Shikhar Dhawan: ಶಿಖರ್ ಧವನ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡ್ತಾರಾ? ಇಲ್ಲಿದೆ ಉತ್ತರ

| Updated By: ಝಾಹಿರ್ ಯೂಸುಫ್

Updated on: Jun 21, 2022 | 3:15 PM

T20 World Cup 2022: ಶಿಖರ್ ಧವನ್ ಟೀಮ್ ಇಂಡಿಯಾ ಪರ ಇದುವರೆಗೆ 68 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 126.36 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1759 ರನ್ ಗಳಿಸಿದ್ದಾರೆ.

Shikhar Dhawan: ಶಿಖರ್ ಧವನ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡ್ತಾರಾ? ಇಲ್ಲಿದೆ ಉತ್ತರ
Shikhar Dhawan
Follow us on

ಇಂಡಿಯನ್ ಪ್ರೀಮಿಯರ್ ಲೀಗ್‌ ಸೀಸನ್​ 15 ನಲ್ಲಿ ಪಂಜಾಬ್ ಕಿಂಗ್​ ಪರ ಕಣಕ್ಕಿಳಿದಿದ್ದ ಶಿಖರ್ ಧವನ್ (Shikhar Dhawan) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದಾಗ್ಯೂ ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಶಿಖರ್​ಗೆ ಅವಕಾಶ ದೊರಕಿರಲಿಲ್ಲ. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರೋಹಿತ್ ಶರ್ಮಾ ಸೇರಿದಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಭಾರತ ತಂಡವು ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿತು. ಇದರಿಂದ ತಂಡದಲ್ಲಿ ಕೆಲವು ಯುವ ಆಟಗಾರರಿಗೆ ಅವಕಾಶ ಲಭಿಸಿತೇ ಹೊರತು, ಅನುಭವಿ ಧವನ್​ಗೆ ಮಾತ್ರ ಸ್ಥಾನ ಸಿಕ್ಕಿರಲಿಲ್ಲ. ಇನ್ನು ಕೆಲವೇ ತಿಂಗಳುಗಳಲ್ಲಿ ಟಿ20 ವಿಶ್ವಕಪ್​ ಜರುಗಲಿದೆ. ಈ ವೇಳೆಗೆ ರಾಷ್ಟ್ರೀಯ ತಂಡಕ್ಕೆ ಗಬ್ಬರ್ ಕಂಬ್ಯಾಕ್ ಮಾಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ದಂತಕಥೆ ಸುನಿಲ್ ಗವಾಸ್ಕರ್, ಶಿಖರ್ ಧವನ್ ತಂಡಕ್ಕೆ ಮರಳುವುದು ಅನುಮಾನ ಎಂದಿದ್ದಾರೆ. ಏಕೆಂದರೆ ಶಿಖರ್ ಧವನ್ ಹೆಸರು ಆಯ್ಕೆ ಸಮಿತಿ ಪರಿಗಣಿಸುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಅವರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದ್ದರೆ, ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಇರುತ್ತಿದ್ದರು. ಆದರೆ ಅವರು ಆಯ್ಕೆ ಸಮಿತಿಯ ಆಯ್ಕೆಯಲ್ಲೇ ಇಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

ಇದೀಗ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದದ ಸರಣಿಗೆ ತೆರಳಿದೆ. ಮತ್ತೊಂದೆಡೆ ಐರ್ಲೆಂಡ್ ವಿರುದ್ದದ ಸರಣಿಗೂ ಟೀಮ್ ಇಂಡಿಯಾ ಆಯ್ಕೆಯಾಗಿದೆ. ಒಂದು ವೇಳೆ ಆಯ್ಕೆ ಸಮಿತಿಯ ಲೀಸ್ಟ್​ನಲ್ಲಿ ಧವನ್ ಹೆಸರು ಇದ್ದಿದ್ದರೆ, ಈ ತಂಡಗಳಲ್ಲಿ ಅವರು ಇರಬೇಕಿತ್ತು. ಆದರೆ ಎರಡೂ ತಂಡಗಳಲ್ಲೂ ಶಿಖರ್ ಧವನ್ ಅವರನ್ನು ಪರಿಗಣಿಸಲಾಗಿಲ್ಲ. ಹೀಗಾಗಿ ಅವರು ಟೀಮ್ ಇಂಡಿಯಾಗೆ ಮರಳುವುದಿಲ್ಲ ಎಂದೇ ಹೇಳಬಹುದು ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಪ್ರಸ್ತುತ ಸರಣಿಗಳು ಟೀಮ್ ಇಂಡಿಯಾ ಬಹಳ ಮುಖ್ಯ. ಇನ್ನು ಕೆಲವೇ ತಿಂಗಳುಗಳಲ್ಲಿ ಟಿ20 ವಿಶ್ವಕಪ್ ಬರಲಿದೆ. ಆದರೆ ಈ ಸರಣಿಗಳಿಗೇ ಶಿಖರ್ ಧವನ್ ಆಯ್ಕೆಯಾಗಿಲ್ಲ ಎಂದರೆ, ಅವರು ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಟೀಮ್ ಇಂಡಿಯಾದಲ್ಲೂ ಇರುವುದಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸುನಿಲ್ ಗವಾಸ್ಕರ್ ಅಭಿಪ್ರಾಯದಂತೆ ಶಿಖರ್ ಧವನ್​​ಗೆ ಟೀಮ್ ಇಂಡಿಯಾ ಬಾಗಿಲು ಈಗಾಗಲೇ ಮುಚ್ಚಿದೆ. ಇನ್ನು ಅವರ ಸ್ಥಾನದಲ್ಲಿ ಯುವ ಆಟಗಾರರು ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ. ಏಕೆಂದರೆ ಟೀಮ್ ಇಂಡಿಯಾದಲ್ಲಿ ಇದೀಗ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಇದ್ದಾರೆ. ಇನ್ನು ಬದಲಿ ಆರಂಭಿಕರಾಗಿ ಇಶಾನ್ ಕಿಶನ್ ಹಾಗೂ ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆಯುತ್ತಾ ಬರುತ್ತಿದ್ದಾರೆ. ಹೀಗಾಗಿ ಆರಂಭಿಕನ ಸ್ಥಾನದಲ್ಲಿ 36 ವರ್ಷದ ಶಿಖರ್ ಧವನ್ ಕಂಬ್ಯಾಕ್ ಮಾಡುವುದು ಅನುಮಾನ ಎಂದೇ ಹೇಳಬಹುದು.

ಶಿಖರ್ ಧವನ್ ಈ ಬಾರಿಯ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ 14 ಪಂದ್ಯಗಳಲ್ಲಿ 122.66 ಸ್ಟ್ರೈಕ್ ರೇಟ್‌ನಲ್ಲಿ 460 ರನ್ ಗಳಿಸಿದ್ದರು. ಇನ್ನು ಟೀಮ್ ಇಂಡಿಯಾ ಪರ ಇದುವರೆಗೆ 68 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 126.36 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1759 ರನ್ ಗಳಿಸಿದ್ದಾರೆ. ಇದಾಗ್ಯೂ ಅನುಭವಿ ಆಟಗಾರನನ್ನು ಸೌತ್ ಆಫ್ರಿಕಾ ಹಾಗೂ ಐರ್ಲೆಂಡ್ ವಿರುದ್ದದ ಟಿ20 ಸರಣಿಗೆ ಆಯ್ಕೆ ಮಾಡಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಯುಗಾಂತ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.