20 ಓವರ್, 17 ರನ್, 7 ಬ್ಯಾಟರ್ಸ್​ ಶೂನ್ಯಕ್ಕೆ ಔಟ್! 12 ಎಸೆತಗಳಲ್ಲಿ ಗೆದ್ದ ಎದುರಾಳಿ; ಇದು ಟಿ20 ವಿಶ್ವಕಪ್ ಅರ್ಹತಾ ಪಂದ್ಯ

ಜಿಂಬಾಬ್ವೆಗೆ ಕೇವಲ 12 ಎಸೆತಗಳಲ್ಲಿ ಅಂದರೆ, 2 ಓವರ್‌ಗಳಲ್ಲಿ ಪಂದ್ಯವನ್ನು ತಮ್ಮ ಬತ್ತಳಿಕೆಗೆ ಹಾಕಿಕೊಂಡಿತು. ಈ ರೀತಿಯಾಗಿ 20 ಓವರ್‌ಗಳ ಗುರಿಯನ್ನು 18 ಓವರ್‌ಗಳು ಬಾಕಿ ಇರುವಂತೆ ಬೆನ್ನಟ್ಟಲಾಯಿತು.

20 ಓವರ್, 17 ರನ್, 7 ಬ್ಯಾಟರ್ಸ್​ ಶೂನ್ಯಕ್ಕೆ ಔಟ್! 12 ಎಸೆತಗಳಲ್ಲಿ ಗೆದ್ದ ಎದುರಾಳಿ; ಇದು ಟಿ20 ವಿಶ್ವಕಪ್  ಅರ್ಹತಾ ಪಂದ್ಯ
ಜಿಂಬಾಬ್ವೆ ಮಹಿಳಾ ತಂಡ
Updated By: ಪೃಥ್ವಿಶಂಕರ

Updated on: Sep 11, 2021 | 3:25 PM

ಟಿ 20 ಯಲ್ಲಿ ನೀವು ಎಷ್ಟು ರನ್ ಚೇಸ್‌ ಮಾಡಿದ್ದನ್ನು ನೋಡಿದ್ದೀರಿ? ಆದರೆ, ಕೇವಲ 12 ಎಸೆತಗಳಲ್ಲಿ ಗುರಿ ಬೆನ್ನಟ್ಟುವುದನ್ನು ನೀವು ಎಂದಾದರೂ ನೋಡಿದ್ದೀರಾ? ಪ್ರಾಯಶಃ ಇಲ್ಲ. ಆದರೆ ಜಿಂಬಾಬ್ವೆ ಹಾಗೆ ಮಾಡಿದೆ. ಅವರು ಮೊದಲು ಚೆಂಡಿನೊಂದಿಗೆ ಬಿರುಗಾಳಿ ಸೃಷ್ಟಿಸಿದರೆ ನಂತರ ಬ್ಯಾಟ್‌ನೊಂದಿಗೆ ಅಬ್ಬರಿಸಿ ಪಂದ್ಯವನ್ನು ಕೇವಲ 12 ಎಸೆತಗಳಲ್ಲಿ ಮುಗಿಸಿದರು. ನಾವು ಇಲ್ಲಿ ಮಾತನಾಡುತ್ತಿರುವುದು ಮಹಿಳಾ ಐಸಿಸಿ ಟಿ 20 ವಿಶ್ವಕಪ್ ಅರ್ಹತಾ ಪಂದ್ಯದ ಬಗ್ಗೆ. ಈ ಪಂದ್ಯದಲ್ಲಿ ಜಿಂಬಾಬ್ವೆ, ಇಸ್ವತಿನಿ ತಂಡದ ಎದುರು ಸ್ಪರ್ಧಿಸುತ್ತಿತ್ತು. ಜಿಂಬಾಬ್ವೆ ಈ ಟಿ 20 ಪಂದ್ಯವನ್ನು 10 ವಿಕೆಟ್ ಮತ್ತು 108 ಎಸೆತಗಳಿಂದ ಗೆದ್ದಿತ್ತು.

