ಸೆಮಿಫೈನಲ್​ನಲ್ಲೂ ಬೌಲಿಂಗ್ ಮಾಡಲಿದ್ದಾರೆ ವಿರಾಟ್ ಕೊಹ್ಲಿ..!

| Updated By: ಝಾಹಿರ್ ಯೂಸುಫ್

Updated on: Nov 13, 2023 | 10:56 PM

Virat Kohli: ನೆದರ್​ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಮೂರು ಓವರ್ ಬೌಲಿಂಗ್ ಮಾಡಿದ್ದ ಕೊಹ್ಲಿ 13 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಇದೀಗ ಇದೇ ತಂತ್ರವನ್ನು ನ್ಯೂಝಿಲೆಂಡ್ ವಿರುದ್ಧ ಕೂಡ ಪ್ರಯೋಗಿಸಲು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಪ್ಲ್ಯಾನ್ ರೂಪಸಿದ್ದಾರೆ.

ಸೆಮಿಫೈನಲ್​ನಲ್ಲೂ ಬೌಲಿಂಗ್ ಮಾಡಲಿದ್ದಾರೆ ವಿರಾಟ್ ಕೊಹ್ಲಿ..!
Virat Kohli
Follow us on

ಏಕದಿನ ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯಕ್ಕಾಗಿ ಕೌಂಟ್ ಶುರುವಾಗಿದೆ. ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್​ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಕಣಕ್ಕಿಳಿಯಲಿದೆ. ಈ ನಿರ್ಣಾಯಕ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಲಿದ್ದಾರೆ ಎಂದು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಖಚಿತ ಪಡಿಸಿದ್ದಾರೆ.

ನೆದರ್​ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಮೂರು ಓವರ್ ಬೌಲಿಂಗ್ ಮಾಡಿದ್ದ ಕೊಹ್ಲಿ 13 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಇದೀಗ ಇದೇ ತಂತ್ರವನ್ನು ನ್ಯೂಝಿಲೆಂಡ್ ವಿರುದ್ಧ ಕೂಡ ಪ್ರಯೋಗಿಸಲು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಪ್ಲ್ಯಾನ್ ರೂಪಸಿದ್ದಾರೆ.

ವಿರಾಟ್ ಕೊಹ್ಲಿಯ ಬೌಲಿಂಗ್ ಅನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ಎಂಬುದರ ಕುರಿತು ನಾನು ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದೇನೆ. ಕೊಹ್ಲಿ ಹೊಸ ಚೆಂಡಿನೊಂದಿಗೆ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಪವರ್​ಪ್ಲೇನಲ್ಲೇ ಬೌಲಿಂಗ್ ಮಾಡಿಸಬಹುದು.

ಏಕೆಂದರೆ ವಿರಾಟ್ ಕೊಹ್ಲಿಗೆ ಮಧ್ಯಮ ಓವರ್‌ಗಳೇ ದೊಡ್ಡ ಸವಾಲು. ಇದಾಗ್ಯೂ ಅವರು ನೆದರ್​ಲೆಂಡ್ಸ್​ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ನಾವು ಡೆತ್ ಓವರ್‌ಗಳಲ್ಲಿಯೂ ಅವರಿಗೆ ಅವಕಾಶ ನೀಡಬಹುದು. ಹೀಗಾಗಿ ಅಂತಹ ಪರಿಸ್ಥಿತಿ ಎದುರಾದರೆ ಖಂಡಿತವಾಗಿಯೂ ಕಿಂಗ್ ಕೊಹ್ಲಿ ಸೆಮಿಫೈನಲ್​ನಲ್ಲೂ ಬೌಲಿಂಗ್ ಮಾಡಲಿದ್ದಾರೆ ಎಂದು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 5 ವಿಕೆಟ್ ಪಡೆದಿದ್ದಾರೆ. ಹಾಗೆಯೇ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ವಿಕೆಟ್ ಪಡೆಯುವ ಮೂಲಕ ವಿಶ್ವಕಪ್​ನಲ್ಲೂ ವಿಕೆಟ್ ಖಾತೆ ತೆರೆದಿದ್ದಾರೆ.

ಇದೀಗ ನ್ಯೂಝಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ವಿರಾಟ್ ಕೊಹ್ಲಿಯನ್ನು ಹೆಚ್ಚುವರಿ ಬೌಲರ್​ ಆಗಿ ಬಳಸಿಕೊಳ್ಳಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕಿಂಗ್ ಕೊಹ್ಲಿ ಮೀಡಿಯಂ ಫಾಸ್ಟ್​ ಬೌಲಿಂಗ್​ನಲ್ಲಿ ಮೋಡಿ ಮಾಡಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: Virat Kohli: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.