GT vs MI, IPL 2024: ಮುಂಬೈ ಸೋತ ಬಳಿಕ ರೋಹಿತ್-ಹಾರ್ದಿಕ್ ನಡುವೆ ಜಗಳ: ವೈರಲ್ ಆಗುತ್ತಿದೆ ವಿಡಿಯೋ

|

Updated on: Mar 25, 2024 | 8:25 AM

Rohit Sharma and Hardik Pandya Fight Video: ಐಪಿಎಲ್ 2024ರ ತಮ್ಮ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಸೋಲು ಕಂಡಿದೆ. ಮ್ಯಾಚ್ ಮಗಿದ ಬಳಿಕ ರೋಹಿತ್ ಶರ್ಮಾ ಗುಜರಾತ್ ಆಟಗಾರರೊಂದಿಗೆ ಮಾತನಾಡುತ್ತಿದ್ದರು, ಈ ಸಂದರ್ಭ ಅಲ್ಲಿಗೆ ಹಾರ್ದಿಕ್ ಬಂದಿದ್ದು, ಇವರಿಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದೆ.

GT vs MI, IPL 2024: ಮುಂಬೈ ಸೋತ ಬಳಿಕ ರೋಹಿತ್-ಹಾರ್ದಿಕ್ ನಡುವೆ ಜಗಳ: ವೈರಲ್ ಆಗುತ್ತಿದೆ ವಿಡಿಯೋ
Rohit Sharma and Hardik Pandya Fight
Follow us on

ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ (GT vs MI) ಆರು ರನ್‌ಗಳ ಸೋಲು ಅನುಭವಿಸಿತು. ಮುಂಬೈ ನಾಯಕನಾಗಿ ಹಾರ್ದಿಕ್ ಪಾಂಡ್ಯಗೆ ಇದು ಮೊದಲ ಪಂದ್ಯವಾಗಿದ್ದು, ಮಾಜಿ ನಾಯಕ ರೋಹಿತ್ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿದರು. ಆಟದ ಉದ್ದಕ್ಕೂ ಹಾರ್ದಿಕ್ ಅವರನ್ನು ಅಭಿಮಾನಿಗಳು ಟ್ರೋಲ್ ಮಾಡಿದರೆ, ಮತ್ತೊಂದೆಡೆ ರೋಹಿತ್ ಶರ್ಮಾ ಘೋಷಣೆಗಳು ಇಡೀ ಸ್ಟೇಡಿಯಂನಲ್ಲಿ ಕೇಳುತ್ತಲೇ ಇತ್ತು. ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ಹಸ್ತಾಂತರಿಸುವ ಎಂಐ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ.

ರೋಹಿತ್ – ಹಾರ್ದಿಕ್ ಜಗಳ ವೈರಲ್ ಆಗಿದೆ

ಏತನ್ಮಧ್ಯೆ, ರೋಹಿತ್ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಅವರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರೋಹಿತ್ ಶರ್ಮಾ ಜಿಟಿ ಆಟಗಾರರೊಂದಿಗೆ ಮಾತನಾಡುತ್ತಿದ್ದರು, ಈ ಸಂದರ್ಭ ಹಾರ್ದಿಕ್ ಬಂದು ರೋಹಿತ್ ಅವರನ್ನು ತಬ್ಬಿಕೊಂಡಿದ್ದಾರೆ. ಆಗ ಹಿಟ್​ಮ್ಯಾನ್ ಹಾರ್ದಿಕ್ ಅವರನ್ನು ದೂರ ತಳ್ಳಿದ್ದು, ನಂತರ ಯಾವುದೋ ವಿಷಯಕ್ಕೆ ಜಗಳವಾಗಿದೆ. ಬಹುಶಃ ಸೋಲಿನ ಬಗ್ಗೆ ಮಾತುಕತೆ ನಡೆಯುತ್ತಿರವಂತೆ ಕಾಣುತ್ತಿತ್ತು. ಈ ವಿಡಿಯೋ ಮಾತ್ರ ಸಖತ್ ವೈರಲ್ ಆಗಿವೆ.

ಇಂದು RCB vs PBKS ಪಂದ್ಯ: ಫಾಫ್ ಪಡೆಯಲ್ಲಿ 2 ಬದಲಾವಣೆ ಖಚಿತ, ಪ್ಲೇಯಿಂಗ್ XI ನೋಡಿ

ರೋಹಿತ್ – ಹಾರ್ದಿಕ್ ಜಗಳದ ವಿಡಿಯೋ ಇಲ್ಲಿದೆ:

 

ಪಂದ್ಯದ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದ್ದು, ಹಾರ್ದಿಕ್ ಪಾಂಡ್ಯ ಫೀಲ್ಡ್ ಸೆಟ್ ಮಾಡುವಾಗ ರೋಹಿತ್ ಶರ್ಮಾ ಅವರನ್ನು ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡಲು ಕಳುಹಿಸಿದರು, ಇದರಿಂದ ರೋಹಿತ್ ಶರ್ಮಾ ದಿಗ್ಭ್ರಮೆಗೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನುಭವಿ ರೋಹಿತ್‌ರನ್ನು ಅವಮಾನಿಸಿದ್ದಕ್ಕಾಗಿ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಐಪಿಎಲ್ 2024 ಪಾಯಿಂಟ್ಸ್ ಟೇಬಲ್​ನಲ್ಲಿ ಬಿಗ್ ಚೇಂಜ್: ಅಗ್ರಸ್ಥಾನದಿಂದ ಸಿಎಸ್​ಕೆ ಔಟ್

ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ಅವಮಾನ ಮಾಡಿದ ವಿಡಿಯೋ:

 

ಮುಂಬೈಗೆ ಸೋಲು:

ಮುಂಬೈ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಗುಜರಾತ್ ಟೈಟಾನ್ಸ್ ಅನ್ನು ಕೇವಲ 168 ರನ್​ಗಳಿಗೆ ಕಟ್ಟಿ ಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಎಂಐಗೆ ರೋಹಿತ್ ಶರ್ಮಾ 43 ರನ್ ಸಿಡಿಸಿ ಉತ್ತಮ ಆರಂಭ ಒದಗಿಸಿದರು. ಆದಾಗ್ಯೂ, ಕ್ರಿಕೆಟ್​ನಲ್ಲಿ ಏನು ಬೇಕಾದರು ಸಂಭವಿಸಬಹುದು ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಯಿತು. 107 ರನ್​ಗೆ 3ನೇ ವಿಕೆಟ್ ಕಳೆದುಕೊಂಡ ಮುಂಬೈ 160 ರನ್​ಗೆ 9 ವಿಕೆಟ್ ಪತನಗೊಂಡವು. ಮುಂಬೈಯ ದಿಢೀರ್ ಕುಸಿತ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಮತ್ತೊಂದೆಡೆ ಶುಭ್​ಮನ್ ಗಿಲ್ ತಮ್ಮ ಚೊಚ್ಚಲ ನಾಯಕತ್ವದಲ್ಲಿ ಭರ್ಜರಿ ಜಯ ಸಾಧಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