ಹಾರ್ದಿಕ್ ಪಾಂಡ್ಯ, ನತಾಶಾ ಸ್ಟಾಂಕೋವಿಕ್
ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕು ವರ್ಷಗಳ ನಂತರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಡುವುದಾಗಿ ಹೇಳಿಕೊಂಡಿದ್ದಾರೆ. ಹಾರ್ದಿಕ್ ಗುರುವಾರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. ಐಪಿಎಲ್ ಸಮಯದಲ್ಲಿ, ನತಾಶಾ ತನ್ನ ಇನ್‌ಸ್ಟಾ ಹ್ಯಾಂಡಲ್‌ನಿಂದ ಹಾರ್ದಿಕ್ ಫೋಟೋಗಳನ್ನು ಡಿಲೀಟ್ ಮಾಡಿದಲ್ಲದೆ, ಪಾಂಡ್ಯ ಹೆಸರನ್ನು ತಮ್ಮ ಹೆಸರಿಂದ ತೆಗೆದುಹಾಕಿದ್ದರು. ಆ ನಂತರ ಈ ಇಬ್ಬರ ನಡುವೆ ಒಡಕು ಮೂಡಿರುವ ಬಗ್ಗೆ ಊಹಪೋಹಗಳು ಎದ್ದಿದ್ದವು. ಇದೀಗ ಈ ಬಗ್ಗೆ ಮಾಹಿತಿ ನೀಡುವ ಮೂಲಕ ಪಾಂಡ್ಯ ವಿಚ್ಛೇದನವನ್ನು ಖಚಿತಪಡಿಸಿಕೊಂಡಿದ್ದಾರೆ. ಅದಾಗ್ಯೂ ಈ ಜೋಡಿಯ ಪ್ರೇಮ ಪಯಣ ತುಂಬಾ ವಿಭಿನ್ನವಾಗಿದ್ದು, ಎಲ್ಲರನ್ನು ಅಚ್ಚರಿಗೊಳಿಸಿತ್ತು.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರ ಪ್ರೇಮಕಥೆ ಕ್ರಿಕೆಟ್ ಮತ್ತು ಗ್ಲಾಮರ್ ಪ್ರಪಂಚದ ಸಂಗಮವಾಗಿದೆ. ಕೆಲವೇ ವರ್ಷಗಳ ಹಿಂದೆ ಆರಂಭವಾದ ಈ ಜೋಡಿಗಳ ಪಯಣ ನೈಟ್ ಕ್ಲಬ್ನಲ್ಲಿ ಆರಂಭವಾಗಿದ್ದರಿಂದ ಹಿಡಿದು, ಪ್ರೀತಿ, ನಿಶ್ಚಿತಾರ್ಥ, ಪಿತೃತ್ವ, ಮೂರು ಬಾರಿ ಮದುವೆ ನಂತರ ಇದೀಗ ವಿಚ್ಛೇದನದೊಂದಿಗೆ ಅಂತ್ಯಗೊಂಡಿದೆ.
- 2018 ರಲ್ಲಿ ನೈಟ್ ಕ್ಲಬ್ನಲ್ಲಿ ಮೊದಲ ಭೇಟಿ; ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ಮೊದಲ ಬಾರಿಗೆ ಮುಂಬೈನ ನೈಟ್ ಕ್ಲಬ್ವೊಂದರಲ್ಲಿ ಮೊದಲ ಬಾರಿಗೆ ಭೇಟಿಯಾದರು. ನತಾಶಾ ಆ ಸಮಯದಲ್ಲಿ ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದರಾದರೂ, ಮೊದಲ ಭೇಟಿಯಲ್ಲೇ ಹಾರ್ದಿಕ್ ಮೇಲೆ ಪ್ರೀತಿಯಾಗಿತ್ತು.
- 2018 ರಲ್ಲಿ ಹುಟ್ಟುಹಬ್ಬಕ್ಕೆ ಪರಸ್ಪರ ಶುಭಾಶಯ: ಆ ನಂತರ ಹಾರ್ದಿಕ್ ಹುಟ್ಟುಹಬ್ಬದಂದು ನತಾಶಾ ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಶುಭ ಹಾರೈಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇಲ್ಲಿಂದ ಇವರಿಬ್ಬರ ನಡುವನ ಸಂಬಂಧದ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು.
