IND vs PAK: ಭಾರತ- ಪಾಕ್ ಟಿ20 ವಿಶ್ವಕಪ್ ಪಂದ್ಯಕ್ಕೆ ಅಂಪೈರ್​ಗಳ ನೇಮಕ

|

Updated on: Sep 28, 2024 | 6:48 PM

Women’s T20 World Cup 2024: ಅಕ್ಟೋಬರ್ 6 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ- ಪಾಕ್ ನಡುವಿನ ಪಂದ್ಯಕ್ಕೆ ಆಸ್ಟ್ರೇಲಿಯಾದ ಎಲೋಯಿಸ್ ಶೆರಿಡನ್ ಮತ್ತು ದಕ್ಷಿಣ ಆಫ್ರಿಕಾದ ಲಾರೆನ್ ಅಜೆನ್‌ಬಾಗ್ ಆನ್-ಫೀಲ್ಡ್ ಅಂಪೈರ್‌ಗಳಾಗಿ ನೇಮಕಗೊಂಡಿದ್ದರೆ, ಮೂರನೇ ಅಂಪೈರ್ ಆಗಿ ವೆಸ್ಟ್ ಇಂಡೀಸ್​ನ ಜಾಕ್ವೆಲಿನ್ ವಿಲಿಯಮ್ಸ್ ಕಾರ್ಯನಿರ್ವಹಿಸಲಿದ್ದಾರೆ.

IND vs PAK: ಭಾರತ- ಪಾಕ್ ಟಿ20 ವಿಶ್ವಕಪ್ ಪಂದ್ಯಕ್ಕೆ ಅಂಪೈರ್​ಗಳ ನೇಮಕ
ಭಾರತ- ಪಾಕಿಸ್ತಾನ
Follow us on

ಇದೇ ಅಕ್ಟೋಬರ್ 3 ರಿಂದ ಮಹಿಳೆಯರ ಟಿ20 ವಿಶ್ವಕಪ್ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಆರಂಭವಾಗಲಿದೆ. ಈ ಟೂರ್ನಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವ ಐಸಿಸಿ ಇದೀಗ ಈ ಪಂದ್ಯಾವಳಿಗೆ ಪಂದ್ಯದ ಅಧಿಕಾರಿಗಳನ್ನು ನೇಮಿಸಿದೆ. ಅಂದರೆ ಯಾವ ಪಂದ್ಯಕ್ಕೆ ಯಾರು ಫೀಲ್ಡ್ ಅಂಪೈರ್​ಗಳಾಗಿರುತ್ತಾರೆ? ಯಾರು ಮ್ಯಾಚ್ ರೆಫ್ರಿ? ಯಾರು ಮೂರನೇ ಅಂಪೈರ್ ಎಂಬುದು ಇದೀಗ ಹೊರಬಿದ್ದಿದೆ. ಅದರಂತೆ ಟೂರ್ನಿಯಲ್ಲಿ ನಡೆಯಲ್ಲಿರುವ ಭಾರತ ಹಾಗೂಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಆನ್-ಫೀಲ್ಡ್ ಅಂಪೈರ್‌ಗಳನ್ನು ಘೋಷಿಸಲಾಗಿದೆ.

ಭಾರತ- ಪಾಕ್ ಪಂದ್ಯ

ಅದರಂತೆ ಅಕ್ಟೋಬರ್ 6 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ- ಪಾಕ್ ನಡುವಿನ ಪಂದ್ಯಕ್ಕೆ ಆಸ್ಟ್ರೇಲಿಯಾದ ಎಲೋಯಿಸ್ ಶೆರಿಡನ್ ಮತ್ತು ದಕ್ಷಿಣ ಆಫ್ರಿಕಾದ ಲಾರೆನ್ ಅಜೆನ್‌ಬಾಗ್ ಆನ್-ಫೀಲ್ಡ್ ಅಂಪೈರ್‌ಗಳಾಗಿ ನೇಮಕಗೊಂಡಿದ್ದರೆ, ಮೂರನೇ ಅಂಪೈರ್ ಆಗಿ ವೆಸ್ಟ್ ಇಂಡೀಸ್​ನ ಜಾಕ್ವೆಲಿನ್ ವಿಲಿಯಮ್ಸ್ ಕಾರ್ಯನಿರ್ವಹಿಸಲಿದ್ದಾರೆ.

ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿರುವ ಪಂದ್ಯಾವಳಿಯ ಪಂದ್ಯದ ಅಂಪೈರ್‌ಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಅದರಂತೆ ಈ ವಿಶ್ವಕಪ್‌ನ ಎಲ್ಲಾ ಮ್ಯಾಚ್ ಅಂಪೈರ್‌ಗಳು ಮಹಿಳೆಯರೇ ಆಗಿದ್ದಾರೆ. ಟೂರ್ನಿಯಲ್ಲಿ ಭಾರತದ ಜಿಎಸ್ ಲಕ್ಷ್ಮಿ ಮ್ಯಾಚ್ ರೆಫರಿ ಆಗಿದ್ದರೆ, ವೃಂದಾ ರಾಠಿ ಭಾರತದಿಂದ ಆಯ್ಕೆಯಾಗಿರುವ ಏಕೈಕ ಅಂಪೈರ್ ಆಗಲಿದ್ದಾರೆ.

ಭಾರತದ ಮೊದಲ ಪಂದ್ಯ ಯಾವಾಗ?

ಅಕ್ಟೋಬರ್ 3 ರಂದು ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ನಡುವಿನ ಆರಂಭಿಕ ಪಂದ್ಯದೊಂದಿಗೆ ಟಿ20 ವಿಶ್ವಕಪ್ ಪ್ರಾರಂಭವಾಗಲಿದೆ. ಇನ್ನು ಟೀಂ ಇಂಡಿಯಾದ ವೇಳಾಪಟ್ಟಿಯನ್ನು ನೋಡುವುದಾದರೆ.. ಅಕ್ಟೋಬರ್ 4 ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಹರ್ಮನ್‌ಪ್ರೀತ್ ಪಡೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ವಿಲಿಯಮ್ಸ್ ಮತ್ತು ಇಂಗ್ಲೆಂಡ್‌ನ ಅನ್ನಾ ಹ್ಯಾರಿಸ್ ಈ ಪಂದ್ಯದಲ್ಲಿ ಅಂಪೈರ್ ಆಗಲಿದ್ದು, ಪೊಲೊಸಾಕ್ ಟಿವಿ ಅಂಪೈರ್ ಆಗಲಿದ್ದಾರೆ. ಆ ನಂತರ ಅಕ್ಟೋಬರ್ 9 ರಂದು, ಭಾರತ ಶ್ರೀಲಂಕಾ ವಿರುದ್ಧ ಪಂದ್ಯವನ್ನು ಆಡಲಿದ್ದು, ಈ ಪಂದ್ಯಕ್ಕೆ ನ್ಯೂಜಿಲೆಂಡ್‌ನ ಕಿಮ್ ಕಾಟನ್ ಝೀಲ್ಯಾಂಡ್ ಮತ್ತು ಅಜ್ನ್‌ಬಾಗ್ ಆನ್-ಫೀಲ್ಡ್ ಅಂಪೈರ್‌ಗಳಾಗಿದ್ದರೆ, ಇಂಗ್ಲೆಂಡ್‌ನ ಸುಜಾನ್ನೆ ರೆಡ್‌ಫಿಯರ್ನ್ ಟಿವಿ ಅಂಪೈರ್ ಆಗಿರುತ್ತಾರೆ.

ಉಳಿದಂತೆ ಅಕ್ಟೋಬರ್ 17, ಅಕ್ಟೋಬರ್ 18 ಮತ್ತು ಅಕ್ಟೋಬರ್ 20 ರಂದು ನಡೆಯಲಿರುವ ಸೆಮಿಫೈನಲ್ ಮತ್ತು ಫೈನಲ್‌ಗೆ ಅಂಪೈರ್ ಮತ್ತು ಮ್ಯಾಚ್ ರೆಫರಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಐಸಿಸಿ ತಿಳಿಸಿದೆ. ವಾಸ್ತವವಾಗಿ ಪಂದ್ಯಾವಳಿಯ ಒಂಬತ್ತನೇ ಆವೃತ್ತಿಯನ್ನು ಬಾಂಗ್ಲಾದೇಶ ಆಯೋಜಿಸಬೇಕಿತ್ತು. ಆದರೆ ದೇಶದಲ್ಲಿನ ರಾಜಕೀಯ ಅಶಾಂತಿಯಿಂದಾಗಿ ಇಡೀ ಪಂದ್ಯಾವಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ವರ್ಗಾಯಿಸಲಾಯಿತು.

ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜೀವನ್ ಸಜ್ನಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Sat, 28 September 24