಂದ್ಯ, ಎರಡರಲ್ಲೂ ಸೋಲು

2016ರ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡ ಎರಡು ಪಂದ್ಯಗಳನ್ನಾಡಿತ್ತು. ಆದರೆ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 2017ರಲ್ಲಿ ಪುಣೆ ತಂಡದ ನಾಯಕತ್ವ ಸ್ಟೀವ್ ಸ್ಮಿತ್ ಅವರ ಕೈ ಸೇರಿತು. ಇತ್ತ 2018ರಲ್ಲಿ ಗುಜರಾತ್ ಲಯನ್ಸ್ ತಂಡ ಐಪಿಎಲ್‌ನಿಂದ ಹೊರಬಿತ್ತು. ಹೀಗಾಗಿ ಗುಜರಾತ್ ಲಯನ್ಸ್ ವಿರುದ್ಧ ನಾಯಕನಾಗಿ ಧೋನಿ ಆಡಿದ ಎರಡು ಪಂದ್ಯಗಳಲ್ಲೂ ಸೋಲು ಕಂಡ ದಾಖಲೆಯೇ ಉಳಿಯಿತು. ಅಂದರೆ, ಈ ತಂಡದ ವಿರುದ್ಧ ಧೋನಿಯ ಗೆಲುವಿನ ಖಾತೆ ತೆರೆಯಲೇ ಇಲ್ಲ.

10 ಸಿಕ್ಸರ್‌, 183 ರನ್..! 21 ವರ್ಷಗಳ ಹಿಂದೆ ಧೋನಿ ಅಬ್ಬರಕ್ಕೆ ಬೆಚ್ಚಿಬಿದ್ದಿತ್ತು ಶ್ರೀಲಂಕಾ

ಇತರ ತಂಡಗಳ ವಿರುದ್ಧ ಧೋನಿ ದಾಖಲೆ ಹೇಗಿದೆ?

ಗುಜರಾತ್ ಲಯನ್ಸ್ ಹೊರತುಪಡಿಸಿ ಐಪಿಎಲ್‌ನಲ್ಲಿ ಧೋನಿ ಬಹುತೇಕ ಎಲ್ಲಾ ತಂಡಗಳ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಮಾತ್ರ ಧೋನಿ ನಾಯಕತ್ವದ ತಂಡಕ್ಕೆ ಗೆಲುವಿಗಿಂತ ಸೋಲುಗಳೇ ಹೆಚ್ಚಾಗಿವೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ವಿರುದ್ಧ ಧೋನಿ ಹೆಚ್ಚಿನ ಗೆಲುವುಗಳನ್ನು ದಾಖಲಿಸಿದ್ದಾರೆ.

ಹೀಗೆ ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿರುವ ಧೋನಿ ಅವರ ಸುದೀರ್ಘ ನಾಯಕತ್ವದ ಪಯಣದಲ್ಲಿ, ಗುಜರಾತ್ ಲಯನ್ಸ್ ವಿರುದ್ಧದ ಈ ಎರಡು ಸೋಲುಗಳು ಮಾತ್ರ ವಿಶೇಷ ದಾಖಲೆಯಾಗಿ ಉಳಿದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು