ಐಪಿಎಲ್ 2022 (IPL 2022)ರಲ್ಲಿ, ಭಾನುವಾರ ಎರಡು ಪಂದ್ಯಗಳು ನಡೆಯಲಿವೆ. ಸಂಜೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (Royal Challengers Bangalore and Mumbai Indians) ಮುಖಾಮುಖಿಯಾಗಲಿವೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಕಳಪೆ ಆರಂಭವನ್ನು ಹೊಂದಿದೆ, ಹಿಂದಿನ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತಿದ್ದು, ಪಂದ್ಯಾವಳಿಯಲ್ಲಿ ಇನ್ನೂ ಖಾತೆಯನ್ನು ತೆರೆಯಲು ಸಾಧ್ಯವಾಗಿಲ್ಲ. ಮತ್ತೊಂದೆಡೆ, ಫಾಫ್ ಡು ಪ್ಲೆಸಿಸ್ ತಂಡವು ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತ್ತು. ನಂತರ ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ, ಗೆಲುವಿನ ಲಯಕ್ಕೆ ಮರಳಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೆಕೆಆರ್ ವಿರುದ್ಧ ಸೋತಿತು. ಈ ಕಾರಣಕ್ಕಾಗಿಯೇ ತಂಡವು ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲು ಬಯಸುತ್ತದೆ.
ಆರ್‌ಸಿಬಿ ಮೇಲೆ ಮುಂಬೈ ಮೇಲುಗೈ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಆರಂಭದಿಂದಲೂ ಲೀಗ್‌ನ ಭಾಗವಾಗಿವೆ. ಎರಡೂ ತಂಡಗಳ ದಾಖಲೆಗಳ ಬಗ್ಗೆ ಮಾತನಾಡುವುದಾದರೆ, ಕಳೆದ 14 ಸೀಸನ್‌ಗಳಲ್ಲಿ ಉಭಯ ತಂಡಗಳು 31 ಬಾರಿ ಮುಖಾಮುಖಿಯಾಗಿದ್ದಾರೆ. ಈ 31 ಪಂದ್ಯಗಳ ಫಲಿತಾಂಶದ ಪ್ರಕಾರ ಮುಂಬೈ ತಂಡ ಮುಂದಿದೆ. ಮುಂಬೈ 31 ಪಂದ್ಯಗಳಲ್ಲಿ 19 ಪಂದ್ಯಗಳನ್ನು ಗೆದ್ದಿದ್ದರೆ, ಬೆಂಗಳೂರು 12 ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ನಾವು ಕಳೆದ ಋತುವಿನ ಬಗ್ಗೆ ಮಾತನಾಡುವುದಾದರೆ, ಇಲ್ಲಿ ವಿರಾಟ್ ಕೊಹ್ಲಿಯ ಆರ್‌ಸಿಬಿ ಮೇಲುಗೈ ತೋರುತ್ತಿದೆ. 14ನೇ ಋತುವಿನಲ್ಲಿ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಎರಡೂ ಪಂದ್ಯಗಳನ್ನು ಆರ್‌ಸಿಬಿ ಗೆದ್ದಿತ್ತು.
ಕಳೆದ ಋತುವಿನಲ್ಲಿ ಆರ್‌ಸಿಬಿ ಎರಡೂ ಪಂದ್ಯಗಳನ್ನು ಗೆದ್ದಿತ್ತು
ಹಿಂದಿನ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಇಲ್ಲಿ ಮುಂಬೈ ಇಂಡಿಯನ್ಸ್ ನಿರಾಶಾದಾಯಕ ಸೋಲನ್ನು ಎದುರಿಸಬೇಕಾಯಿತು. ಮೊದಲು ಬ್ಯಾಟ್ ಮಾಡಿದ RCB 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 51 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 56 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ರೋಹಿತ್ ಶರ್ಮಾ ತಂಡ 18 ಓವರ್‌ಗಳಲ್ಲಿ 111 ರನ್ ಗಳಿಸಿ ಆಲೌಟ್ ಆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರು. ಚಹಲ್ ಮೂರು ಮತ್ತು ಮ್ಯಾಕ್ಸ್‌ವೆಲ್ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ: Dewald Brevis IPL 2022: ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ ಪ್ರೇಯಸಿ ಯಾರು ಗೊತ್ತಾ? ಫೋಟೋ ನೋಡಿ