GGT vs RCB, WPL 2023: ಆರ್​ಸಿಬಿಗೆ ವಿರೋಚಿತ ಸೋಲು

TV9 Web
| Updated By: ಝಾಹಿರ್ ಯೂಸುಫ್

Updated on:Mar 08, 2023 | 11:02 PM

Gujarat Giants vs Royal Challengers Bangalore: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 201 ರನ್​ ಕಲೆಹಾಕಿತು.

GGT vs RCB, WPL 2023: ಆರ್​ಸಿಬಿಗೆ ವಿರೋಚಿತ ಸೋಲು
GGT vs RCB

GGT vs RCB Live Score, WPL 2023: ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗುಜರಾತ್ ಜೈಂಟ್ಸ್ (GGT) ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್​ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನತ್ತಿದ ಆರ್​ಸಿಬಿ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು. ಪರಿಣಾಮ ಕೊನೆಯ ಓವರ್​ನಲ್ಲಿ ಆರ್​ಸಿಬಿಗೆ ಗೆಲ್ಲಲು 24 ರನ್​ಗಳ ಅವಶ್ಯಕತೆಯಿತ್ತು. ಇದಾಗ್ಯೂ ಅಂತಿಮ ಹಂತದಲ್ಲಿ ಎಡವಿದ ಆರ್​ಸಿಬಿ 11 ರನ್​ಗಳಿಂದ ವಿರೋಚಿತ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಗುಜರಾತ್ ಜೈಂಟ್ಸ್ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಗೆಲುವಿನ ಖಾತೆ ತೆರೆದಿದೆ. ಮತ್ತೊಂದೆಡೆ ಸತತ ಮೂರು ಸೋಲುಂಡಿರುವ ಆರ್​ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ.

ಗುಜರಾತ್ ಜೈಂಟ್ಸ್​- 201/7 (20)

ಆರ್​ಸಿಬಿ- 190/6 (20)

ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲೆ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ್ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂನಂ ಖೇಮ್ನಾರ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್

ಗುಜರಾತ್ ಜೈಂಟ್ಸ್ ತಂಡ: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ್ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್, ಮೋನಿಕಾ ಪಟೇಲ್, ಅಶ್ವನಿ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಜಾರ್ಜಿಯಾ ವೇರ್ಹ್ಯಾಮ್, ಪರುನಿಕಾ ಸಿಸೋಡಿಯಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೇಗನ್ ಶಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್, ಎರಿನ್ ಬರ್ನ್ಸ್, ಕೋಮಲ್ ಝಂಜಾದ್, ಇಂದ್ರಾಣಿ ರಾಯ್, ಸಹನಾ ಪವಾರ್, ಪೂನಂ ಖೇಮ್ನಾರ್, ಆಶಾ ಶೋಬನಾ, ಡೇನ್ ವ್ಯಾನ್ ನೀಕರ್ಕ್.

LIVE NEWS & UPDATES

The liveblog has ended.
  • 08 Mar 2023 10:56 PM (IST)

    GGT vs RCB Live Score, WPL 2023: ವಿರೋಚಿತ ಸೋಲುಂಡ ಆರ್​ಸಿಬಿ

    GGT 201/7 (20)

    RCBW 190/6 (20)

      

    11 ರನ್​ಗಳಿಂದ ರೋಚಕ ಗೆಲುವು ದಾಖಲಿಸಿದ ಗುಜರಾತ್ ಜೈಂಟ್ಸ್​
  • 08 Mar 2023 10:53 PM (IST)

    GGT vs RCB Live Score, WPL 2023: ಅತ್ಯುತ್ತಮ ಕ್ಯಾಚ್

    ಸ್ನೇಹ್ ರಾಣಾ ಹಿಡಿದ ಅತ್ಯುತ್ತಮ ಕ್ಯಾಚ್​ನಿಂದ ಪೂನಂ (2) ಔಟ್

    RCBW 178/6 (19.1)

      

  • 08 Mar 2023 10:50 PM (IST)

    GGT vs RCB Live Score, WPL 2023: ಭರ್ಜರಿ ಸಿಕ್ಸ್

    RCBW 178/5 (19)

