ಐಸಿಸಿ ಬಿಡುಗಡೆ ಮಾಡಿರುವ ವರ್ಷದ ಟಿ20 ಮಹಿಳಾ ಕ್ರಿಕೆಟ್ ತಂಡದಲ್ಲಿ (ICC T20 team of the year 2022) ಭಾರತ ವನಿತಾ ತಂಡದ ನಾಲ್ವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಸೋಮವಾರ, ಐಸಿಸಿ ಪ್ರಕಟಿಸಿರುವ ಅತ್ಯುತ್ತಮ ಮಹಿಳಾ ಟಿ20 ತಂಡವನ್ನು ಪ್ರತಿಯೊಬ್ಬ ಆಟಗಾರ್ತಿಯ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಈ ತಂಡದ ನಾಯಕತ್ವವನ್ನು ನ್ಯೂಜಿಲೆಂಡ್‌ನ ಸೋಫಿ ಡಿವೈನ್‌ಗೆ ವಹಿಸಲಾಗಿದ್ದು, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ವರ್ಷದ ಅತ್ಯುತ್ತಮ ಟಿ20 ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರ್ತಿಯರಲ್ಲಿ ಮೊದಲಿಗರಾಗಿದ್ದಾರೆ. ಅವರ ನಂತರ ದೀಪ್ತಿ ಶರ್ಮಾ (Deepti Sharma), ರಿಚಾ ಘೋಷ್ ಮತ್ತು ರೇಣುಕಾ ಸಿಂಗ್ (Richa Ghosh and Renuka Singh) ಹೆಸರುಗಳಿವೆ. ಐಸಿಸಿ ತಂಡದಲ್ಲಿ ಗರಿಷ್ಠ ಸಂಖ್ಯೆಯ 4 ಆಟಗಾರ್ತಿಯರು ಭಾರತದವರಾಗಿದ್ದು, ಇವರ ನಂತರ ಆಸ್ಟ್ರೇಲಿಯಾ ತಂಡದ 3 ಆಟಗಾರ್ತಿಯರು ಹಾಗೂ ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾದಿಂದ ತಲಾ ಒಬ್ಬೋಬ್ಬ ಆಟಗಾರ್ತಿಯರು ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸ್ಮೃತಿ ಮಂಧಾನ: 2022 ರಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿಯಾಗಿ ಅಬ್ಬರಿಸಿದ ಸ್ಮೃತಿ ಮಂಧಾನ 33 ರ ಸರಾಸರಿ ಹಾಗೂ 133.48 ರ ಸ್ಟ್ರೈಕ್ ರೇಟ್‌ನಲ್ಲಿ 594 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧದ ಮಹಿಳಾ ಏಷ್ಯಾಕಪ್‌ನ ಫೈನಲ್ ಸೇರಿದಂತೆ ಒಟ್ಟು 21 ಇನ್ನಿಂಗ್ಸ್‌ಗಳಲ್ಲಿ 5 ಅರ್ಧ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.
ದೀಪ್ತಿ ಶರ್ಮಾ: ಭಾರತದ ಸ್ಟಾರ್ ಬೌಲರ್ ದೀಪ್ತಿ ಕಳೆದ ವರ್ಷ ಟಿ20ಯಲ್ಲಿ 29 ವಿಕೆಟ್ ಪಡೆದಿದ್ದಲ್ಲದೆ ಈ ಸಾಧನೆಯ ಮೂಲಕ ಮಹಿಳೆಯರ ಟಿ20ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಬೌಲಿಂಗ್ನಲ್ಲಿ 18.55 ಸರಾಸರಿಯಲ್ಲಿ ವಿಕೆಟ್ ಕಬಳಿಸಿದ್ದ ದೀಪ್ತಿ, ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಿದ್ದು, 37ರ ಸರಾಸರಿ ಮತ್ತು 136.02 ಸ್ಟ್ರೈಕ್ ರೇಟ್‌ನಲ್ಲಿ 370 ರನ್ ಗಳಿಸಿದ್ದರು. ಹಾಗೆಯೇ ದೀಪ್ತಿ ಏಷ್ಯಾಕಪ್‌ನಲ್ಲಿ 13 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯ ಆಟಗಾರ್ತಿ ಪ್ರಶಸ್ತಿಗೂ ಭಾಜನರಾಗಿದ್ದರು.
ICC: ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡ ಪ್ರಕಟ; ಭಾರತದ ಮೂವರು ಕ್ರಿಕೆಟಿಗರಿಗೆ ತಂಡದಲ್ಲಿ ಸ್ಥಾನ..!
ರಿಚಾ ಘೋಷ್: ಭಾರತದ ಯುವ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್‌ಗೆ 2022 ವರ್ಷ ಅದ್ಭುತವಾಗಿತ್ತು. ಈ ವರ್ಷ ಆಡಿದ 18 ಪಂದ್ಯಗಳಲ್ಲಿ ರಿಚಾ 13 ಸಿಕ್ಸರ್ಗಳ ಸಹಿತ 259 ರನ್ ಗಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಿಚಾ 19 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದ್ದರು.
ರೇಣುಕಾ ಸಿಂಗ್: 2022ರಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ರೇಣುಕಾ, 23.95 ಸರಾಸರಿ ಮತ್ತು 6.50 ರ ಎಕಾನಮಿ ದರದಲ್ಲಿ 22 ವಿಕೆಟ್‌ಗಳನ್ನು ಪಡೆದರು. ಆಸ್ಟ್ರೇಲಿಯ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ರೇಣುಕಾ 16 ಡಾಟ್ ಬಾಲ್ ಎಸೆದು 18 ರನ್ ನೀಡಿ 4 ವಿಕೆಟ್ ಪಡೆದಿದ್ದರು.
?? x 4
?? x 3
?? ?? ??????? ?? x 1Unveiling the ICC Women’s T20I Team of the Year 2022 ? #ICCAwards
— ICC (@ICC) January 23, 2023
ಸ್ಮೃತಿ ಮಂಧಾನ (ಭಾರತ), ಬೆತ್ ಮೂನಿ (ಆಸ್ಟ್ರೇಲಿಯಾ), ಸೋಫಿ ಡಿವೈನ್ (ನಾಯಕಿ- ನ್ಯೂಜಿಲೆಂಡ್), ಆಶ್ ಗಾರ್ಡ್ನರ್ (ಆಸ್ಟ್ರೇಲಿಯಾ), ತಹಿಲಾ ಮೆಗ್ರಾತ್ (ಆಸ್ಟ್ರೇಲಿಯಾ), ನಿದಾ ದಾರ್ (ಪಾಕಿಸ್ತಾನ), ದೀಪ್ತಿ ಶರ್ಮಾ (ಭಾರತ), ರಿಚಾ ಘೋಷ್ (ಭಾರತ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ಇನೋಕಾ ರಣವೀರಾ (ಶ್ರೀಲಂಕಾ), ರೇಣುಕಾ ಸಿಂಗ್ (ಭಾರತ).
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Mon, 23 January 23