GT vs PBKS Highlights IPL 2023: ಮತ್ತೆ ಮ್ಯಾಚ್ ಗೆಲ್ಲಿಸಿದ ತೇವಾಟಿಯಾ; ಪಂಜಾಬ್​ಗೆ ಸೋಲು

Gujarat Titans vs Punjab Kings IPL 2023 Highlights in Kannada: ತವರಿನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡ ಈ ಐಪಿಎಲ್​ನಲ್ಲಿ ಮೂರನೇ ಗೆಲುವು ದಾಖಲಿಸಿದೆ.

GT vs PBKS Highlights IPL 2023:  ಮತ್ತೆ ಮ್ಯಾಚ್ ಗೆಲ್ಲಿಸಿದ ತೇವಾಟಿಯಾ; ಪಂಜಾಬ್​ಗೆ ಸೋಲು
ಗುಜರಾತ್- ಪಂಜಾಬ್ ಮುಖಾಮುಖಿ

Updated on: Apr 13, 2023 | 11:27 PM

ತವರಿನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡ ಈ ಐಪಿಎಲ್​ನಲ್ಲಿ ಮೂರನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಗುಜರಾತ್‌ಗೆ 154 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್, ಇನ್ನೊಂದು ಎಸೆತ ಬಾಕಿ ಇರುವಂತೆ 4 ವಿಕೆಟ್‌ ಕಳೆದುಕೊಂಡು ಗುರಿ ಸಾಧಿಸಿತು. ಗುಜರಾತ್ ಪರ ಬೌಲಿಂಗ್​ನಲ್ಲಿ ಮೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದರೆ, ನಂತರ ಶುಭ್​ಮನ್ ಗಿಲ್ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು.

LIVE NEWS & UPDATES

The liveblog has ended.
  • 13 Apr 2023 11:23 PM (IST)

    ಮತ್ತೆ ಮ್ಯಾಚ್ ಗೆಲ್ಲಿಸಿದ ತೇವಾಟಿಯಾ

    ಕಳೆದ ಆವೃತ್ತಿಯಲ್ಲಿ ಇದೇ ಪಂಜಾಬ್ ವಿರುದ್ಧ ಕೊನೆಯ ಎರಡು ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ, ಗುಜರಾತ್​ಗೆ ಗೆಲುವು ತಂದುಕೊಟ್ಟಿದ್ದ ತೇವಾಟಿಯಾ, ಈ ಪಂದ್ಯದಲ್ಲೂ ಕೊನೆಯ ಓವರ್​ನ 5ನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.

  • 13 Apr 2023 11:21 PM (IST)

    ಗಿಲ್ ಔಟ್

    ಗಿಲ್ 67 ರನ್ ಗಳಿಸಿ ಔಟಾದರು, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಸ್ಯಾಮ್ ಕರನ್ ಅಂತಿಮ ಓವರ್‌ನ ರೋಚಕತೆಯನ್ನು ಹೆಚ್ಚಿಸಿದ್ದಾರೆ.

  • 13 Apr 2023 11:07 PM (IST)

    ಗಿಲ್ ಸಿಕ್ಸರ್

    ರಬಾಡ ಎಸೆದ 18ನೇ ಓವರ್​ನಲ್ಲಿ ಗಿಲ್ 1 ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ ಮಿಲ್ಲರ್ ಬೌಂಡರಿ ಬಾರಿಸಿದರು. ಗುಜರಾತ್ ಗೆಲುವಿಗೆ 12 ಎಸೆತಗಳಲ್ಲಿ 13 ರನ್ ಬೇಕಿದೆ.