      

    ಗಾರ್ಡ್ನರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಹೀದರ್ ನೈಟ್

    ಕೊನೆಯ ಓವರ್​ನಲ್ಲಿ ಆರ್​ಸಿಬಿಗೆ 24 ರನ್​ಗಳ ಅವಶ್ಯಕತೆ

  • 08 Mar 2023 10:48 PM (IST)

    GGT vs RCB Live Score, WPL 2023: 5ನೇ ವಿಕೆಟ್ ಪತನ

    ಗಾರ್ಡ್ನರ್ ಎಸೆತದಲ್ಲಿ ಕನಿಕಾ ಅಹುಜಾ (10) ಸ್ಟಂಪ್ ಔಟ್

    RCBW 169/5 (18.1)

      

  • 08 Mar 2023 10:47 PM (IST)

    GGT vs RCB Live Score, WPL 2023: 18 ಓವರ್ ಮುಕ್ತಾಯ

    RCBW 169/4 (18)

     12 ಎಸೆತಗಳಲ್ಲಿ 33 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಹೀದರ್ ನೈಟ್-ಕನಿಕಾ ಅಹುಜಾ ಬ್ಯಾಟಿಂಗ್

  • 08 Mar 2023 10:37 PM (IST)

    GGT vs RCB Live Score, WPL 2023: ಡಿವೈನ್ ಔಟ್

    ಸದರ್ಲ್ಯಾಂಡ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಸೋಫಿ ಡಿವೈನ್…ಬೌಂಡರಿ ಲೈನ್​ನಲ್ಲಿ ಕ್ಯಾಚ್..ಡಿವೈನ್ (66) ಔಟ್

    RCBW 141/4 (16.2)

      

  • 08 Mar 2023 10:31 PM (IST)

    GGT vs RCB Live Score, WPL 2023: 3ನೇ ವಿಕೆಟ್ ಪತನ

    ಗಾರ್ಡ್ನರ್ ಎಸೆದಲ್ಲಿ ರಿಚಾ ಘೋಷ್ (10) ಕ್ಲೀನ್ ಬೌಲ್ಡ್​

    RCBW 125/3 (15.1)

      

  • 08 Mar 2023 10:25 PM (IST)

    GGT vs RCB Live Score, WPL 2023: ಅರ್ಧಶತಕ ಪೂರೈಸಿದ ಸೋಫಿ

    ಅರ್ಧಶತಕ ಪೂರೈಸಿದ ಆರ್​ಸಿಬಿ ಆಟಗಾರ್ತಿ ಸೋಫಿ ಡಿವೈನ್

    ತನುಜಾ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಸೋಫಿ

    RCBW 124/2 (14.2)

      

  • 08 Mar 2023 10:18 PM (IST)

    GGT vs RCB Live Score, WPL 2023: ಶತಕ ಪೂರೈಸಿದ ಆರ್​ಸಿಬಿ

    RCBW 101/2 (12.2)

      

    ಕ್ರೀಸ್​ನಲ್ಲಿ ರಿಷಾ ಘೋಷ್ – ಸೋಫಿ ಡಿವೈನ್ ಬ್ಯಾಟಿಂಗ್

  • 08 Mar 2023 10:15 PM (IST)

    GGT vs RCB Live Score, WPL 2023: 2ನೇ ವಿಕೆಟ್ ಪತನ

    ಮಾನ್ಸಿ ಜೋಶಿ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಎಲ್ಲೀಸ್ ಪೆರ್ರಿ (32)

    RCBW 97/2 (11.5)

      

  • 08 Mar 2023 10:07 PM (IST)

    GGT vs RCB Live Score, WPL 2023: 10 ಓವರ್ ಮುಕ್ತಾಯ

    RCBW 82/1 (10)

      

    ಕ್ರೀಸ್​ನಲ್ಲಿ ಎಲ್ಲಿಸ್ ಪೆರ್ರಿ-ಸೋಫಿ ಡಿವೈನ್ ಬ್ಯಾಟಿಂಗ್

  • 08 Mar 2023 09:50 PM (IST)

