GT vs SRH IPL 2026: ಗುಜರಾತ್ ಟೈಟಾನ್ಸ್ ತಂಡಕ್ಕೆ ಭರ್ಜರಿ ಜಯ

Gujarat Titans vs Sunrisers Hyderabad, IPL 2026: ಗುಜರಾತ್ ಟೈಟಾನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಈವರೆಗೆ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಗುಜರಾತ್ ಟೈಟಾನ್ಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಸನ್​ರೈಸರ್ಸ್ ಹೈದರಾಬಾದ್ ತಂಡ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಇನ್ನು ಒಂದು ಮ್ಯಾಚ್ ಕಾರಣಾಂತರದಿಂದ ರದ್ದಾಗಿತ್ತು. 

GT vs SRH IPL 2026: ಗುಜರಾತ್ ಟೈಟಾನ್ಸ್ ತಂಡಕ್ಕೆ ಭರ್ಜರಿ ಜಯ
Gt Vs Srh Live

Updated on: May 12, 2026 | 11:17 PM

ಇಂಡಿಯನ್ ಪ್ರೀಮಿಯರ್ ಲೀಗ್​ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್​ಗಳಲ್ಲಿ 168 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡವು ಕೇವಲ 86 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಗುಜರಾತ್ ಟೈಟಾನ್ಸ್​ 82 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಗುಜರಾತ್ ಟೈಟಾನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಈವರೆಗೆ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಗುಜರಾತ್ ಟೈಟಾನ್ಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಸನ್​ರೈಸರ್ಸ್ ಹೈದರಾಬಾದ್ ತಂಡ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಇನ್ನು ಒಂದು ಮ್ಯಾಚ್ ಕಾರಣಾಂತರದಿಂದ ರದ್ದಾಗಿತ್ತು.

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಕ್ ಕ್ಲಾಸೆನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.

ಗುಜರಾತ್ ಟೈಟಾನ್ಸ್ ತಂಡ: ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಸನ್‌ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸ್​, ಜಯದೇವ್ ಉನದ್ಕತ್, ಎಶಾನ್ ಮಾಲಿಂಗ, ಝೀಶಾನ್ ಅನ್ಸಾರಿ, ಶಿವಾಂಗ್ ಕುಮಾರ್, ಸಲೀಲ್ ಅರೋರ, ಸಾಕಿಬ್ ಹುಸೈನ್, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಪ್ರಫುಲ್ ಹಿಂಗೆ, ಕ್ರೇನ್ಸ್ ಫುಲೆಟ್ರಾ, ಲಿಯಾಮ್ ಲಿವಿಂಗ್​ಸ್ಟೋನ್ಸ್, ಶಿವಂ ಮಾವಿ, ಜ್ಯಾಕ್ ಎಡ್ವರ್ಡ್ಸ್.

LIVE NEWS & UPDATES

The liveblog has ended.
  • 12 May 2026 10:57 PM (IST)

    GT vs SRH IPL 2026 Live Score: ಗುಜರಾತ್ ಟೈಟಾನ್ಸ್ ತಂಡಕ್ಕೆ ಭರ್ಜರಿ ಜಯ

    • ಗುಜರಾತ್ ಟೈಟಾನ್ಸ್ ತಂಡಕ್ಕೆ 82 ರನ್​ಗಳ ಭರ್ಜರಿ ಜಯ
    • 20 ಓವರ್​ಗಳಲ್ಲಿ 168 ರನ್​ ಕಲೆಹಾಕಿದ್ದ ಗುಜರಾತ್ ಟೈಟಾನ್ಸ್
    • 169 ರನ್​ಗಳ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡ 14.5 ಓವರ್​ಗಳಲ್ಲಿ 86 ರನ್​ಗಳಿಗೆ ಆಲೌಟ್.
    • ಭರ್ಜರಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟಾನ್ಸ್​
  • 12 May 2026 10:34 PM (IST)

    GT vs SRH IPL 2026 Live Score: ಎಸ್​ಆರ್​ಹೆಚ್ 7ನೇ ವಿಕೆಟ್ ಪತನ

    ಜೇಸನ್ ಹೋಲ್ಡರ್ ಎಸೆದ 11ನೇ ಓವರ್​ನ 4ನೇ ಎಸೆತದಲ್ಲಿ ವಾಷಿಂಗ್ಟನ್ ಸುಂದರ್​ಗೆ ಕ್ಯಾಚ್ ನೀಡಿದ ಎನ್​ಕೆಆರ್​.