- 2019ರ ಅಕ್ಟೋಬರ್ವರೆಗೆ ಬೆಸ್ಟ್ ಫ್ರೆಂಡ್: ಈ ಇಬ್ಬರ ನಡುವಿನ ಸಂಬಂಧವನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, 2019 ರ ಅಕ್ಟೋಬರ್ನಲ್ಲಿ ನತಾಶಾ, ಹಾರ್ದಿಕ್ ಅವರನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ “ಉತ್ತಮ ಸ್ನೇಹಿತ” ಎಂದು ಬಣ್ಣಿಸಿದ್ದರು.
- 2020ರ ಜನವರಿಯಲ್ಲಿ ಪ್ರೇಮ ನಿವೇದನೆ; 2020 ರ ಹೊಸ ವರ್ಷದ ಮೊದಲ ದಿನದಂದು ಹಾರ್ದಿಕ್ ಸಮುದ್ರದ ಮಧ್ಯದಲ್ಲಿ ವಿಹಾರ ನೌಕೆಯಲ್ಲಿ ನತಾಶಾಗೆ ಪ್ರಪೋಸ್ ಮಾಡಿದರು. ನತಾಶಾಗೆ ಹಾರ್ದಿಕ್ ಪ್ರಪೋಸ್ ಮಾಡಿದ ರೀತಿ, ಅದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.
- 2020ರ ಮೇ ನಲ್ಲಿ ಗರ್ಭಧಾರಣೆಯ: ಇಬ್ಬರು ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡ ಕೆಲವೇ ತಿಂಗಳುಗಳ ನಂತರ, ಅಂದರೆ ಮೇ 2020 ರಲ್ಲಿ ನತಾಶಾ ಗರ್ಭಾವತಿ ಎಂಬ ಸುದ್ದಿ ಹೊರಬಿದ್ದಿತ್ತು.
- 2020ರ ಜುಲೈನಲ್ಲಿ ಮಗ ಅಗಸ್ತ್ಯನ ಜನನ: ಜುಲೈ 2020 ರಲ್ಲಿ, ದಂಪತಿಗಳಿಬ್ಬರಿಗೆ ಗಂಡು ಮಗು ಜನಿಸಿತ್ತು. ಈ ಮಗುವಿಗೆ ಅಗಸ್ತ್ಯ ಎಂದು ಹೆಸರಿಡಲಾಗಿದೆ.
- 2023ರಲ್ಲಿ ಪ್ರೇಮಿಗಳ ದಿನದಂದು ಅದ್ಧೂರಿ ವಿವಾಹ; ಕೋವಿಡ್ನಿಂದಾಗಿ ಈ ಇಬ್ಬರು ಮೊದಲು ಕೋರ್ಟ್ ಮದುವೆಯಾಗಿದ್ದರು. ನಂತರ ಹಾರ್ದಿಕ್ ಮತ್ತು ನತಾಶಾ ಫೆಬ್ರವರಿ 2023 ರಲ್ಲಿ ಉದಯಪುರದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಾಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
- 2024ರ ಮೇ ತಿಂಗಳಲ್ಲಿ ವಿಚ್ಛೇದನ ವದಂತಿ: ಈ ನಡುವೆ ಅಂದರೆ 2024ರ ಮೇ ತಿಂಗಳಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಶುರುವಾಯಿತು. ಇದಕ್ಕೆ ಪೂರಕವಾಗಿ ಇಬ್ಬರೂ ಇನ್‌ಸ್ಟಾದಿಂದ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದರು. ಆ ಬಳಿಕ ಈ ಇಬ್ಬರ ವಿಚ್ಛೇದನ ಸುದ್ದಿಗೆ ವೇಗ ಸಿಕ್ಕಿತು. ಇದೀಗ ಹಾರ್ದಿಕ್ ತಮ್ಮ ಇನ್‌ಸ್ಟಾ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಇಬ್ಬರೂ ಅಧಿಕೃತವಾಗಿ ಬೇರ್ಪಟ್ಟಿದ್ದೇವೆ ಎಂಬುದನ್ನು ಖಚಿತಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