    GGT vs RCB Live Score, WPL 2023: 7 ಓವರ್ ಮುಕ್ತಾಯ

    RCBW 62/1 (7)

      

    ಕ್ರೀಸ್​ನಲ್ಲಿ ಸೋಫಿ ಡಿವೈನ್ – ಎಲ್ಲಿಸ್ ಪೆರ್ರಿ ಬ್ಯಾಟಿಂಗ್

  • 08 Mar 2023 09:45 PM (IST)

    GGT vs RCB Live Score, WPL 2023: ಆರ್​ಸಿಬಿ ಮೊದಲ ವಿಕೆಟ್ ಪತನ

    ಗಾರ್ಡ್ನರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಸ್ಮೃತಿ ಮಂಧಾನ (18)

    RCBW 54/1 (5.2)

      

  • 08 Mar 2023 09:42 PM (IST)

    GGT vs RCB Live Score, WPL 2023: ಹ್ಯಾಟ್ರಿಕ್ ಫೋರ್

    ಸದರ್ಲ್ಯಾಂಡ್​ ಓವರ್​ನ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಸೋಫಿ ಡಿವೈನ್

    RCBW 52/0 (4.3)

      ಅರ್ಧಶತಕ ಪೂರೈಸಿದ ಆರ್​ಸಿಬಿ

  • 08 Mar 2023 09:41 PM (IST)

    GGT vs RCB Live Score, WPL 2023: ಬ್ಯಾಕ್ ಟು ಬ್ಯಾಕ್ ಫೋರ್

    ಸದರ್ಲ್ಯಾಂಡ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಸೋಫಿ ಡಿವೈನ್

    RCBW 48/0 (4.2)

      

  • 08 Mar 2023 09:35 PM (IST)

    GGT vs RCB Live Score, WPL 2023: ಮೂರು ಓವರ್ ಮುಕ್ತಾಯ

    ಕಿಮ್ ಗಾರ್ಥ್ ಎಸೆತದಲ್ಲಿ ಆಕರ್ಷಕ ಕವರ್​ ಡ್ರೈವ್ ಫೋರ್ ಬಾರಿಸಿದ ಸ್ಮೃತಿ ಮಂಧಾನ

    RCBW 33/0 (3)

      

  • 08 Mar 2023 09:27 PM (IST)

    GGT vs RCB Live Score, WPL 2023: ಆರ್​ಸಿಬಿ ಉತ್ತಮ ಆರಂಭ

    ಕಿಮ್ ಗಾರ್ಥ್ ಎಸೆದ ಮೊದಲ ಓವರ್​ನಲ್ಲಿ 9 ರನ್​ ಕಲೆಹಾಕಿದ ಆರ್​ಸಿಬಿ

    RCBW 9/0 (1)

      

    ಕ್ರೀಸ್​ನಲ್ಲಿ ಸ್ಮೃತಿ ಮಂಧಾನ – ಸೋಫಿ ಡಿವೈನ್ ಬ್ಯಾಟಿಂಗ್

  • 08 Mar 2023 09:07 PM (IST)

    GGT vs RCB Live Score, WPL 2023: ಗುಜರಾತ್ ಜೈಂಟ್ಸ್ ಇನಿಂಗ್ಸ್​ ಅಂತ್ಯ

    GGT 201/7 (20)

      

    ಆರ್​ಸಿಬಿಗೆ ಗೆಲ್ಲಲು 202 ರನ್​ಗಳ ಗುರಿ

  • 08 Mar 2023 09:05 PM (IST)

    GGT vs RCB Live Score, WPL 2023: 7ನೇ ವಿಕೆಟ್ ಪತನ

    ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಹರ್ಲೀನ್ ಡಿಯೋಲ್ (67)

    GGT 196/7 (19.4)

      

  • 08 Mar 2023 08:59 PM (IST)

    GGT vs RCB Live Score, WPL 2023: ಅತ್ಯುತ್ತಮ ಕ್ಯಾಚ್

    ರೇಣುಕಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಸದರ್​ಲ್ಯಾಂಡ್…ಸ್ಟ್ರೈಟ್​ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಹೀದರ್ ನೈಟ್….ಸದರ್​ಲ್ಯಾಂಡ್ (14) ಔಟ್