    ಕೇವಲ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದ ನಿತೀಶ್ ಕುಮಾರ್ ರೆಡ್ಡಿ.

    ಕ್ರೀಸ್​ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಶಿವಾಂಗ್ ಕುಮಾರ್ ಬ್ಯಾಟಿಂಗ್.

     

  • 12 May 2026 10:28 PM (IST)

    GT vs SRH IPL 2026 Live Score: ಎಸ್​ಆರ್​ಹೆಚ್ 6ನೇ ವಿಕೆಟ್ ಪತನ

    ಜೇಸನ್ ಹೋಲ್ಡರ್ ಎಸೆದ 11ನೇ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಹೆನ್ರಿಕ್ ಕ್ಲಾಸೆನ್.

    16 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹೆನ್ರಿಕ್ ಕ್ಲಾಸೆನ್.

    ಕ್ರೀಸ್​ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.

     

  • 12 May 2026 10:25 PM (IST)

    GT vs SRH IPL 2026 Live Score: ಎಸ್​ಆರ್​ಹೆಚ್ 5ನೇ ವಿಕೆಟ್ ಪತನ

    ಪ್ರಸಿದ್ಧ್ ಕೃಷ್ಣ ಎಸೆದ 10ನೇ ಓವರ್​ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಸಲೀಲ್ ಅರೋರಾ.

    13 ಎಸೆತಗಳಲ್ಲಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸಲೀಲ್.

    10 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 56 ರನ್ ಕಲೆಹಾಕಿದ ಸನ್​ರೈಸರ್ಸ್ ಹೈದರಾಬಾದ್.

    ಕ್ರೀಸ್​ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್.

     

  • 12 May 2026 10:18 PM (IST)

    GT vs SRH IPL 2026 Live Score: ಅರ್ಧಶತಕ ಪೂರೈಸಿದ ಎಸ್​ಆರ್​ಹೆಚ್

    ಜೇಸನ್ ಹೋಲ್ಡರ್ ಎಸೆದ 9ನೇ ಓವರ್​ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಹೆನ್ರಿಕ್ ಕ್ಲಾಸೆನ್.

    ಈ ಫೋರ್​ನೊಂದಿಗೆ 8.1 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಸನ್​ರೈಸರ್ಸ್ ಹೈದರಾಬಾದ್.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಸಲೀಲ್ ಅರೋರಾ ಬ್ಯಾಟಿಂಗ್.

     

  • 12 May 2026 10:06 PM (IST)

    GT vs SRH IPL 2026 Live Score: ಎಸ್​ಆರ್​ಹೆಚ್ 4ನೇ ವಿಕೆಟ್ ಪತನ

    ಕಗಿಸೊ ರಬಾಡ ಎಸೆದ 6ನೇ ಓವರ್​ನ 4ನೇ ಎಸೆತದಲ್ಲಿ ಸುಲಭ ಕ್ಯಅಚ್ ನೀಡಿ ಹೊರ ನಡೆದ ಸ್ಮರಣ್ ರವಿಚಂದ್ರನ್.

    15 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಮರಣ್.

    ಪವರ್​ಪ್ಲೇನಲ್ಲಿ ಕೇವಲ 34 ರನ್​ ಕಲೆಹಾಕಿದ ಸನ್​ರೈಸರ್ಸ್​ ಹೈದರಾಬಾದ್.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಸಲೀಲ್ ಅರೋರಾ ಬ್ಯಾಟಿಂಗ್.

  • 12 May 2026 09:52 PM (IST)

    GT vs SRH IPL 2026 Live Score: ಎಸ್​ಆರ್​ಹೆಚ್ 3ನೇ ವಿಕೆಟ್ ಪತನ

    ಕಗಿಸೊ ರಬಾಡ ಎಸೆದ ನಾಲ್ಕನೇ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಇಶಾನ್ ಕಿಶನ್.

    7 ಎಸೆತಗಳಲ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಶಾನ್ ಕಿಶನ್.

    ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಗುಜರಾತ್ ಟೈಟಾನ್ಸ್​,

  • 12 May 2026 09:45 PM (IST)

    GT vs SRH IPL 2026 Live Score: ಎಸ್​ಆರ್​ಹೆಚ್ 2ನೇ ವಿಕೆಟ್ ಪತನ

    ಕಗಿಸೊ ರಬಾಡ ಎಸೆದ 2ನೇ ಓವರ್​ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದ ಅಭಿಷೇಕ್ ಶರ್ಮಾ.

    ಮೂರನೇ ಎಸೆತದಲ್ಲಿ ಬೌಲ್ಡ್ ಆಗಿ ಹೊರ ನಡೆದ ಅಭಿಷೇಕ್ ಶರ್ಮಾ (6).

    2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 13 ರನ್ ಕಲೆಹಾಕಿದ ಸನ್​ರೈಸರ್ಸ್ ಹೈದರಾಬಾದ್.

    ಕ್ರೀಸ್​ನಲ್ಲಿ ಸ್ಮರಣ್ ರವಿಚಂದ್ರನ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.

     

  • 12 May 2026 09:39 PM (IST)

    GT vs SRH IPL 2026 Live Score: ಮಿಯಾ ಮ್ಯಾಜಿಕ್

    ಮೊದಲ ಓವರ್​ನ 4ನೇ ಎಸೆತದಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್.

    ರನ್ ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡ ಸನ್​ರೈಸರ್ಸ್ ಹೈದರಾಬಾದ್.

    ಮೊದಲ ಓವರ್​ ಮೇಡನ್ ಮಾಡಿದ ಮೊಹಮ್ಮದ್ ಸಿರಾಜ್.

    ಕ್ರೀಸ್​ನಲ್ಲಿ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್.

     

     

  • 12 May 2026 09:21 PM (IST)

    GT vs SRH IPL 2026 Live Score: ಗುಜರಾತ್ ಟೈಟಾನ್ಸ್ ಇನಿಂಗ್ಸ್ ಅಂತ್ಯ

    • 20 ಓವರ್​ಗಳಲ್ಲಿ 168 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.
    • 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಸನ್​ರೈಸರ್ಸ್ ಹೈದರಾಬಾದ್.
    • ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ 20 ಓವರ್​ಗಳಲ್ಲಿ 169 ರನ್​ಗಳ ಗುರಿ.
    • ಈ ಪಂದ್ಯದಲ್ಲಿ ಗಲ್ಲುವ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
  • 12 May 2026 09:13 PM (IST)

    GT vs SRH IPL 2026 Live Score: ಬರೋಬ್ಬರಿ 18 ರನ್​ಗಳು

    ಈಶಾನ್ ಮಲಿಂಗಾ ಎಸೆದ 19ನೇ ಓವರ್​ನಲ್ಲಿ 18 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.

    ಅದರಲ್ಲೂ ಕೊನೆಯ ಎಸೆತದಲ್ಲಿ ಅತ್ಯದ್ಭುತ ಸಿಕ್ಸ್ ಸಿಡಿಸಿದ ವಾಷಿಂಗ್ಟನ್ ಸುಂದರ್.

    19 ಈವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 158 ರನ್​ ಕಲೆಹಾಕಿದ ಗುಜರಾತ್ ಟೈಟಾನ್ಸ್.

    ಕ್ರೀಸ್​ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಜೇಸನ್ ಹೋಲ್ಡರ್ ಬ್ಯಾಟಿಂಗ್.

     

  • 12 May 2026 08:58 PM (IST)

    GT vs SRH IPL 2026 Live Score: ಗುಜರಾತ್ ಟೈಟಾನ್ಸ್​ 4ನೇ ವಿಕೆಟ್ ಪತನ

    ಸಾಕಿಬ್ ಹುಸೇನ್ ಎಸೆದ 17ನೇ ಓವರ್​ನ 2ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಸಾಯಿ ಸುದರ್ಶನ್,

    44 ಎಸೆತಗಳಲ್ಲಿ 61 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಸಾಯಿ ಸುದರ್ಶನ್.

    ಕ್ರೀಸ್​ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಜೇಸನ್ ಹೋಲ್ಡರ್ ಬ್ಯಾಟಿಂಗ್.

    17 ಓವರ್​ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 133 ರನ್​ಗಳು.