  • 13 Apr 2023 11:03 PM (IST)

    ಗಿಲ್ ಅರ್ಧಶತಕ

    ಶುಭಮನ್ ಗಿಲ್ ತಮ್ಮ ಐಪಿಎಲ್ ವೃತ್ತಿಜೀವನದ 16ನೇ ಅರ್ಧಶತಕ ಬಾರಿಸಿದ್ದಾರೆ. 16ನೇ ಓವರ್‌ನಲ್ಲಿ ರಾಹುಲ್ ಚಾಹರ್ ಅವರ ಚೆಂಡನ್ನು ಕವರ್‌ ಮೇಲೆ ಆಡುವ ಮೂಲಕ ಅವರು 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಗುಜರಾತ್ ಟೈಟಾನ್ಸ್ 16 ಓವರ್‌ಗಳಲ್ಲಿ 120/3 ಸ್ಕೋರ್ ಮಾಡಿದೆ.

  • 13 Apr 2023 10:52 PM (IST)

    ಪಾಂಡ್ಯ ಕೂಡ ಔಟ್

    ಗುಜರಾತ್​ನ ಮೂರನೇ ವಿಕೆಟ್ ಕೂಡ ಪತನಗೊಂಡಿದೆ. ಹಾರ್ದಿಕ್ ಪಾಂಡ್ಯ 8 ರನ್​ಗಳಿಸಿ ಔಟಾದರು. ಸದ್ಯ ಗುಜರಾತ್ ಗೆಲುವಿಗೆ 30 ಎಸೆತಗಳಲ್ಲಿ 43 ರನ್ ಅಗತ್ಯವಿದೆ.

  • 13 Apr 2023 10:49 PM (IST)

    ಗುಜರಾತ್ ಶತಕ ಪೂರ್ಣ

    ರಬಾಡ ಎಸೆದ 14ನೇ ಓವರ್​ನಲ್ಲಿ ಲೆಗ್ ಬೈ ಮೂಲಕ ಬೌಂಡರಿ ಬಂತು ಇದರೊಂದಿಗೆ ಗುಜರಾತ್ ಶತಕ ಕೂಡ ಪೂರ್ಣಗೊಳಿಸಿತು. ಇದೇ ಓವರ್​ನ ಅಂತಿಮ ಎಸೆತದಲ್ಲಿ ಹಾರ್ದಿಕ್ ಬೌಂಡರಿ ಬಾರಿಸಿದರು.

  • 13 Apr 2023 10:41 PM (IST)

    ಸುದರ್ಶನ್ ಔಟ್

    ಪಂಜಾಬ್ ಕಿಂಗ್ಸ್‌ಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ಸಾಯಿ ಸುದರ್ಶನ್, ಅರ್ಷದೀಪ್ ಅವರ ಓವರ್‌ನಲ್ಲಿ 19 ರನ್ ಗಳಿಸಿ ಔಟಾದರು. ಗುಜರಾತ್ ಟೈಟಾನ್ಸ್ ಸ್ಕೋರ್ 11.3 ಓವರ್‌ಗಳಲ್ಲಿ 89/2

  • 13 Apr 2023 10:33 PM (IST)

    ಸುದರ್ಶನ್ ಫೋರ್

    ಶಾರ್ಟ್​ ಬೌಲ್ ಮಾಡಿದ್ದ 11ನೇ ಓವರ್​ನ 3ನೇ ಎಸೆತವನ್ನು ಸ್ಟ್ರೈಟ್ ಹಿಟ್ ಮಾಡಿದ ಸುದರ್ಶನ್ ಬೌಂಡರಿ ಪಡೆದರು. ಗಿಲ್ 38 ಮತ್ತು ಸಾಯಿ ಸುದರ್ಶನ್ 19 ರನ್‌ಗಳಿಸಿ ಆಡುತ್ತಿದ್ದಾರೆ.

  • 13 Apr 2023 10:22 PM (IST)

    2 ಬೌಂಡರಿ

    2 ಓವರ್​ಗಳ ನಂತರ ಅಂದರೆ 9ನೇ ಓವರ್​ನಲ್ಲಿ 2 ಬೌಂಡರಿ ಬಂದವು. ಈ ಬೌಂಡರಿಗಳನ್ನು ಗಿಲ್ ಬಾರಿಸಿದರು. ಶುಭಮನ್ ಗಿಲ್ 35 ಮತ್ತು ಸಾಯಿ ಸುದರ್ಶನ್ 12 ರನ್‌ಗಳಿಸಿ ಆಡುತ್ತಿದ್ದಾರೆ.

