13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಗುಜರಾತ್ ಟೈಟಾನ್ಸ್ಗೆ (Gujarat Titans) ಇದೀಗ ದೊಡ್ಡ ಹೊಡೆತ ಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿದ ಹಾರ್ದಿಕ್ ಪಡೆಗೆ ಹಿನ್ನಡೆ ಆಗಿದೆ. ತಂಡದ ಸ್ಟಾರ್ ಬ್ಯಾಟರ್, ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ (Kane Williamson) ಸಂಪೂರ್ಣ ಐಪಿಎಲ್ 2023 (IPL 2023) ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾದ ಇವರು ಅರ್ಧದಲ್ಲೇ ಮೈದಾನ ತೊರೆಯಬೇಕಾಯಿತು. ಇದೀಗ ಕೇನ್ ಗಾಯದ ಬಗ್ಗೆ ಅಪ್ಡೇಟ್ ಬಂದಿದ್ದು, ವಿಶ್ರಾಂತಿಯ ಅಗತ್ಯವಿರುವ ಕಾರಣ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ಪಂದ್ಯದ ಮಧ್ಯೆ ಸಿಕ್ಸರ್ ತಡೆಯುವ ಪ್ರಯತ್ನದಲ್ಲಿ ಬೌಂಡರಿ ಗೆರೆಯಾಚೆ ಬಿದ್ದು ಕೇನ್ ವಿಲಿಯಮ್ಸನ್ ಗಾಯಗೊಂಡರು. ರುತುರಾಜ್ ಗಾಯಕ್ವಾಡ್ ಬಾರಿಸಿದ ಚೆಂಡು ಸಿಕ್ಸರ್‌ನತ್ತ ಧಾವಿಸಿತ್ತು. ಈ ಸಂದರ್ಭದಲ್ಲಿ ಬೌಂಡರಿ ಗೆರೆಯ ಸನಿಹ ಫೀಲ್ಡಿಂಗ್ ನಡೆಸುತ್ತಿದ್ದ ಮಿಲಿಯಮ್ಸನ್ ಚೆಂಡನ್ನು ಹಾರಿ ಸಿಕ್ಸರ್ ತಡೆಯುವಲ್ಲಿ ಯಶಸ್ವಿಯಾದರು. ಆದರೆ ನೆಲಕ್ಕೆ ಬಿದ್ದ ಸಂದರ್ಭ ಕೇನ್ ಮೊಣಕಾಲಿಗೆ ಗಾಯವಾಗಿದೆ. ಅಲ್ಲಿಂದ ಏಳಲು ಕೂಡ ಇವರಿಗೆ ಸಾಧ್ಯವಾಗಲಿಲ್ಲ.
MS Dhoni: ಐಪಿಎಲ್ ಸಿಕ್ಸರ್ ಕಿಂಗ್ಗಳ ಪಟ್ಟಿಗೆ ಎಂಎಸ್ ಧೋನಿ ಎಂಟ್ರಿ..!
ತೀವ್ರ ನೋವಿಗೆ ಒಳಗಾಗಿದ್ದ ಕೇನ್ಗೆ ತಕ್ಷಣವೇ ಜಿಟಿ ತಂಡದ ಫೀಸಿಯೋ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ, ನೋವಿನ ಪ್ರಮಾಣ ಕಡಿಮೆ ಆಗದ ಕಾರಣ ಮೈದಾನವನ್ನು ತೆರೆದರು. ಸಾಯಿ ಸುದರ್ಶನ ಇಂಪಾಕ್ಟ್ ಪ್ಲೇಯರ್ ಆಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕೇನ್ ಇಂಜುರಿ ಕುರಿತ ಅಪ್ಡೇಟ್ ಬಂದಿದ್ದು ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಮೊದಲ ಪಂದ್ಯದಲ್ಲೇ ಸಿಎಸ್ಕೆ ನಾಯಕ ಎಂಎಸ್ ಧೋನಿ ಕೂಡ ಇಂಜುರಿಗೆ ತುತ್ತಾದ ಘಟನೆ ನಡೆದಿದೆ. ವಿಕೆಟ್ ಕೀಪಿಂಗ್ ಮಾಡುತ್ತಿರುವಾಗ ಚೆಂಡು ಹಿಡಿಯಲು ಡೈವ್ ಬಿದ್ದಾಗ ಧೋನಿ ಅವರು ಗಾಯಕ್ಕೆ ತುತ್ತಾಗಿದ್ದಾರೆ. ಎಂಎಸ್ಡಿಯ ಮೊಣ ಕಾಲಿಗೆ ಜೋರಾದ ಪೆಟ್ಟಾಗಿದ್ದು ಮೈದಾನದಲ್ಲಿ ಏಳಲು ಸಾಧ್ಯವಾಗದೆ ಕಷ್ಟ ಪಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಬಳಿಕ ಸಿಎಸ್ಕೆ ಫಿಸಿಯೊ ಧೋನಿ ಇರುವ ಕಡೆ ಬಂದು ಆರೈಕೆ ಮಾಡಿದರು. ಸದ್ಯ ಧೋನಿಯ ಗಾಯ ಎಷ್ಟರ ಮಟ್ಟಿಗೆ ದೊಡ್ಡದಾಗಿದೆ ಎಂಬುದು ತಿಳಿದುಬಂದಿಲ್ಲ. ಅಥವಾ ಮುಂದಿನ ಪಂದ್ಯಕ್ಕೆ ಲಭ್ಯರಿರುತ್ತಾರ ಎಂಬುದು ಇನ್ನಷ್ಟೆ ಖಚಿತವಾಗಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Sat, 1 April 23