     

  • 12 May 2026 08:52 PM (IST)

    GT vs SRH IPL 2026 Live Score: 15 ಓವರ್​ಗಳ ಮುಕ್ತಾಯ

    15 ಓವರ್​ಗಳಲ್ಲಿ 114 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್

    3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಸನ್​ರೈಸರ್ಸ್​ ಹೈದರಾಬಾದ್.

    ಕ್ರೀಸ್​ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.

    35 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ಪೂರೈಸಿದ ವಾಷಿಂಗ್ಟನ್-ಸಾಯಿ.

    ಕೊನೆಯ 5 ಓವರ್​ಗಳಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿ ಜಿಟಿ ಪಡೆ.

  • 12 May 2026 08:42 PM (IST)

    GT vs SRH IPL 2026 Live Score: ಅರ್ಧಶತಕ ಪೂರೈಸಿದ ಸಾಯಿ

    ಶಿವಾಂಗ್ ಕುಮಾರ್ ಎಸೆದ 14ನೇ ಓವರ್​ನ 2ನೇ ಎಸೆತದಲ್ಲಿ ಫೋರ್ ಬಾರಿಸಿದ ಸಾಯಿ ಸುದರ್ಶನ್.

    ಈ ಫೋರ್​ನೊಂದಿಗೆ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಾಯಿ ಸುದರ್ಶನ್.

    14 ಓವರ್​ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 107 ರನ್​ಗಳು.

    ಕ್ರೀಸ್​ನಲ್ಲಿ ಸಾಯಿ ಸುದರ್ಶನ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್.

     

  • 12 May 2026 08:22 PM (IST)

    GT vs SRH IPL 2026 Live Score: ಗುಜರಾತ್ ಟೈಟಾನ್ಸ್​ 3ನೇ ವಿಕೆಟ್ ಪತನ

    ಪ್ಯಾಟ್ ಕಮಿನ್ಸ್ ಎಸೆದ 10ನೇ ಓವರ್​ನಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ನಿಶಾಂತ್ ಸಿಂಧು.

    14 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ

  • 12 May 2026 08:12 PM (IST)

    GT vs SRH IPL 2026 Live Score: ಅರ್ಧಶತಕ ಪೂರೈಸಿದ ಜಿಟಿ

    8 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಗುಜರಾತ್ ಟೈಟಾನ್ಸ್.

    ಎಂಟು ಓವರ್​ಗಳ ಮುಕ್ತಾಯದ ವೇಳೆ ಗುಜರಾಜ್ ಟೈಟಾನ್ಸ್ ಸ್ಕೋರ್ 56/2 

    ಕ್ರೀಸ್​ನಲ್ಲಿ ಸಾಯಿ ಸುದರ್ಶನ್ ಹಾಗೂ ನಿಶಾಂತ್ ಸಿಂಧು ಬ್ಯಾಟಿಂಗ್.

    ಔಟಾದ ಬ್ಯಾಟರ್​ಗಳು:

    • ಶುಭ್​ಮನ್ ಗಿಲ್ (5)
    • ಜೋಸ್ ಬಟ್ಲರ್ (7)
  • 12 May 2026 07:58 PM (IST)

    GT vs SRH IPL 2026 Live Score: ಗುಜರಾತ್ ಟೈಟಾನ್ಸ್​ 2ನೇ ವಿಕೆಟ್ ಪತನ

    ಪ್ರಫುಲ್ ಹಿಂಗೆ ಎಸೆದ 6ನೇ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಜೋಸ್ ಬಟ್ಲರ್.

    11 ಎಸೆತಗಳಲ್ಲಿ ಕೇವಲ 7 ರನ್​ ಗಳಿಸಿ ವಿಕೆಟ್ ಒಪ್ಪಿಸಿದ ಜೋಸ್ ಬಟ್ಲರ್.

    ಕ್ರೀಸ್​ನಲ್ಲಿ ನಿಶಾಂತ್ ಸಿಂಧು ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.