  • 13 Apr 2023 10:22 PM (IST)

    7 ಓವರ್‌ ಮುಕ್ತಾಯ

    ಶುಭಮನ್ ಗಿಲ್ 22 ಮತ್ತು ಸಾಯಿ ಸುದರ್ಶನ್ 8 ರನ್‌ ಗಳಿಸಿ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಗುಜರಾತ್ ಟೈಟಾನ್ಸ್ ಸ್ಕೋರ್ 61/1

  • 13 Apr 2023 10:12 PM (IST)

    ಪವರ್ ಪ್ಲೇ ಅಂತ್ಯ

    ಗುಜರಾತ್ ತಂಡದ ಪವರ್ ಪ್ಲೇ ಅಂತ್ಯವಾಗಿದೆ. ಈ 6 ಓವರ್​ಗಳಲ್ಲಿ ಪಾಂಡ್ಯ ಪಡೆ 1 ವಿಕೆಟ್ ಕಳೆದುಕೊಂಡು 56 ರನ್ ಗಳಿಸಿದೆ.

  • 13 Apr 2023 10:10 PM (IST)

    ಮೊದಲ ವಿಕೆಟ್ ಪತನ

    ಗುಜರಾತ್ ಟೈಟಾನ್ಸ್‌ನ ಮೊದಲ ವಿಕೆಟ್ ಪತನಗೊಂಡಿದ್ದು, ವೃದ್ಧಿಮಾನ್ ಸಹಾ 30 ರನ್ ಗಳಿಸಿ ಔಟಾದರು. ಈ ವಿಕೆಟ್​ನೊಂದಿಗೆ ರಬಾಡ ಐಪಿಎಲ್‌ನಲ್ಲಿ 100 ನೇ ವಿಕೆಟ್ ಪಡೆದ ದಾಖಲೆ ಬರೆದರು. 5 ಓವರ್‌ಗಳ ನಂತರ ಗುಜರಾತ್ ಟೈಟಾನ್ಸ್ ಸ್ಕೋರ್ 52/1

  • 13 Apr 2023 10:09 PM (IST)

    4 ಓವರ್ ಅಂತ್ಯ

    ಶುಭಮನ್ ಗಿಲ್ 17 ಮತ್ತು ಸಹಾ 26 ರನ್ ಗಳಿಸಿ ಆಡುತ್ತಿದ್ದಾರೆ. 4ನೇ ಓವರ್‌ನಲ್ಲಿ 1 ಬೌಂಡರಿ ಕೂಡ ಬಂತು.4 ಓವರ್‌ಗಳ ನಂತರ ಗುಜರಾತ್ ಟೈಟಾನ್ಸ್ ಸ್ಕೋರ್ 43/0

  • 13 Apr 2023 09:56 PM (IST)

    ಸಹಾ 4 ಬೌಂಡರಿ

    ಅರ್ಷದೀಪ್ ಎಸೆದ 4ನೇ ಓವರ್​ನಲ್ಲಿ ಬರೋಬ್ಬರಿ 4 ಬೌಂಡರಿ ಬಿಟ್ಟುಕೊಟ್ಟರು. ಈ ಓವರ್​ನಲ್ಲಿ 4 ಬೌಂಡರಿ ಭಾರಿಸಿದ ಸಹಾ 3ನೇ ಎಸೆತದಲ್ಲಿ ಡಬಲ್ ರನ್ ಕೂಡ ಕದ್ದರು.

