2025 ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ 8 ತಂಡಗಳು ಯಾವ್ಯಾವು ಗೊತ್ತಾ?

|

Updated on: Nov 13, 2023 | 9:51 AM

ICC Champions Trophy 2025: ವಿಶ್ವಕಪ್​ನ ಲೀಗ್ ಸುತ್ತಿನ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆಯುವ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲ್ಲಿವೆ ಎಂದು ಈ ಹಿಂದೆ ಐಸಿಸಿ ಹೇಳಿತ್ತು. ಅದರಂತೆ ಈಗ ಏಕದಿನ ವಿಶ್ವಕಪ್​ನ ಲೀಗ್ ಸುತ್ತು ಮುಗಿದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆದಿರುವ ತಂಡಗಳ ಬಗ್ಗೆಯೂ ಖಚಿತತೆ ಸಿಕ್ಕಿದೆ.

2025 ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ 8 ತಂಡಗಳು ಯಾವ್ಯಾವು ಗೊತ್ತಾ?
2025 ರ ಚಾಂಪಿಯನ್ಸ್ ಟ್ರೋಫಿ
Follow us on

ಐಸಿಸಿ ಏಕದಿನ ವಿಶ್ವಕಪ್ 2023ರ (ICC ODI World Cup 2023) ಲೀಗ್ ಹಂತ ಇದೀಗ ಮುಕ್ತಾಯಗೊಂಡಿದೆ. ವಿಶ್ವಕಪ್ 2023 ರ ಲೀಗ್ ಹಂತದ ಕೊನೆಯ ಪಂದ್ಯ ಭಾರತ ಮತ್ತು ನೆದರ್ಲ್ಯಾಂಡ್ಸ್ (India Vs Netherlands) ನಡುವೆ ನಡೆಯಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 160 ರನ್‌ಗಳಿಂದ ಡಚ್ ತಂಡವನ್ನು ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಸೇನೆಗೆ ವಿಶ್ವಕಪ್​ನಲ್ಲಿ ಇದು ಸತತ 9ನೇ ಗೆಲುವಾಗಿದ್ದರೆ, ಇತ್ತ ಭಾರತವನ್ನು ಮಣಿಸಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (2025 ICC Champions Trophy) ಸ್ಥಾನ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದ್ದ ನೆದರ್ಲೆಂಡ್ಸ್ ತಂಡಕ್ಕೆ ನಿರಾಸೆ ಎದುರಾಗಿದೆ. ಮೇಲೆ ಹೇಳಿದಂತೆ ಈ ವಿಶ್ವಕಪ್​ನ ಲೀಗ್ ಸುತ್ತು ಮುಗಿದಿದ್ದು ಬುಧವಾರದಿಂದ ಸೆಮಿಫೈನಲ್‌ ಸುತ್ತು ಆರಂಭವಾಗಲಿದೆ. ಲೀಗ್ ಸುತ್ತು ಅಂತ್ಯಗೊಳ್ಳುವುದರೊಂದಿಗೆ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ 8 ತಂಡಗಳ ಪಟ್ಟಿಯೂ ಹೊರಬಿದ್ದಿದೆ.

ಅಗ್ರ 8 ತಂಡಗಳಿಗೆ ಆಧ್ಯತೆ

ವಾಸ್ತವವಾಗಿ 2025 ರಲ್ಲಿ ನಡೆಯಲ್ಲಿರವ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು 8 ತಂಡಗಳ ನಡುವೆ ಆಡಿಸಲಾಗುತ್ತಿದೆ. ಇನ್ನು ಈ ಟೂರ್ನಿಯಲ್ಲಿ ಆಡಲ್ಲಿರುವ 8 ತಂಡಗಳನ್ನು ಈ ಭಾರಿಯ ವಿಶ್ವಕಪ್​ನಲ್ಲಿ ಆಯ್ಕೆ ಮಾಡಲಾಗಿದೆ. ವಿಶ್ವಕಪ್​ನ ಲೀಗ್ ಸುತ್ತಿನ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆಯುವ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲ್ಲಿವೆ ಎಂದು ಈ ಹಿಂದೆ ಐಸಿಸಿ ಹೇಳಿತ್ತು. ಅದರಂತೆ ಈಗ ಏಕದಿನ ವಿಶ್ವಕಪ್​ನ ಲೀಗ್ ಸುತ್ತು ಮುಗಿದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆದಿರುವ ತಂಡಗಳ ಬಗ್ಗೆಯೂ ಖಚಿತತೆ ಸಿಕ್ಕಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆದಿರುವ ತಂಡಗಳನ್ನು ನೋಡುವುದಾದರೆ..

8 ತಂಡಗಳ ನಡುವೆ ಪಾಕಿಸ್ತಾನದಲ್ಲಿ ನಡೆಯಲ್ಲಿದೆ ಚಾಂಪಿಯನ್ಸ್ ಟ್ರೋಫಿ

ತಂಡಗಳು ಇಂತಿವೆ

  • ಭಾರತ
  • ದಕ್ಷಿಣ ಆಫ್ರಿಕಾ
  • ಆಸ್ಟ್ರೇಲಿಯಾ
  • ನ್ಯೂಜಿಲೆಂಡ್
  • ಪಾಕಿಸ್ತಾನ
  • ಅಫ್ಘಾನಿಸ್ತಾನ
  • ಇಂಗ್ಲೆಂಡ್
  • ಬಾಂಗ್ಲಾದೇಶ

ಪಾಕಿಸ್ತಾನದ ಆತಿಥ್ಯ

2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದ್ದರಿಂದ ಆತಿಥೇಯ ರಾಷ್ಟ್ರದ ಕಾರಣ, ಪಾಕಿಸ್ತಾನವು ಸ್ವಯಂಚಾಲಿತವಾಗಿ ಅರ್ಹತೆ ಪಡೆದಿದೆ. ಪಾಕಿಸ್ತಾನ ಹೊರತುಪಡಿಸಿ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 7 ಸ್ಥಾನ ಪಡೆದಿರುವ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿವೆ. ಈ ಹಿಂದೆ ಇಂಗ್ಲೆಂಡ್‌ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳುವ ಆತಂಕದಲ್ಲಿತ್ತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಉತ್ತಮ ಪುನರಾಗಮನ ಮಾಡಿ, ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ಸ್ಥಾನದಿಂದ ನೇರವಾಗಿ 7 ನೇ ಸ್ಥಾನಕ್ಕೆ ಜಿಗಿದಿದೆ.

ಕಳೆದ ಬಾರಿ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಾಗಿತ್ತು. ಆ ಆವೃತ್ತಿಯಲ್ಲಿ ಅಂದರೆ 2017ರಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಂದಿನಿಂದ ಒಮ್ಮೆಯೂ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿರಲಿಲ್ಲ. 8 ವರ್ಷಗಳ ನಂತರ ಈ ಮೆಗಾ ಐಸಿಸಿ ಟೂರ್ನಿಯನ್ನು 2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜಿಸಲಾಗುವುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