    ಪವರ್​ಪ್ಲೇ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ತಂಡದ ಸ್ಕೋರ್ 34/2

     

     

  • 12 May 2026 07:56 PM (IST)

    GT vs SRH IPL 2026 Live Score: ನಿಧಾನಗತಿಯ ಬ್ಯಾಟಿಂಗ್

    ಐದನೇ ಓವರ್​ನಲ್ಲಿ ಗುಜರಾತ್ ಟೈಟಾನ್ಸ್ ಬ್ಯಾಟರ್​ಗಳು ಕಲೆಹಾಕಿದ್ದು ಕೇವಲ 5 ರನ್​ಗಳು ಮಾತ್ರ.

    ರನ್​ಗಳಿಸಲು ಪರದಾಡುತ್ತಿರುವ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್.

    5 ಓವರ್​ಗಳಲ್ಲಿ ಕೇವಲ 26 ರನ್​ಗಳಿಸಿರುವ ಗುಜರಾತ್ ಟೈಟಾನ್ಸ್​.

    ಈಗಾಗಲೇ ಔಟಾಗಿ ಡಗೌಟ್ ಸೇರಿರುವ ಶುಭ್​ಮನ್ ಗಿಲ್.

  • 12 May 2026 07:51 PM (IST)

    GT vs SRH IPL 2026 Live Score: ಕೇವಲ 4 ರನ್​

    4ನೇ ಓವರ್​ನಲ್ಲಿ ಕೇವಲ 4 ರನ್ ಮಾತ್ರ ನೀಡಿದ ಪ್ಯಾಟ್ ಕಮಿನ್ಸ್.

    ಗುಜರಾತ್ ಟೈಟಾನ್ಸ್ ತಂಡದಿಂದ ನಿಧಾನಗತಿಯ ಆರಂಭ.

    4 ಓವರ್​ಗಳಲ್ಲಿ ಕೇವಲ 21 ರನ್ ಮಾತ್ರ ಕಲೆಹಾಕಿದ ಗುಜರಾತ್ ಟೈಟಾನ್ಸ್.

    ಕ್ರೀಸ್​ನಲ್ಲಿ ಜೋಸ್ ಬಟ್ಲರ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.

     

  • 12 May 2026 07:42 PM (IST)

    GT vs SRH IPL 2026 Live Score: ಗುಜರಾತ್ ಟೈಟಾನ್ಸ್​ ಮೊದಲ ವಿಕೆಟ್ ಪತನ

    ಪ್ರಫುಲ್ ಹಿಂಗೆ ಎಸೆದ 3ನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ, ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಶುಭ್​ಮನ್ ಗಿಲ್.

    7 ಎಸೆತಗಳಲ್ಲಿ 5 ರನ್​ ಗಳಿಸಿದ ವಿಕೆಟ್ ಒಪ್ಪಿಸಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್.

    ಕ್ರೀಸ್​ನಲ್ಲಿ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.

    3 ಓವರ್​ ಮುಕ್ತಾಯಕ್ಕೆ ಗುಜರಾತ್ ಟೈಟಾನ್ಸ್ ಸ್ಕೋರ್ 17 ರನ್​ಗಳು.

  • 12 May 2026 07:40 PM (IST)

    GT vs SRH IPL 2026 Live Score: ಒಂದೇ ಓವರ್​ನಲ್ಲಿ 2 ಫೋರ್

    ನಿತೀಶ್ ಕುಮಾರ್ ರೆಡ್ಡಿ ಎಸೆದ 2ನೇ ಓವರ್​ನ ಮೊದಲ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಸಾಯಿ ಸುದರ್ಶನ್.

    5ನೇ ಎಸೆತದಲ್ಲಿ ಡೀಪ್ ಸ್ಕ್ವೇರ್​ನತ್ತ ಶುಭ್​ಮನ್ ಗಿಲ್ ಬ್ಯಾಟ್​ನಿಂದ ಆಕರ್ಷಕ ಫೋರ್.

    2ನೇ ಓವರ್​ನಲ್ಲಿ 10 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.

     

  • 12 May 2026 07:35 PM (IST)

    GT vs SRH IPL 2026 Live Score: ಮೊದಲ ಓವರ್​

    ಮೊದಲ ಓವರ್​ನಲ್ಲಿ ಕೇವಲ 5 ರನ್ ಮಾತ್ರ ನೀಡಿದ ಪ್ಯಾಟ್ ಕಮಿನ್ಸ್​.

    ಮೊದಲ 6 ಎಸೆತಗಳಲ್ಲಿ ಒಂದೇ ಒಂದು ಫೋರ್ ನೀಡದ ಕಮಿನ್ಸ್.