  • 13 Apr 2023 09:54 PM (IST)

    ಗಿಲ್ ಬೌಂಡರಿ

    ಶುಭಮನ್ ಗಿಲ್ 11 ಮತ್ತು ಸಹಾ 6 ರನ್‌ಗಳಿಸಿ ಆಡುತ್ತಿದ್ದಾರೆ. ಮೊದಲ 2 ಓವರ್‌ಗಳಲ್ಲಿ 3 ಬೌಂಡರಿಗಳು ಬಂದವು. 2 ಓವರ್‌ಗಳ ನಂತರ ಗುಜರಾತ್ ಟೈಟಾನ್ಸ್ ಸ್ಕೋರ್ 18/0

  • 13 Apr 2023 09:53 PM (IST)

    ಗುಜರಾತ್ ರನ್ ಚೇಸ್ ಆರಂಭ

    ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಗುಜರಾತ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಓವರ್‌ನಲ್ಲಿ, ಅರ್ಷದೀಪ್ ಸಿಂಗ್ ಅವರ ಎರಡನೇ ಎಸೆತದಲ್ಲಿ ಶುಭಮನ್ ಅತ್ಯುತ್ತಮ ಬೌಂಡರಿ ಬಾರಿಸಿದರು.

  • 13 Apr 2023 09:25 PM (IST)

    154 ರನ್ ಟಾರ್ಗೆಟ್

    ನಿಗಧಿತ 20 ಓವರ್​ಗಳಲ್ಲಿ ಪಂಜಾಬ್ ತಂಡ 8 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿದೆ. 20 ನೇ ಓವರ್​ನಲ್ಲಿ ಬ್ರಾರ್ ಲಾಂಗ್​ ಆಫ್​ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು.

  • 13 Apr 2023 09:21 PM (IST)

    ಆರನೇ ವಿಕೆಟ್

    ಗುಜರಾತ್ ಪರ ಮೊದಲ ಪಂದ್ಯವನ್ನಾಡುತ್ತಿರುವ ಮೋಹಿತ್ ಶರ್ಮಾ ಅವರ ಓವರ್​ನಲ್ಲಿ ಪಂಜಾಬ್​ನ ಆರನೇ ವಿಕೆಟ್ ಪತನವಾಯಿತು. ಈ ಬಾರಿಯ ಐಪಿಎಲ್​ನ ದುಬಾರಿ ಆಟಗಾರ ಕರನ್ ಕ್ಯಾಚಿತ್ತು ಔಟಾದರು. 19 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ಸ್ಕೋರ್ 142/6.

  • 13 Apr 2023 09:13 PM (IST)

    ಶಾರುಖ್ ಸಿಕ್ಸ್

    ರಾಜಪಕ್ಸ ವಿಕೆಟ್ ಬಳಿಕ ಬಂದ ಶಾರುಖ್ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ, 18ನೇ ಓವರ್​ನಲ್ಲಿ ಕರನ್ ಒಂದು ಬೌಂಡರಿ ಬಾರಿಸಿದರು. ಆ ಬಳಿಕ ಕೊನೆಯ ಎಸೆತದಲ್ಲಿ ಶಾರುಖ್ ಅದ್ಭುತ ಸಿಕ್ಸರ್ ಬಾರಿಸಿದರು.

  • 13 Apr 2023 09:11 PM (IST)

    ರಾಜಪಕ್ಸ ಔಟ್

    17ನೇ ಓವರ್​ನಲ್ಲಿ ಜೋಸೆಪ್, ರಾಜಪಕ್ಸ ವಿಕೆಟ್ ಪಡೆದಿದ್ದಾರೆ. ಆರಂಭದಿಂದಲೂ ರನ್ ಗಳಿಸಲು ಪರದಾಡುತ್ತಿದ್ದ ರಾಜಪಕ್ಸ 26 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

  • 13 Apr 2023 09:02 PM (IST)

    ರನ್​ಗಳಿಗೆ ಕಡಿವಾಣ

    ಕರನ್ 4 ಮತ್ತು ಭಾನುಕಾ ರಾಜಪಕ್ಸೆ 18 ರನ್‌ಗಳಿಸಿ ಆಡುತ್ತಿದ್ದಾರೆ. ಗುಜರಾತ್‌ನಲ್ಲಿ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದಾಗಿ ಪಂಜಾಬ್ ಕಿಂಗ್ಸ್ ಬ್ಯಾಟರ್​ಗಳು ಬಿಗ್ ಶಾಟ್ ಹೊಡೆಯುವಲ್ಲಿ ವಿಫಲರಾಗುತ್ತಿದ್ದಾರೆ.15 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ 99/4.

