Inzamam ul Haq: ಹರ್ಭಜನ್ ಇಸ್ಲಾಂಗೆ ಮತಾಂತರವಾಗಲು ಹತ್ತಿರವಾಗಿದ್ದರು ಎಂದ ಇಂಝಮಾಮ್: ಟರ್ಬನೇಟರ್ ಕೊಟ್ಟ ಸ್ಪಷ್ಟನೆ ಏನು?

|

Updated on: Nov 15, 2023 | 7:21 AM

Harbhajan Singh: ಕೆಲವು ಮುಸ್ಲಿಂ ಭಾರತೀಯ ಆಟಗಾರರು ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ಪ್ರಾರ್ಥನೆ ಮತ್ತು ನಮಾಝ್ ಮಾಡುತ್ತಿದ್ದರು. ಹರ್ಭಜನ್ ಸಿಂಗ್ ಅವರು ಮೌಲಾನಾ ತಾರಿಕ್ ಜಮೀಲ್ ಅವರ ಮಾತುಗಳಿಂದ ಪ್ರಭಾವಿತರಾಗಿ ಧರ್ಮವನ್ನು ಪರಿವರ್ತಿಸಲು ಹತ್ತಿರವಾಗಿದ್ದರು ಎಂದು ಇಂಝಮಾಮ್ ಹೇಳಿದ್ದಾರೆ.

Inzamam ul Haq: ಹರ್ಭಜನ್ ಇಸ್ಲಾಂಗೆ ಮತಾಂತರವಾಗಲು ಹತ್ತಿರವಾಗಿದ್ದರು ಎಂದ ಇಂಝಮಾಮ್: ಟರ್ಬನೇಟರ್ ಕೊಟ್ಟ ಸ್ಪಷ್ಟನೆ ಏನು?
Inzamam ul Haq and Harbhajan Singh
Follow us on

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ (Inzamam ul Haq) ಅವರು ಟೀಮ್ ಇಂಡಿಯಾದ ಮಾಜಿ ಸ್ಟಾರ್ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನ ಧರ್ಮ ಪರಿವರ್ತನೆಗೆ ಮತ್ತು ಇಸ್ಲಾಂಗೆ ಸೇರಲು ಹತ್ತಿರವಾಗಿದ್ದಾರೆ ಎಂದು ಹೇಳಿದ್ದಾರಎ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಾಗ ಸ್ವತಃ ಹರ್ಭಜನ್ ಸಿಂಗ್ ಅವರೇ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದು, ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಹೇಳಿದ್ದಾರೆ. ಅಲ್ಲದೆ ಇಂಝಮಾಮ್ ಉಲ್ ಹಕ್ ಮೇಲೆ ಕಿಡಿಕಾರಿದ್ದಾರೆ.

ಇಂಝಮಾಮ್ ಉಲ್ ಹಕ್, ಕೆಲವು ಮುಸ್ಲಿಂ ಭಾರತೀಯ ಆಟಗಾರರು ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ಪ್ರಾರ್ಥನೆ ಮತ್ತು ನಮಾಝ್ ಮಾಡುತ್ತಿದ್ದರು ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಜೊತೆಗೆ ಹರ್ಭಜನ್ ಸಿಂಗ್ ಅವರು ಮೌಲಾನಾ ತಾರಿಕ್ ಜಮೀಲ್ ಅವರ ಮಾತುಗಳಿಂದ ಪ್ರಭಾವಿತರಾಗಿದ್ದರು ಮತ್ತು ಅವರು ಧರ್ಮವನ್ನು ಪರಿವರ್ತಿಸಲು ಹತ್ತಿರವಾಗಿದ್ದರು ಎಂದು ಇಂಝಮಾಮ್ ಹೇಳಿದ್ದಾರೆ. ಇವರ ಈ ಹೇಳಿಕೆ ಭಾರತೀಯ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು.

ಇದನ್ನೂ ಓದಿ
ಇಂದು IND vs NZ ಸೆಮಿಫೈನಲ್: ಗೆದ್ದರೆ ಫೈನಲ್​ಗೆ-ಸೋತರೆ ಟೂರ್ನಿಯಿಂದ ಔಟ್
ವಾಂಖೆಡೆ ಸ್ಟೇಡಿಯಂನಲ್ಲಿನ ಫಲಿತಾಂಶ ಯಾರ ಪರವಿತ್ತು? ಇಲ್ಲಿದೆ ಮಾಹಿತಿ
IPL 2024: CSK ತಂಡದಿಂದ ಬೆನ್ ಸ್ಟೋಕ್ಸ್ ಔಟ್..!
ಫೈನಲ್​ಗೆ ತಲುಪಿದಾಗ, ಎಲ್ಲವೂ ಮತ್ತೆ ಶುರುವಾಗುತ್ತೆ: ಕೇನ್ ವಿಲಿಯಮ್ಸನ್

ಹರ್ಭಜನ್ ಬಗ್ಗೆ ಇಂಝಮಾಮ್ ನೀಡಿರುವ ಹೇಳಿಕೆ:

 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಕ್ಷಣವೇ ಹರ್ಭಜನ್ ಅವರನ್ನು ಟ್ಯಾಗ್ ಮಾಡಿ ವಿಷಯದ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೇಳಿದರಯ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋಗಳಿಂದ ಹರ್ಭಜನ್ ಕೋಪಗೊಂಡಿದ್ದಾರೆ. ಅವರು ಇಂಝಮಾಮ್ ಉಲ್ ಹಕ್ ಅವರ ಸುಳ್ಳು ಹೇಳಿಕೆಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

Rachin Ravindra: ರಾಹುಲ್ + ಸಚಿನ್= ರಚಿನ್ ಅಲ್ಲ..!

“ಅವನು ಕುಡಿದಿದ್ದಾನೆಯೇ ಅಥವಾ ಏನು? ನಾನು ಹೆಮ್ಮೆಯ ಭಾರತೀಯ ಮತ್ತು ಹೆಮ್ಮೆಯ ಸಿಖ್. ಅವನು ಅಸಂಬದ್ಧವಾಗಿ ಮಾತನಾಡುತ್ತಿದ್ದಾನೆ,” ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ.

ವಿಡಿಯೋ ಬಗ್ಗೆ ಸ್ಪಷ್ಟೀಕರಣ ನೀಡಿರುವ ಹರ್ಭಜನ್:

 

ಇತ್ತೀಚೆಗೆ, ಐಸಿಸಿ ಏಕದಿನ ವಿಶ್ವಕಪ್‌ನಿಂದ ಪಾಕಿಸ್ತಾನವು ನಿರ್ಗಮಿಸುವ ಮೊದಲು, ಹಿತಾಸಕ್ತಿ ಸಂಘರ್ಷಕ್ಕಾಗಿ ಇಂಝಮಾಮ್ ಮೇಲೆ ಆರೋಪಗಳು ಬಂದವು. ಇದರಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