ICC T20I Team: ಐಸಿಸಿ ವರ್ಷದ ಟಿ20 ತಂಡ ಪ್ರಕಟ: ನಾಲ್ವರು ಭಾರತೀಯರಿಗೆ ಸ್ಥಾನ

| Updated By: ಝಾಹಿರ್ ಯೂಸುಫ್

Updated on: Jan 22, 2024 | 3:14 PM

ICC Men's T20I Team of the Year for 2023: ಕಳೆದ ವರ್ಷ 18 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ 733 ರನ್ ಬಾರಿಸಿದ್ದರು. ಈ ವೇಳೆ 2 ಭರ್ಜರಿ ಶತಕಗಳನ್ನು ಕೂಡ ಸಿಡಿಸಿದ್ದರು. ಈ ಮೂಲಕ 2023ರ ಸಾಲಿನ ಅತ್ಯುತ್ತಮ ಟಿ20 ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಗುರುತಿಸಿಕೊಂಡಿದ್ದರು.

ICC T20I Team: ಐಸಿಸಿ ವರ್ಷದ ಟಿ20 ತಂಡ ಪ್ರಕಟ: ನಾಲ್ವರು ಭಾರತೀಯರಿಗೆ ಸ್ಥಾನ
Team India
Follow us on

ಇಂಟರ್​ನ್ಯಾಷನಲ್​ ಕ್ರಿಕೆಟ್ ಕೌನ್ಸಿಲ್ 2023ರ ಸಾಲಿನ ಟಿ20 ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಈ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ಆಯ್ಕೆಯಾಗಿದ್ದಾರೆ. ಕಳೆದ ವರ್ಷದ ಅತ್ಯುತ್ತಮ ಟಿ20 ಆಟಗಾರರನ್ನು ಒಳಗೊಂಡಿರುವ ಈ ತಂಡದಲ್ಲಿ ಭಾರತ ತಂಡದಿಂದ ನಾಲ್ವರು ಆಯ್ಕೆಯಾಗಿದ್ದರೆ, ಝಿಂಬಾಬ್ವೆ ತಂಡದಿಂದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಇನ್ನು ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್ ತಂಡಗಳಿಂದ ತಲಾ ಒಬ್ಬ ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ತಂಡದಲ್ಲಿರುವ ಭಾರತೀಯ ಆಟಗಾರರು:

ಸೂರ್ಯಕುಮಾರ್ ಯಾದವ್: 2023 ರಲ್ಲಿ 18 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ 733 ರನ್ ಬಾರಿಸಿದ್ದರು. ಈ ವೇಳೆ 2 ಭರ್ಜರಿ ಶತಕಗಳನ್ನು ಕೂಡ ಸಿಡಿಸಿದ್ದರು. ಹೀಗಾಗಿ 2023ರ ಸಾಲಿನ ಅತ್ಯುತ್ತಮ ಆಟಗಾರನಾಗಿ ಕಾಣಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್​ಗೆ ನಾಯಕನ ಪಟ್ಟ ನೀಡಲಾಗಿದೆ.

ಯಶಸ್ವಿ ಜೈಸ್ವಾಲ್: ಕಳೆದ ವರ್ಷ 15 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ್ದ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ 430 ರನ್​ ಕಲೆಹಾಕಿದ್ದಾರೆ. ಈ ಮೂಲಕ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರವಿ ಬಿಷ್ಣೋಯ್: 2023 ರಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ 44 ಓವರ್​ಗಳನ್ನು ಎಸೆದಿದ್ದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಒಟ್ಟು 18 ವಿಕೆಟ್ ಕಬಳಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಐಸಿಸಿ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

ಅರ್ಷದೀಪ್ ಸಿಂಗ್: ಕಳೆದ ವರ್ಷ ಟೀಮ್ ಇಂಡಿಯಾ ಪರ 23 ಟಿ20 ಪಂದ್ಯಗಳನ್ನಾಡಿದ ಎಡಗೈ ವೇಗಿ ಅರ್ಷದೀಪ್ ಸಿಂಗ್ 26 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ 2023 ರ ಸಾಲಿನ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: R Ashwin: 10+2 ವಿಕೆಟ್​ಗಳೊಂದಿಗೆ ವಿಶೇಷ ದಾಖಲೆ ಬರೆಯಲಿದ್ದಾರೆ ಅಶ್ವಿನ್

ಐಸಿಸಿ 2023ರ ಟಿ20 ತಂಡ ಹೀಗಿದೆ:

  • ಸೂರ್ಯಕುಮಾರ್ ಯಾದವ್ (ನಾಯಕ)
  • ಯಶಸ್ವಿ ಜೈಸ್ವಾಲ್ (ಭಾರತ)
  • ಫಿಲ್ ಸಾಲ್ಟ್ (ಇಂಗ್ಲೆಂಡ್)
  • ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)
  • ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್)
  • ಸಿಕಂದರ್ ರಾಝ (ಝಿಂಬಾಬ್ವೆ)
  • ಅಲ್ಪೇಶ್ ರಾಮ್​ಜಾನಿ (ಉಗಾಂಡ)
  • ಮಾರ್ಕ್ ಅಡೈರ್ (ಐರ್ಲೆಂಡ್)
  • ರವಿ ಬಿಷ್ಣೋಯ್ (ಭಾರತ)
  • ರಿಚರ್ಡ್ ನಾಗರವ (ಝಿಂಬಾಬ್ವೆ)
  • ಅರ್ಷದೀಪ್ ಸಿಂಗ್ (ಭಾರತ)

 

Published On - 3:12 pm, Mon, 22 January 24