  • 13 Apr 2023 08:53 PM (IST)

    13 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ 94/4

    ಭಾನುಕಾ ರಾಜಪಕ್ಸೆ 17 ರನ್ ಹಾಗೂ ಕರನ್ 1 ರನ್ ಗಳಿಸಿ ಆಡುತ್ತಿದ್ದಾರೆ. 13 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ಸ್ಕೋರ್ 94/4

  • 13 Apr 2023 08:41 PM (IST)

    ಜಿತೇಶ್ ಔಟ್

    ಪಂಜಾಬ್ ಇನ್ನಿಂಗ್ಸ್ ನಿಭಾಯಿಸುತ್ತಿದ್ದ ಜಿತೇಶ್ ಶರ್ಮಾ ಕೀಪರ್​ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 13 Apr 2023 08:37 PM (IST)

    ಶಮಿಗೆ ಬೌಂಡರಿ

    12ನೇ ಓವರ್ ಎಸೆದ ಶಮಿ ಕೊಂಚ ದುಬಾರಿಯಾದರು. ಈ ಓವರ್​ನಲ್ಲಿ ಜಿತೇಶ್ 2 ಬೌಂಡರಿ ಬಾರಿಸಿದರು.

  • 13 Apr 2023 08:31 PM (IST)

    10 ಓವರ್‌ ಮುಕ್ತಾಯ

    ಪಂಜಾಬ್ ಕಿಂಗ್ಸ್ ಪರ ರಾಜಪಕ್ಸೆ 9 ರನ್ ಮತ್ತು ಜಿತೇಶ್ ಶರ್ಮಾ 15 ರನ್ ಗಳಿಸಿ ಆಡುತ್ತಿದ್ದಾರೆ.10 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 75/3.

  • 13 Apr 2023 08:26 PM (IST)

    ಜಿತೇಶ್ ಬೌಂಡರಿ

    ರಶೀದ್ ಬೌಲ್ ಮಾಡಿದ 8ನೇ ಓವರ್​ನ ಮೊದಲೇ ಮತ್ತು 4ನೇ ಎಸೆತದಲ್ಲಿ ಜಿತೇಶ್ ಶರ್ಮಾ ಬೌಂಡರಿ ಬಾರಿಸಿದರು.

  • 13 Apr 2023 08:11 PM (IST)

    ಶಾರ್ಟ್​ ಔಟ್

    7ನೇ ಓವರ್ ಎಸೆಯಲು ಬಂದ ಮಿಸ್ಟರಿ ಸ್ಪಿನ್ನರ್ ರಶೀದ್ 5ನೇ ಎಸೆತದಲ್ಲಿ ಗೂಗ್ಲಿ ಮೂಲಕ ಶಾರ್ಟ್​ರನ್ನು ಬೌಲ್ಡ್ ಮಾಡಿದರು. . 7 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ 59/3

  • 13 Apr 2023 08:05 PM (IST)

    ಪವರ್ ಪ್ಲೇ ಅಂತ್ಯ

    ಲಿಟಲ್ ಎಸೆದ 6ನೇ ಓವರ್​ನಲ್ಲಿ 10 ರನ್ ಬಂದವು. ಈ ಓವರ್​ನಲ್ಲೂ ಶಾರ್ಟ್​ 1 ಬೌಂಡರಿ ಬಾರಿಸಿದರು. ಇದರೊಂದಿಗೆ ಪಂಜಾಬ್ ತಂಡ 50 ರನ್ ಗಡಿ ದಾಟಿದ್ದು, ಇದಕ್ಕಾಗಿ 2 ವಿಕೆಟ್ ಕೂಡ ಕಳೆದುಕೊಂಡಿದೆ.

