IPL 2024: RCB ತಂಡವನ್ನು ನಂಬಿ ಕೆಟ್ಟ ಯುವ ಸ್ಪೋಟಕ ಬ್ಯಾಟರ್..!
IPL 2024 RCB: ಈ ಬಾರಿಯ ಐಪಿಎಲ್ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 6 ಆಟಗಾರರನ್ನು ಖರೀದಿಸಿದೆ. ಇದಕ್ಕೂ ಮುನ್ನ ಒಟ್ಟು 19 ಆಟಗಾರರನ್ನು ಉಳಿಸಿಕೊಂಡಿತ್ತು. ಅದರಂತೆ ಇದೀಗ ಆರ್ಸಿಬಿ ಫ್ರಾಂಚೈಸಿಯು 25 ಸದಸ್ಯರ ಬಲಿಷ್ಠ ತಂಡವನ್ನು ರೂಪಿಸಿದೆ.
Updated on:Dec 30, 2023 | 3:25 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರ ಆಕ್ಷನ್ನಲ್ಲಿ ಒಟ್ಟು 72 ಆಟಗಾರರು ಹರಾಜಾಗಿದ್ದರು. ಅತ್ತ ಹರಾಜಾಗದೇ ಉಳಿದ ಆಟಗಾರರ ಸಂಖ್ಯೆ 261. ಹೀಗೆ ಅನ್ಸೋಲ್ಡ್ ಪ್ಲೇಯರ್ಸ್ ಪಟ್ಟಿಯಲ್ಲಿರುವ ಆಟಗಾರರಲ್ಲಿ ಫಿನ್ ಅಲೆನ್ ಕೂಡ ಒಬ್ಬರು.

ನ್ಯೂಝಿಲೆಂಡ್ ತಂಡದ ಯುವ ಆರಂಭಿಕ ಆಟಗಾರ ಫಿನ್ ಅಲೆನ್ ಈ ಬಾರಿಯ ಹರಾಜಿನಲ್ಲಿ ಕೇವಲ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದೆ ಬಂದಿರಲಿಲ್ಲ. ಅದರಲ್ಲೂ ಯುವ ಆಟಗಾರನನ್ನು ಬೇಸ್ ಪ್ರೈಸ್ಗೆ ಖರೀದಿಸಲು ಆರ್ಸಿಬಿ ಕೂಡ ಹಿಂದೇಟು ಹಾಕಿದ್ದು ಅಚ್ಚರಿ.

ಏಕೆಂದರೆ ಫಿನ್ ಅಲೆನ್ ಕಳೆದ ಮೂರು ಸೀಸನ್ಗಳಿಂದ ಆರ್ಸಿಬಿ ತಂಡದ ಸದಸ್ಯರಾಗಿದ್ದರು. ಈ ಮೂರು ವರ್ಷಗಳಲ್ಲಿ ಆರ್ಸಿಬಿ ಒಟ್ಟು 45 ಪಂದ್ಯಗಳನ್ನಾಡಿದೆ. ಈ ವೇಳೆ ಒಮ್ಮೆಯೂ ಅಲೆನ್ ಅವರನ್ನು ಕಣಕ್ಕಿಳಿಸಿಲ್ಲ. ಅಂದರೆ ಮೂರು ವರ್ಷಗಳಿಂದ ಫಿನ್ ಅಲೆನ್ ಆರ್ಸಿಬಿ ಪರ ಬೆಂಚ್ ಕಾದಿದ್ದರು.

ಪ್ರತಿ ಸೀಸನ್ನಲ್ಲೂ ಆರ್ಸಿಬಿ ಪರ ಕಣಕ್ಕಿಳಿಯುವ ನಿರೀಕ್ಷೆಯೊಂದಿಗೆ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಫಿನ್ ಅಲೆನ್ ಅವರನ್ನು ಈ ಬಾರಿಯ ಹರಾಜಿಗೂ ಮುನ್ನ ಕೈ ಬಿಡಲಾಗಿತ್ತು. ಅತ್ತ ಮೂರು ವರ್ಷಗಳಿಂದ ಐಪಿಎಲ್ ಆಟಗಾರ ಎಂದು ಗುರುತಿಸಿಕೊಂಡಿದ್ದರೂ ಅಲೆನ್ ಖಾತೆಯಲ್ಲಿ ಒಂದೇ ಒಂದು ರನ್ ಕೂಡ ಇರಲಿಲ್ಲ.

ಹೀಗಾಗಿಯೇ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿದ್ದರೂ ಫಿನ್ ಅಲೆನ್ ಈ ಬಾರಿ ಹರಾಜಾಗದೇ ಉಳಿದಿದ್ದಾರೆ ಎನ್ನಬಹುದು. ಏಕೆಂದರೆ ನ್ಯೂಝಿಲೆಂಡ್ ಪರ ಯುವ ದಾಂಡಿಗ ಸ್ಪೋಟಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಆದರೆ ಐಪಿಎಲ್ನಲ್ಲಿ ತನ್ನ ಸಾಮರ್ಥ್ಯವನ್ನು ತೆರೆದಿಡಲು ಆರ್ಸಿಬಿ ಅವಕಾಶವೇ ನೀಡಲಿಲ್ಲ.

ಪರಿಣಾಮ ಮೂರು ವರ್ಷಗಳ ಕಾಲ ಆರ್ಸಿಬಿಯನ್ನೇ ನಂಬಿ ಕೂತಿದ್ದ ಫಿನ್ ಅಲೆನ್ ಇದೀಗ ಸೀಸನ್-17 ರಿಂದ ಹೊರಬಿದ್ದಿದ್ದಾರೆ. ಅದು ಕೂಡ ಐಪಿಎಲ್ಗೆ ಪಾದಾರ್ಪಣೆ ಮಾಡದೇ ಎಂಬುದೇ ವಿಶೇಷ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.
Published On - 3:22 pm, Sat, 30 December 23
























