VIDEO: ಮ್ಯಾಕ್ಸ್​ವೆಲ್​ನ ಹೊಸ ಶಾಟ್​ಗೆ ಏನೆಂದು ಹೆಸರಿಡಬಹುದು?

| Updated By: ಝಾಹಿರ್ ಯೂಸುಫ್

Updated on: Jan 03, 2024 | 3:00 PM

Glenn Maxwell: ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 32 ರನ್ ಬಾರಿಸುವ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ 12.1 ಓವರ್​ಗಳಲ್ಲಿ ಮೆಲ್ಬೋರ್ನ್​ ಸ್ಟಾರ್ಸ್ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.

VIDEO: ಮ್ಯಾಕ್ಸ್​ವೆಲ್​ನ ಹೊಸ ಶಾಟ್​ಗೆ ಏನೆಂದು ಹೆಸರಿಡಬಹುದು?
Glenn Maxwell
Follow us on

ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಸ್ವಿಚ್ ಹಿಟ್​ ಹಾಗೂ ರಿವರ್ಸ್​ ಸ್ವೀಪ್ ಶಾಟ್​​ಗಳ ಮೂಲಕ ಬೌಲರ್​ಗಳ ಬೆಂಡೆತ್ತಿರುವುದು ಎಲ್ಲರೂ ನೋಡಿರುತ್ತೀರಿ. ಇದೀಗ ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ ಮತ್ತೊಂದು ಹೊಸ ಬಗೆಯ ಶಾಟ್ ಮೂಡಿ ಬಂದಿದೆ.
ಬಿಗ್ ಬ್ಯಾಷ್​ ಲೀಗ್​ನಲ್ಲಿ ಮೆಲ್ಬೋರ್ನ್​ ಸ್ಟಾರ್ಸ್ ಪರ ಆಡುತ್ತಿರುವ ಮ್ಯಾಕ್ಸಿ ವಿಭಿನ್ನ ಶಾಟ್ ಬಾರಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕ ಗ್ಲೆನ್ ಮ್ಯಾಕ್ಸ್​ವೆಲ್ ಬೌಲಿಂಗ್ ಆಯ್ದುಕೊಂಡರು.

ಅದರಂತೆ ಮಳೆಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್​ ರೆನೆಗೇಡ್ಸ್ ತಂಡವು ನಿಗದಿತ 14 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 97 ರನ್ ಕಲೆಹಾಕಿತು.

98 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಮೆಲ್ಬೋರ್ನ್​ ಸ್ಟಾರ್ಸ್ ತಂಡಕ್ಕೆ ಆರಂಭಿಕ ಆಟಗಾರ ಥಾಮಸ್ ರೋಜರ್ಸ್ (46) ಉತ್ತಮ ಆರಂಭ ಒದಗಿಸಿದರು. ಆದರೆ ಡೇನಿಯಲ್ ಲಾರೆನ್ಸ್ (7) ಹಾಗೂ ವೆಬ್​ಸ್ಟರ್ (14) ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.

ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ ಬಿರುಸಿನ ಇನಿಂಗ್ಸ್​ ಆಡಿದರು. ಅದರಲ್ಲೂ 9ನೇ ಓವರ್​ನ 5ನೇ ಎಸೆತದಲ್ಲಿ ಮ್ಯಾಕ್ಸಿ ಬಾರಿಸಿದ ವಿಭಿನ್ನ ಶಾಟ್ ಎಲ್ಲರ ಗಮನ ಸೆಳೆಯಿತು. ಏಕೆಂದರೆ ಅತ್ತ ಈ ಶಾಟ್ ಸ್ಕೂಪ್ ಅಲ್ಲ. ಇತ್ತ ರಿವರ್ಸ್ ಸ್ವೀಪ್ ಕೂಡ ಅಲ್ಲ.

ಅಂದರೆ ರಿವರ್ಸ್ ಸ್ವೀಪ್ ಹಾಗೂ ಸ್ಕೂಪ್ ಶಾಟ್​ ಮಿಕ್ಸ್​ ಮಾಡಿದಂತಿರುವ ಹೊಸ ಹೊಡೆತದ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ಥರ್ಡ್​ಮ್ಯಾನ್ ಬೌಂಡರಿಯತ್ತ ಫೋರ್ ಬಾರಿಸಿದ್ದಾರೆ. ಇದರೊಂದಿಗೆ ಮ್ಯಾಕ್ಸ್​ವೆಲ್ ಬಾರಿಸಿದ ಹೊಸ ಶಾಟ್​ನ ಹೆಸರೇನು ಎಂಬ ಚರ್ಚೆಗಳು ಶುರುವಾಗಿದೆ. ಇದೀಗ ಗ್ಲೆನ್ ಮ್ಯಾಕ್ಸ್​ವೆಲ್ ಸಿಡಿಸಿದ ವಿಭಿನ್ನ ಶಾಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 32 ರನ್ ಬಾರಿಸುವ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ 12.1 ಓವರ್​ಗಳಲ್ಲಿ ಮೆಲ್ಬೋರ್ನ್​ ಸ್ಟಾರ್ಸ್ ತಂಡವನ್ನು ಗುರಿ ಮುಟ್ಟಿಸಿದರು.

ಮೆಲ್ಬೋರ್ನ್​ ಸ್ಟಾರ್ಸ್​ ಪ್ಲೇಯಿಂಗ್ 11: ಥಾಮಸ್ ರೋಜರ್ಸ್ , ಡೇನಿಯಲ್ ಲಾರೆನ್ಸ್ , ಬ್ಯೂ ವೆಬ್‌ಸ್ಟರ್ , ಗ್ಲೆನ್ ಮ್ಯಾಕ್ಸ್‌ವೆಲ್ (ನಾಯಕ) , ಮಾರ್ಕಸ್ ಸ್ಟೊಯಿನಿಸ್ , ಸ್ಯಾಮ್ ಹಾರ್ಪರ್ (ವಿಕೆಟ್ ಕೀಪರ್) , ಹಿಲ್ಟನ್ ಕಾರ್ಟ್‌ರೈಟ್ , ಇಮಾದ್ ವಾಸಿಮ್ , ಜೊನಾಥನ್ ಮೆರ್ಲೋ , ಜೋಯಲ್ ಪ್ಯಾರಿಸ್ , ಮಾರ್ಕ್ ಸ್ಟೆಕ್ಟೀ.

ಇದನ್ನೂ ಓದಿ: IPL 2024: RCB ತಂಡದ ನಾಯಕತ್ವದಲ್ಲಿ ಮತ್ತೆ ಬದಲಾವಣೆ..?

ಮೆಲ್ಬೋರ್ನ್​ ರೆನೆಗೇಡ್ಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಜೋರ್ಡಾನ್ ಕಾಕ್ಸ್ , ಜೇಕ್ ಫ್ರೇಸರ್-ಮೆಕ್‌ಗುರ್ಕ್ , ಶಾನ್ ಮಾರ್ಷ್ , ಜೊನಾಥನ್ ವೆಲ್ಸ್ , ಮೆಕೆಂಜಿ ಹಾರ್ವೆ , ವಿಲ್ ಸದರ್ಲ್ಯಾಂಡ್ (ನಾಯಕ) , ಟಾಮ್ ರೋಜರ್ಸ್ , ಆಡಮ್ ಝಂಪಾ , ಪೀಟರ್ ಸಿಡ್ಲ್ , ಕೇನ್ ರಿಚರ್ಡ್ಸನ್.