    GGT 187/5 (18.1)

      

  • 08 Mar 2023 08:55 PM (IST)

    GGT vs RCB Live Score, WPL 2023: ಪವರ್​ಫುಲ್ ಸಿಕ್ಸ್

    ಎಲ್ಲಿಸ್ ಪೆರ್ರಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸದರ್ಲ್ಯಾಂಡ್

    GGT 181/4 (17)

      

  • 08 Mar 2023 08:44 PM (IST)

    GGT vs RCB Live Score, WPL 2023: 4ನೇ ವಿಕೆಟ್ ಪತನ

    ಹೀದರ್ ನೈಟ್ ಎಸೆತದಲ್ಲಿ ಸ್ಲಿಪ್​ನತ್ತ ಕ್ಯಾಚ್ ನೀಡಿ ಹೊರನಡೆದ ಹೇಮಲತಾ (16)

    GGT 157/4 (15.3)

      

  • 08 Mar 2023 08:37 PM (IST)

    GGT vs RCB Live Score, WPL 2023: 3ನೇ ವಿಕೆಟ್ ಪತನ

    ಹೀದರ್ ನೈಟ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರನಡೆದ ಗಾರ್ಡ್ನರ್ (19)

    GGT 135/3 (13.5)

      

  • 08 Mar 2023 08:34 PM (IST)

    GGT vs RCB Live Score, WPL 2023: ಜೈಂಟ್ಸ್ ತಂಡದಿಂದ ಉತ್ತಮ ಬ್ಯಾಟಿಂಗ್

    ಉತ್ತಮ ಇನಿಂಗ್ಸ್ ಕಟ್ಟುತ್ತಿರುವ ಗುಜರಾತ್ ಜೈಂಟ್ಸ್ ಆಟಗಾರ್ತಿಯರು

    GGT 128/2 (13)

      

    ಕ್ರೀಸ್​ನಲ್ಲಿ ಹರ್ಲೀನ್ ಡಿಯೋಲ್ – ಗಾರ್ಡ್ನರ್ ಬ್ಯಾಟಿಂಗ್

  • 08 Mar 2023 08:22 PM (IST)

    GGT vs RCB Live Score, WPL 2023: 10 ಓವರ್ ಮುಕ್ತಾಯ

    GGT 97/2 (10)

      

    ಕ್ರೀಸ್​ನಲ್ಲಿ ಹರ್ಲೀನ್ ಡಿಯೋಲ್ – ಗಾರ್ಡ್ನರ್ ಬ್ಯಾಟಿಂಗ್

  • 08 Mar 2023 08:12 PM (IST)

    GGT vs RCB Live Score, WPL 2023: ಸೋಫಿಯಾ ಔಟ್

    ಶ್ರೇಯಾಂಕ ಪಾಟೀಲ್ ಎಸೆತದಲ್ಲಿ 29 ಎಸೆತಗಳಲ್ಲಿ 60 ರನ್​ ಬಾರಿಸಿದ ಸೋಫಿಯಾ ಡಂಕ್ಲಿ ಔಟ್

    GGT 82/2 (8)

      

  • 08 Mar 2023 08:10 PM (IST)

    GGT vs RCB Live Score, WPL 2023: ವಾಟ್ ಎ ಶಾಟ್

    ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೋಫಿಯಾ ಡಂಕ್ಲಿ

    GGT 78/1 (7.4)

     

  • 08 Mar 2023 07:59 PM (IST)

    GGT vs RCB Live Score, WPL 2023: ಪವರ್​ಪ್ಲೇ ಮುಕ್ತಾಯ

    GGT 64/1 (6)

      ಕ್ರೀಸ್​ನಲ್ಲಿ ಸೋಫಿಯಾ – ಹರ್ಲೀನ್ ಬ್ಯಾಟಿಂಗ್

  • 08 Mar 2023 07:55 PM (IST)

