ಈ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಇತರೆ ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ. ವಿಶ್ವಕಪ್ ನಂತರ ಇವರೆಲ್ಲ ವಿರಾಮವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ನಾಯಕ ಯಾರು ಎಂಬ ಪ್ರಶ್ನೆ ಕೂಡ ಎದ್ದಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಆಯ್ಕೆದಾರರು ಸೂರ್ಯಕುಮಾರ್ ಯಾದವ್ ಅಥವಾ ರುತುರಾಜ್ ಗಾಯಕ್ವಾಡ್ ಅವರನ್ನು ಸ್ಟ್ಯಾಂಡ್-ಬೈ ಕ್ಯಾಪ್ಟನ್ ಆಗಿ ಆಯ್ಕೆಮಾಡುವ ಸಾಧ್ಯತೆ ಇದೆ.