  • 13 Apr 2023 07:59 PM (IST)

    ಶಾರ್ಟ್​ ಸಿಕ್ಸರ್

    ಜೋಸೆಪ್ ಎಸೆದ 5ನೇ ಓವರ್​ನಲ್ಲಿ ಶಾರ್ಟ್​ 1 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು.

  • 13 Apr 2023 07:50 PM (IST)

    ಧವನ್ ಔಟ್

    4ನೇ ಓವರ್​ ಎಸೆದ ಲಿಟಲ್ ಪಂಜಾಬ್ ನಾಯಕನ ವಿಕೆಟ್ ಕಬಳಿಸಿದ್ದಾರೆ. ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಧವನ್ ಮಿಡ್ ಆಫ್​ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.

  • 13 Apr 2023 07:45 PM (IST)

    ಶಮಿ ದುಬಾರಿ

    ಶಮಿ ಎಸೆದ ಮೂರನೇ ಓವರ್​ನಲ್ಲಿ ಶಾರ್ಟ್​ ಮತ್ತೆ 2 ಬೌಂಡರಿ ಬಾರಿಸಿದರು. ಈ ಓವರ್​ನಲ್ಲಿ 11 ರನ್ ಬಂತು.

  • 13 Apr 2023 07:43 PM (IST)

    ಧವನ್ 2 ಬೌಂಡರಿ

    2 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 16/1. ಎರಡನೇ ಓವರ್‌ನಲ್ಲಿ ಧವನ್ 2 ಬೌಂಡರಿ ಬಾರಿಸಿದರು. ಐಪಿಎಲ್ 2023ರಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಧವನ್ ಪ್ರಸ್ತುತ ನಂಬರ್ 1 ಸ್ಥಾನದಲ್ಲಿದ್ದಾರೆ.

  • 13 Apr 2023 07:38 PM (IST)

    ಶಾರ್ಟ್​ ಬೌಂಡರಿ

    ಮೊದಲ ವಿಕೆಟ್ ಬಳಿಕ ಬಂದ ಶಾರ್ಟ್​, ಮೊದಲ ಓವರ್​ನ 4 ಮತ್ತು 5ನೇ ಎಸೆತವನ್ನು ಬೌಂಡರಿಗಟ್ಟಿದರು.

  • 13 Apr 2023 07:32 PM (IST)

    ಪಂಜಾಬ್ ಬ್ಯಾಟಿಂಗ್ ಆರಂಭ

    ಪಂಜಾಬ್ ತಂಡ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಪ್ರಭ್​ಸಿಮ್ರಾನ್ ಹಾಗೂ ನಾಯಕ ಧವನ್ ಕಣಕ್ಕಿಳಿದಿದ್ದಾರೆ. ಶಮಿ ಎಸೆದ ಮೊದಲ ಓವರ್​ನ ಎರಡನೇ ಎಸೆತದಲ್ಲೇ ಪ್ರಭ್​ಸಿಮ್ರಾನ್ ಕ್ಯಾಚಿತ್ತು ಔಟಾಗಿದ್ದಾರೆ.

  • 13 Apr 2023 07:10 PM (IST)

    ಪಂಜಾಬ್ ಕಿಂಗ್ಸ್

    ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ (ಕೀಪರ್), ಸ್ಯಾಮ್ ಕರನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಿಷಿ ಧವನ್, ಅರ್ಶ್‌ದೀಪ್ ಸಿಂಗ್.

  • 13 Apr 2023 07:09 PM (IST)

    ಗುಜರಾತ್ ಟೈಟಾನ್ಸ್

    ವೃದ್ಧಿಮಾನ್ ಸಹಾ (ಕೀಪರ್), ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್.

  • 13 Apr 2023 07:02 PM (IST)

    ಟಾಸ್ ಗೆದ್ದ ಗುಜರಾತ್

    ಟಾಸ್ ಗೆದ್ದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - 7:01 pm, Thu, 13 April 23

Follow Us