    GGT vs RCB Live Score, WPL 2023: ಸ್ಪೋಟಕ ಅರ್ಧಶತಕ

    ಕೇವಲ 18 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಬಾರಿಸಿದ ಸೋಫಿಯಾ ಡಂಕ್ಲಿ

    ಪ್ರೀತಿ ಬೋಸ್ ಒಂದೇ ಓವರ್​ನಲ್ಲಿ 23 ರನ್​ ಬಾರಿಸಿದ ಸೋಫಿಯಾ (1 4 6 4 4 4)

    GGT 59/1 (5)

      

  • 08 Mar 2023 07:52 PM (IST)

    GGT vs RCB Live Score, WPL 2023: ಸ್ಟ್ರೈಟ್ ಹಿಟ್ ಸಿಕ್ಸ್

    ಪ್ರೀತಿ ಬೋಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಸೋಫಿಯಾ

    GGT 47/1 (4.3)

      

  • 08 Mar 2023 07:48 PM (IST)

    GGT vs RCB Live Score, WPL 2023: ಸೋಫಿಯಾ ಭರ್ಜರಿ ಬ್ಯಾಟಿಂಗ್

    ರೇಣುಕಾ ಸಿಂಗ್ ಓವರ್​ನಲ್ಲಿ 4,6,4 ಬಾರಿಸಿದ ಸೋಫಿಯಾ ಡಂಕ್ಲಿ

    GGT 36/1 (4)

      

  • 08 Mar 2023 07:43 PM (IST)

    GGT vs RCB Live Score, WPL 2023: ಗುಜರಾತ್ ಜೈಂಟ್ಸ್ ಮೊದಲ ವಿಕೆಟ್ ಪತನ

    ಮೇಗನ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಮೇಘಾನ (8)

    GGT 22/1 (3)

      

  • 08 Mar 2023 07:41 PM (IST)

    GGT vs RCB Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಮೇಗನ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಸೋಫಿಯಾ

    GGT 18/0 (2.3)

      

  • 08 Mar 2023 07:35 PM (IST)

    GGT vs RCB Live Score, WPL 2023: ಮೊದಲ ಓವರ್ ಮೇಡನ್

    ಮೊದಲ ಓವರ್ ಮೇಡನ್ ಮಾಡಿದ ಮೇಗನ್ ಶಟ್

    GGT 0/0 (1)

    ಕ್ರೀಸ್​ನಲ್ಲಿ ಸೋಫಿಯಾ ಡಂಕಿ ಹಾಗೂ ಮೇಘನಾ ಬ್ಯಾಟಿಂಗ್

  • 08 Mar 2023 07:08 PM (IST)

    GGT vs RCB Live Score, WPL 2023: ಆರ್​ಸಿಬಿ ಪ್ಲೇಯಿಂಗ್ ಇಲೆವೆನ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂನಂ ಖೇಮ್ನಾರ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್

  • 08 Mar 2023 07:03 PM (IST)

    GGT vs RCB Live Score, WPL 2023: ಗುಜರಾತ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್

    ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲೆ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ್ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್

  • 08 Mar 2023 07:02 PM (IST)

    GGT vs RCB Live Score, WPL 2023: ಟಾಸ್ ಗೆದ್ದ ಗುಜರಾತ್ ಜೈಂಟ್ಸ್

    ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • 08 Mar 2023 06:36 PM (IST)

    GGT vs RCB Live Score, WPL 2023: ಆರ್​ಸಿಬಿ vs ಗುಜರಾತ್ ಜೈಂಟ್ಸ್ ಮುಖಾಮುಖಿ

    ಟಾಸ್ ಪ್ರಕ್ರಿಯೆ: 7 ಗಂಟೆಗೆ

    ಪಂದ್ಯ ಶುರು: 7.30 ಕ್ಕೆ

    ಸ್ಥಳ: ಬ್ರಬೋರ್ನ್​ ಸ್ಟೇಡಿಯಂ, ಮುಂಬೈ

  • Published On - Mar 08,2023 6:32 PM

    Follow us
    ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
    ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
    ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
    ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
    ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
    ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
    ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
    ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
    ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
    ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
    ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
    ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
    ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
    ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
    ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
    ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
    ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
    ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
    ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
    ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್