    ಕ್ರೀಸ್​ನಲ್ಲಿ ಸಾಯಿ ಸುದರ್ಶನ್ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

     

  • 12 May 2026 07:31 PM (IST)

    GT vs SRH IPL 2026 Live Score: ಗುಜರಾತ್ ಟೈಟಾನ್ಸ್​ ಇನಿಂಗ್ಸ್ ಶುರು

    • ಗುಜರಾತ್ ಟೈಟಾನ್ಸ್​ ಆರಂಭಿಕರು: ಶುಭ್​ಮನ್ ಗಿಲ್, ಸಾಯಿ ಸುದರ್ಶನ್.
    • ಸನ್​ರೈಸರ್ಸ್ ಹೈದರಾಬಾದ್ ಮೊದಲ ಓವರ್​: ಪ್ಯಾಟ್ ಕಮಿನ್ಸ್.
    • ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ.
    • ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಸನ್​ರೈಸರ್ಸ್ ಹೈದರಾಬಾದ್.

     

  • 12 May 2026 07:23 PM (IST)

    GT vs SRH IPL 2026 Live Score: ಪ್ಲೇಯಿಂಗ್ ಇಲೆವೆನ್

    ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಕ್ ಕ್ಲಾಸೆನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ

    ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.

  • 12 May 2026 07:20 PM (IST)

    GT vs SRH IPL 2026 Live Score: ಟಾಸ್ ವಿಡಿಯೋ

    ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟ್ ಮಾಡಲಿದೆ.

  • 12 May 2026 07:03 PM (IST)

    GT vs SRH IPL 2026 Live Score: ಟಾಸ್ ಗೆದ್ದ ಎಸ್​ಆರ್​​ಹೆಚ್

    ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 12 May 2026 06:10 PM (IST)

    GT vs SRH IPL 2026 Live Score: ಗೆದ್ದವರಿಗೆ ಅಗ್ರಸ್ಥಾನ

    ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಅಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡವು 14 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡವು 14 ಪಾಯಿಂಟ್ಸ್​ನೊಂದಿಗೆ ತೃತೀಯ ಸ್ಥಾನದಲ್ಲಿದೆ.

    ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ 16 ಅಂಕಗಳನ್ನು ಪಡೆಯುವ ಮೂಲಕ ಆರ್​ಸಿಬಿ ತಂಡವನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟವನ್ನು ಎದುರು ನೋಡಬಹುದು.

  • 12 May 2026 06:07 PM (IST)

    GT vs SRH IPL 2026 Live Score: ಹೆಡ್ ಟು ಹೆಡ್ ದಾಖಲೆ

    ಸನ್​ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಈವರೆಗೆ ಮುಖಾಮುಖಿಯಾಗಿರುವುದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ಈ 7 ಮ್ಯಾಚ್​ಗಳಲ್ಲಿ 5 ಪಂದ್ಯಗಳನ್ನು ಗುಜರಾತ್ ಟೈಟಾನ್ಸ್ ಗೆದ್ದುಕೊಂಡಿದೆ. ಇನ್ನು ಒಂದು ಪಂದ್ಯದಲ್ಲಿ ಎಸ್​ಆರ್​ಹೆಚ್ ಜಯ ಸಾಧಿಸಿದೆ. ಮತ್ತೊಂದು ಪಂದ್ಯವು ಕಾರಣಾಂತರದಿಂದ ರದ್ದಾಗಿತ್ತು.

  • 12 May 2026 06:03 PM (IST)

    GT vs SRH IPL 2026 Live Score: ಟೈಟಾನ್ಸ್​ vs ಸನ್​ರೈಸರ್ಸ್​​

    • ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ
    • ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮ್ಯಾಚ್.
    • 7.30 ರಿಂದ ಶುರುವಾಗಲಿರುವ ಜಿಟಿ ಮತ್ತು ಎಸ್​ಆರ್​ಹೆಚ್ ನಡುವಣ ಪಂದ್ಯ.
    • ಈ ಪಂದ್ಯದ ಟಾಸ್ ಪ್ರಕ್ರಿಯೆ 7 ಗಂಟೆಗೆ.

Published On - 6:01 pm, Tue, 12 May 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us