CSK vs SRH: ಸೋಲಿನ ಸುಳಿಯಲ್ಲಿರುವ ಎರಡೂ ತಂಡಗಳಿಗು ಗೆಲುವು ಅನಿವಾರ್ಯ; ಉಭಯ ತಂಡಗಳ ಸಂಭಾವ್ಯ XI
CSK vs SRH Playing XI IPL 2022: ಇದುವರೆಗೆ ಚೆನ್ನೈ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದು, ಮೂರರಲ್ಲೂ ಸೋಲನ್ನು ಎದುರಿಸಬೇಕಾಗಿದೆ. ಈಗ ಈ ತಂಡವು ಶನಿವಾರದಂದು ಡಬಲ್ ಹೆಡರ್ ದಿನದಂದು ದಿನದ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.
ಐಪಿಎಲ್ 2022 (IPL 2022)ರಲ್ಲಿ ಪ್ರಸ್ತುತ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)ನಿಂದ ನಿರೀಕ್ಷಿಸಿದ ರೀತಿಯ ಪ್ರದರ್ಶನವನ್ನು ಇನ್ನೂ ನೋಡಲಾಗಿಲ್ಲ. ಋತುವಿನ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ನಾಯಕತ್ವ ತ್ಯಜಿಸಿ ರವೀಂದ್ರ ಜಡೇಜಾ (Ravindra Jadeja) ಅವರನ್ನು ನಾಯಕರನ್ನಾಗಿ ಮಾಡಿದ್ದರು. ಜಡೇಜಾ ಅವರ ನಾಯಕತ್ವದ ವೃತ್ತಿಜೀವನವು ಉತ್ತಮವಾಗಿ ಪ್ರಾರಂಭವಾಗಲಿಲ್ಲ. ಅವರ ನಾಯಕತ್ವದಲ್ಲಿ ಇದುವರೆಗೆ ಚೆನ್ನೈ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದು, ಮೂರರಲ್ಲೂ ಸೋಲನ್ನು ಎದುರಿಸಬೇಕಾಗಿದೆ. ಈಗ ಈ ತಂಡವು ಶನಿವಾರದಂದು ಡಬಲ್ ಹೆಡರ್ ದಿನದಂದು ದಿನದ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ಸನ್‌ರೈಸರ್ಸ್ ಕೂಡ ಈ ಋತುವಿನಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋತಿದೆ. ಅದೇನೆಂದರೆ ನಾಳಿನ ಪಂದ್ಯದಲ್ಲಿ ಒಂದಂತೂ ಖಚಿತವಾಗಿದ್ದು, ಉಭಯ ತಂಡಗಳ ಪೈಕಿ ಯಾವುದಾದರೊಂದು ಗೆಲುವಿನ ಖಾತೆ ತೆರೆಯಲಿದೆ.
ಈ ಋತುವಿನಲ್ಲಿ ಚೆನ್ನೈಗೆ ಬಹಳಷ್ಟು ಸಂಗತಿಗಳು ಕೆಟ್ಟದಾಗಿವೆ. ತಂಡದ ಬ್ಯಾಟಿಂಗ್ ವಿಭಾಗ ಕ್ಲಿಕ್ ಆಗಲಿಲ್ಲ, ಬೌಲರ್‌ಗಳು ಸಹ ಕೆಲಸ ಮಾಡಲಿಲ್ಲ. ಇಲ್ಲಿಯವರೆಗೆ ಕೇವಲ ಒಂದು ಪಾಸಿಟಿವ್ ಅಂಶ ಕಂಡಿದ್ದು, ಅದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಫಾರ್ಮ್ ಆಗಿದೆ. ಧೋನಿ ಸತತವಾಗಿ ವೇಗವಾಗಿ ರನ್ ಗಳಿಸುತ್ತಿದ್ದಾರೆ.
ಚೆನ್ನೈ ಬದಲಾಗುತ್ತಾ? ಚೆನ್ನೈ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿಯುವುದಂತೂ ಖಂಡಿತ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅವರು ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆ ತೀರಾ ಕಡಿಮೆ. ಚೆನ್ನೈ ತಂಡದಲ್ಲಿ ಒಂದು ಬದಲಾವಣೆಯನ್ನು ನಿರೀಕ್ಷಿಸಬಹುದು ಮತ್ತು ಈ ಬದಲಾವಣೆಯು ಬೌಲಿಂಗ್‌ನಲ್ಲಿರಬಹುದು. ಮುಖೇಶ್ ಚೌಧರಿ ಕಳೆದೆರಡು ಪಂದ್ಯಗಳಿಂದ ಆಡುವ ಅವಕಾಶ ಪಡೆದಿದ್ದರೂ ಪ್ರಭಾವವನ್ನು ಬೀರಲು ಸಾಧ್ಯವಾಗಲಿಲ್ಲ. ಅವರ ಸ್ಥಾನಕ್ಕೆ ಚೆನ್ನೈ ತಂಡದ ಮ್ಯಾನೇಜ್‌ಮೆಂಟ್ ಇತ್ತೀಚೆಗೆ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ರಾಜವರ್ಧನ್ ಹೆಂಗರ್ಗೆಕರ್‌ಗೆ ಅವಕಾಶ ನೀಡಬಹುದು. ಅಥವಾ ಅವರ ಜಾಗದಲ್ಲಿ ಕೆ.ಎಂ.ಆಸಿಫ್ ಅಥವಾ ತುಷಾರ್ ದೇಶಪಾಂಡೆ ಅವರಿಗೂ ಅವಕಾಶ ನೀಡಬಹುದು.
ಹೈದರಾಬಾದ್‌ಗೆ ಸಂಕಟ ಈ ಋತುವಿನಲ್ಲಿ ಹೈದರಾಬಾದ್‌ಗೆ ಸರಿಯಾದ ಸಂಯೋಜನೆಯನ್ನು ಮಾಡುವುದು ಕಷ್ಟಕರವಾಗಿದೆ. ಕೇನ್ ವಿಲಿಯಮ್ಸನ್ ಅವರೊಂದಿಗೆ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ವಿಲಿಯಮ್ಸನ್ ನಂಬರ್-3ರಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದರೆ, ರಾಹುಲ್ ತ್ರಿಪಾಠಿ ಅವರನ್ನು ಓಪನರ್ ಆಗಿ ಕಳುಹಿಸಬಹುದು. ಅಬ್ದುಲ್ ಸಮದ್ ಬದಲಿಗೆ ಪ್ರಿಯಮ್ ಗರ್ಗ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.
ಎರಡೂ ತಂಡಗಳ ಸಂಭಾವ್ಯ XI ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ (ನಾಯಕ), ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ, ಡ್ವೇನ್ ಬ್ರಾವೋ, ಡ್ವೇನ್ ಪ್ರಿಟೋರಿಯಸ್, ಕ್ರಿಸ್ ಜೋರ್ಡಾನ್, ರಾಜವರ್ಧನ್ ಹೆಂಗರ್ಗೆಕರ್/ತುಷಾರ್ ದೇಶಪಾಂಡೆ
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್, ಪ್ರಿಯಾಂ ಗಾರ್ಗ್, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ.ನಟರಾಜನ್.
ಇದನ್ನೂ ಓದಿ:IPL 2022: ಲಕ್ನೋ ಎದುರು ಸೋತ ಡೆಲ್ಲಿಗೆ ದಂಡದ ಬರೆ! ಲಕ್ಷ ಲಕ್ಷ ಕಳೆದುಕೊಂಡ ನಾಯಕ ರಿಷಭ್ ಪಂತ್