ಸ್ವಾಜಿಲ್ಯಾಂಡ್ ಎಂದೂ ಕರೆಯಲ್ಪಡುವ ಇಸ್ವತಿನಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿತು. ಎಸ್ವತಿನಿ ತಂಡದ ಬ್ಯಾಟರ್​ಗಳ ಆಟವು ಕೇವಲ 9.2 ಓವರ್‌ಗಳಲ್ಲಿ ಕೊನೆಗೊಂಡಿತು. ಹಲವು ಓವರ್‌ಗಳನ್ನು ಆಡಿದ ನಂತರ, ಅವರು ಖಾತೆಯಲ್ಲಿ ಕೇವಲ 17 ರನ್ ಗಳಿಸುವಲ್ಲಿ ಯಶಸ್ವಿಯಾದರು. ತಂಡದ 10 ರಲ್ಲಿ 7 ಬ್ಯಾಟರ್​ಗಳಿಗೆ ಖಾತೆ ತೆರೆಯುವುದು ಕೂಡ ಕಷ್ಟಕರವಾಗಿತ್ತು. ಅದರಲ್ಲೂ ಆ 17 ರನ್​ಗಳಿಗೆ ಹೆಚ್ಚಿನ ರನ್​ಗಳು ಹೆಚ್ಚುವರಿಯಾಗಿ ಬಂದಿದ್ದವು. ಅದೇ ಸಮಯದಲ್ಲಿ, ಬ್ಯಾಟರ್​ ಬ್ಯಾಟ್‌ನಿಂದ ಗರಿಷ್ಠ ಸ್ಕೋರ್ ಬಂದಿದ್ದು ಕೇವಲ 6 ರನ್.

ಜಿಂಬಾಬ್ವೆ ಬೌಲರ್‌ಗಳ ಅಬ್ಬರ
ಜಿಂಬಾಬ್ವೆ ಬೌಲರ್‌ಗಳು ಇಸ್ವತಿನಿ ತಂಡದ ಬ್ಯಾಟರ್​ಗಳನ್ನು ಇನ್ನಿಲ್ಲದಂತೆ ಕಾಡಿದರು. ಕೇವಲ 2 ಬೌಲರ್‌ಗಳು ಮಾತ್ರ 10 ರಲ್ಲಿ 9 ವಿಕೆಟ್ ಪಡೆದರು. ಈ ಬೌಲರ್‌ಗಳಲ್ಲಿ ಒಬ್ಬರಾದ ಬೋಫಾನಾ 4 ಓವರ್‌ಗಳಲ್ಲಿ 11 ಕ್ಕೆ 6 ವಿಕೆಟ್ ಪಡೆದರು. ಫಿರಿ 1.2 ಓವರ್‌ಗಳಲ್ಲಿ ಕೇವಲ 1 ರನ್ ನೀಡಿ 3 ವಿಕೆಟ್ ಪಡೆದರು. ಇದಲ್ಲದೇ, ಸಿಬಾಂಡ 1 ವಿಕೆಟ್ ಪಡೆದರು. ಬೋಫಾನಾ ತಮ್ಮ ಮಾರಕ ಬೌಲಿಂಗ್‌ಗಾಗಿ ಮತ್ತು ಅರ್ಧದಷ್ಟು ತಂಡವನ್ನು ನಾಶ ಮಾಡಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

12 ಬಾಲ್, ಗೇಮ್ ಮುಕ್ತಾಯ
ಜಿಂಬಾಬ್ವೆಗೆ ಕೇವಲ 12 ಎಸೆತಗಳಲ್ಲಿ ಅಂದರೆ, 2 ಓವರ್‌ಗಳಲ್ಲಿ ಪಂದ್ಯವನ್ನು ತಮ್ಮ ಬತ್ತಳಿಕೆಗೆ ಹಾಕಿಕೊಂಡಿತು. ಈ ರೀತಿಯಾಗಿ 20 ಓವರ್‌ಗಳ ಗುರಿಯನ್ನು 18 ಓವರ್‌ಗಳು ಬಾಕಿ ಇರುವಂತೆ ಬೆನ್ನಟ್ಟಲಾಯಿತು.