ಫ್ಲೈಯಿಂಗ್ ಫಿಲಿಪ್ಸ್… ಇದಪ್ಪ ಕ್ಯಾಚ್ ಅಂದ್ರೆ..!

|

Updated on: Nov 30, 2024 | 11:56 AM

New Zealand vs England: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 348 ರನ್ ಕಲೆಹಾಕಿದರೆ, ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​​ನಲ್ಲಿ 499 ರನ್ ಪೇರಿಸಿದೆ.  ಇದೀಗ ದ್ವಿತೀಯ ಇನಿಂಗ್ಸ್ ಆಡುತ್ತಿರುವ ನ್ಯೂಝಿಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 155 ರನ್​ಗಳಿಸಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದು ಗ್ಲೆನ್ ಫಿಲಿಪ್ಸ್ ಎಲ್ಲರನ್ನು ನಿಬ್ಬೆರಗಾಗಿದ್ದಾರೆ. ಕ್ರೈಸ್ಟ್ ಚರ್ಸ್​​ನ ಹ್ಯಾಗ್ಲಿ  ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್​​ನಲ್ಲಿ 348 ರನ್ ಕಲೆಹಾಕಿದೆ.

ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಒಲೀ ಪೋಪ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಎಚ್ಚರಿಕೆಯ ಬ್ಯಾಟಿಂಗ್​​ನೊಂದಿಗೆ ಇನಿಂಗ್ಸ್ ಕಟ್ಟಿದ ಪೋಪ್ 77 ರನ್ ಬಾರಿಸಿದ್ದರು. ಆದರೆ ಗ್ಲೆನ್ ಫಿಲಿಪ್ಸ್ ಅವರ ಅತ್ಯದ್ಭುತ ಫೀಲ್ಡಿಂಗ್​​​ನಿಂದಾಗಿ ಪೋಪ್ ಹೊರನಡೆಯಲೇಬೇಕಾಯಿತು.

ಟಿಮ್ ಸೌಥಿ ಎಸೆದ 53ನೇ ಓವರ್​​ನ 2ನೇ ಎಸೆತದಲ್ಲಿ ಒಲೀ ಪೋಪ್ ಕಟ್ ಶಾಟ್ ಬಾರಿಸಿದ್ದರು. ಆದರೆ ಅತ್ತ ಸ್ಲಿಪ್-ಗಲ್ಲಿ ನಡುವೆ ಫೀಲ್ಡಿಂಗ್​​ನಲ್ಲಿದ್ದ ಗ್ಲೆನ್ ಫಿಲಿಪ್ಸ್ ಚಕ್ಕನೆ ಜಿಗಿದು ಅದ್ಭುತವಾಗಿ ಚೆಂಡನ್ನು ಹಿಡಿದರು. ಈ ಅತ್ಯದ್ಭುತ ಕ್ಯಾಚ್ ನೋಡಿ ಸಹ ಆಟಗಾರರು, ಪ್ರೇಕ್ಷಕರು ನಿಬ್ಬೆರಗಾದರು. ಇದೀಗ ಗ್ಲೆನ್ ಫಿಲಿಪ್ಸ್ ಹಿಡಿದ ಈ ಅತ್ಯುತ್ತಮ ಕ್ಯಾಚ್ ಅನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದ ಬೆಸ್ಟ್ ಕ್ಯಾಚ್​​ಗಳಲ್ಲಿ ಒಂದು ಎಂದು ಬಣ್ಣಿಸಲಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 348 ರನ್ ಕಲೆಹಾಕಿದರೆ, ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​​ನಲ್ಲಿ 499 ರನ್ ಪೇರಿಸಿದೆ.  ಇದೀಗ ದ್ವಿತೀಯ ಇನಿಂಗ್ಸ್ ಆಡುತ್ತಿರುವ ನ್ಯೂಝಿಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 155 ರನ್​ಗಳಿಸಿದೆ.

Published on: Nov 30, 2024 11:55 AM