AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs NZ: 18 ವರ್ಷಗಳ ನಂತರ ಕಿವೀಸ್ ತಂಡದಿಂದ ಸಿಡಿಯಿತು ಅಪರೂಪದ ಶತಕ

Glenn Phillips' Historic No. 7 Test Century: ದಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. 18 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ 7ನೇ ಕ್ರಮಾಂಕದಲ್ಲಿ ಶತಕ ಬಾರಿಸಿದ ಕಿವೀಸ್ ಬ್ಯಾಟ್ಸ್‌ಮನ್ ಎಂಬ ದಾಖಲೆ ಅವರದ್ದು. 188ಕ್ಕೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದು, 391 ರನ್ ಗಳಿಸಲು ನೆರವಾಗಿ, ತಂಡಕ್ಕೆ ಬೃಹತ್ ಮೊತ್ತ ನೀಡಿದರು. ಈ ಇನ್ನಿಂಗ್ಸ್ ನ್ಯೂಜಿಲೆಂಡ್‌ಗೆ ನಿರ್ಣಾಯಕವಾಗಿದೆ.

ENG vs NZ: 18 ವರ್ಷಗಳ ನಂತರ ಕಿವೀಸ್ ತಂಡದಿಂದ ಸಿಡಿಯಿತು ಅಪರೂಪದ ಶತಕ
Glenn Phillips
ಪೃಥ್ವಿಶಂಕರ
|

Updated on:Jun 18, 2026 | 7:00 PM

Share

ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ (New Zealand vs England) ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ದಿ ಓವಲ್​ನಲ್ಲಿ ನಡೆಯುತ್ತಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ನ್ಯೂಜಿಲೆಂಡ್ ತಂಡ, ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 391 ರನ್ ಕಲೆಹಾಕಿದೆ. ಒಂದು ಹಂತದಲ್ಲಿ ನ್ಯೂಜಿಲೆಂಡ್ ತಂಡ 188 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಆ ನಂತರ, 7 ನೇ ಕ್ರಮಾಂಕದಲ್ಲಿ ಬಂದ ಗ್ಲೆನ್ ಫಿಲಿಪ್ಸ್ (Glenn Phillips) ಅದ್ಭುತ ಶತಕ ಬಾರಿಸುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕರೆದೊಯ್ದರು. ಮಾತ್ರವಲ್ಲದೆ ನ್ಯೂಜಿಲೆಂಡ್‌ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 18 ವರ್ಷಗಳ ನಂತರ ಅಪರೂಪದ ದಾಖಲೆಯನ್ನು ನಿರ್ಮಿಸಿದರು.

7ನೇ ಕ್ರಮಾಂಕದಲ್ಲಿ ಬಂದು ಶತಕ ಬಾರಿಸಿದ ಫಿಲಿಪ್ಸ್

ಗ್ಲೆನ್ ಫಿಲಿಪ್ಸ್ ಅವರ ಈ ಶತಕ ಎರಡು ಕಾರಣಗಳಿಗಾಗಿ ವಿಶೇಷವಾಗಿದೆ. ಮೊದಲನೆಯದಾಗಿ, ಇದು ಅವರ ಮೊದಲ ಟೆಸ್ಟ್ ಶತಕವಾಗಿದೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 133 ಎಸೆತಗಳನ್ನು ಎದುರಿಸಿದ ಫಿಲಿಪ್ಸ್ 18 ಬೌಂಡರಿಗಳನ್ನು ಬಾರಿಸಿದರು. ಇದಲ್ಲದೆ, 18 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು.

ಇದಕ್ಕೂ ಮೊದಲು ಅಂದರೆ 2008 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಜಾಕೋಬ್ ಓರಾಮ್ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ನಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಕೇವಲ ನಾಲ್ಕು ಕಿವೀಸ್ ಬ್ಯಾಟ್ಸ್‌ಮನ್‌ಗಳು ಮಾತ್ರ ಟೆಸ್ಟ್ ಶತಕ ಬಾರಿಸಿದ್ದಾರೆ. 1973 ರಲ್ಲಿ ವಿಕ್ ಪೊಲಾರ್ಡ್, 1986 ರಲ್ಲಿ ಜಾನ್ ಬ್ರೇಸ್‌ವೆಲ್, 2008 ರಲ್ಲಿ ಜಾಕೋಬ್ ಓರಾಮ್ ಮತ್ತು ಈಗ 2026 ರಲ್ಲಿ ಗ್ಲೆನ್ ಫಿಲಿಪ್ಸ್ 7ನೇ ಕ್ರಮಾಂಕದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದಾರೆ.

ಬೆನ್ ಸ್ಟೋಕ್ಸ್​ಗೆ ಗೇಟ್​ ಪಾಸ್; 4 ವರ್ಷಗಳ ಬಳಿಕ ಜೋ ರೂಟ್​ಗೆ ಟೆಸ್ಟ್ ನಾಯಕತ್ವ

ಫಿಲಿಪ್ಸ್​ಗೆ ನೆರವಾದ ಬಾಲಂಗೋಚಿಗಳು

ಡ್ಯಾರಿಲ್ ಮಿಚೆಲ್ ಔಟಾದ ನಂತರ ಕ್ರೀಸ್‌ಗೆ ಬಂದ ಗ್ಲೆನ್ ಫಿಲಿಪ್ಸ್, ಬ್ಲಂಡೆಲ್ ಅವರೊಂದಿಗೆ ಕೇವಲ 52 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟವನ್ನಾಡಿದರು. ಇದರಲ್ಲಿ ಫಿಲಿಪ್ಸ್ 36 ರನ್‌ಗಳ ಕೊಡುಗೆ ನೀಡಿದರು. ಫಿಲಿಪ್ಸ್ ಮತ್ತು ಬ್ಲಂಡೆಲ್ 90 ಎಸೆತಗಳಲ್ಲಿ 75 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಬ್ಲಂಡೆಲ್ ಔಟಾದ ನಂತರ ಫಿಲಿಪ್ಸ್, ಜೇಮಿಸನ್ ಅವರೊಂದಿಗೆ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಹಾಗೆಯೇ ಟೆಸ್ಟ್‌ ಪಂದ್ಯದ ಎರಡನೇ ದಿನದಂದು 82 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಫಿಲಿಪ್ಸ್, ಕೈಲ್ ಜೇಮಿಸನ್ ಅವರೊಂದಿಗೆ ಕೇವಲ 96 ಎಸೆತಗಳಲ್ಲಿ 87 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Thu, 18 June 26

Follow Us