IND vs NZ: ಸಿಕ್ಸರ್​ಗಳ ಅರ್ಧಶತಕ! ಗೇಲ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್..!

Rohit Sharma, ICC World Cup 2023: ಈ ಪಂದ್ಯದಲ್ಲಿ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್, ತಮ್ಮ ಅಲ್ಪ ಇನ್ನಿಂಗ್ಸ್​ನಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ದಾಖಲೆಯನ್ನು ಬರೆದರು.

|

Updated on: Nov 15, 2023 | 3:22 PM

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2023ರ ವಿಶ್ವಕಪ್​ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 47 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ.

1 / 8
ಈ ಪಂದ್ಯದಲ್ಲಿ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್, ತಮ್ಮ ಅಲ್ಪ ಇನ್ನಿಂಗ್ಸ್​ನಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ದಾಖಲೆಯನ್ನು ಬರೆದರು.

2 / 8
ಕಿವೀಸ್ ವಿರುದ್ಧ 4 ಬೃಹತ್ ಸಿಕ್ಸರ್ ಸಿಡಿಸಿದ ಹಿಟ್​ಮ್ಯಾನ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಕ್ರಿಸ್ ಗೇಲ್ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.

3 / 8
2015 ರಿಂದ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪರ ಆಡುತ್ತಿರುವ ರೋಹಿತ್, ಈ ಮೂರು ಆವೃತ್ತಿಗಳಲ್ಲಿ 27 ಪಂದ್ಯಗಳನ್ನಾಡಿದ್ದು, ಇದುವರೆಗೆ ಬರೋಬ್ಬರಿ 50 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ.

4 / 8
ರೋಹಿತ್​ಗೂ ಮೊದಲು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕ್ರಿಸ್ ಗೇಲ್ 35 ವಿಶ್ವಕಪ್ ಪಂದ್ಯಗಳಲ್ಲಿ 49 ಸಿಕ್ಸರ್ ಸಿಡಿಸಿದ್ದರು.

5 / 8
ಈ ಇಬ್ಬರ ಬಳಿಕ ಮೂರನೇ ಸ್ಥಾನದಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ 25 ವಿಶ್ವಕಪ್​ ಪಂದ್ಯಗಳಿಂದ 43 ಸಿಕ್ಸರ್ ಸಿಡಿಸಿದ್ದಾರೆ.

6 / 8
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಆಡಿರುವ 23 ವಿಶ್ವಕಪ್ ಪಂದ್ಯಗಳಿಂದ 37 ಸಿಕ್ಸರ್ ಸಿಡಿಸಿ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

7 / 8
ಪ್ರಸ್ತುತ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಸ್ಕೋರರ್ ಎನಿಸಿಕೊಂಡಿರುವ ಡೇವಿಡ್ ವಾರ್ನರ್ ಆಡಿರುವ 25 ವಿಶ್ವಕಪ್ ಪಂದ್ಯಗಳಿಂದ 37 ಸಿಕ್ಸರ್ ಸಿಡಿಸಿದ್ದಾರೆ.

8 / 8
Follow us