10ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭಾರತೀಯ ಬೌಲರ್​ಗಳ ಬೆಂಡೆತ್ತಿದ ಸ್ಪಿನ್ನರ್

India A vs Australia A: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವೆ ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ಅನಧಿಕೃತ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಉಭಯ ತಂಡಗಳು ದ್ವಿತೀಯ ಪಂದ್ಯದಲ್ಲಿ ಮುಖಾಮುಖಿಯಾಗಿವೆ.

10ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭಾರತೀಯ ಬೌಲರ್​ಗಳ ಬೆಂಡೆತ್ತಿದ ಸ್ಪಿನ್ನರ್
Todd Murphy

Updated on: Sep 24, 2025 | 11:54 AM

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಎ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಎ ತಂಡವು 420 ರನ್​ಗಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಧ್ರುವ್ ಜುರೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸೀಸ್ ಪರ ಸ್ಯಾಮ್ ಕೊನ್​ಸ್ಟಾಸ್ 49 ರನ್ ಬಾರಿಸಿದರೆ, ನಾಯಕ ನಾಥನ್ ಮೆಕ್​ಸ್ವೀನಿ 74 ರನ್​ ಚಚ್ಚಿದರು.

ಆ ಬಳಿಕ ಬಂದ ಜಾಕ್ ಎಡ್ವರ್ಡ್ಸ್ ಕೇವಲ 78 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ 88 ರನ್ ಬಾರಿಸಿ ಅಬ್ಬರಿಸಿದರು. ಈ ಹಂತದಲ್ಲಿ ಬಿಗು ದಾಳಿ ಸಂಘಟಿಸಿದ ಮಾನವ್ ಸುತಾರ್ ಆಸ್ಟ್ರೇಲಿಯಾ ಬ್ಯಾಟರ್​ಗಳನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ಗೆ ಅಟ್ಟಿದರು.

274 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಸ್ಟ್ರೇಲಿಯಾ ತಂಡಕ್ಕೆ ಟಾಡ್ ಮರ್ಫಿ ಆಸರೆಯಾಗಿ ನಿಂತರು. 10ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮರ್ಫಿ ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದರು. ಅಲ್ಲದೆ 89 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 76 ರನ್ ಬಾರಿಸಿದರು.

ಈ 76 ರನ್​ಗಳೊಂದಿಗೆ ಕೊನೆಯ ವಿಕೆಟ್​ಗೆ ಹೆನ್ರಿ ಥಾರ್ನ್‌ಟನ್ (32) ಜೊತೆಗೂಡಿ 91 ರನ್​ಗಳ ಅಮೂಲ್ಯ ಜೊತೆಯಾಟವಾಡಿದರು. ಕೊನೆಯ ವಿಕೆಟ್​ನಲ್ಲಿ ಮೂಡಿಬಂದ ಈ ಭರ್ಜರಿ ಜೊತೆಯಾಟದೊಂದಿಗೆ ಆಸ್ಟ್ರೇಲಿಯಾ ಎ ತಂಡವು ಮೊದಲ ಇನಿಂಗ್ಸ್​ನಲ್ಲಿ 420 ರನ್​ಗಳಿಸಿ ಆಲೌಟ್ ಆಗಿದೆ.

ಭಾರತ ಎ ತಂಡದ ಪರ 32 ಓವರ್​ಗಳನ್ನು ಎಸೆದ ಮಾನವ್ ಸುತಾರ್ 107 ರನ್ ನೀಡಿ 5 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್ 13.2 ಓವರ್​ಗಳಲ್ಲಿ 75 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. 

ಆಸ್ಟ್ರೇಲಿಯಾ ಎ ಪ್ಲೇಯಿಂಗ್ ಇಲೆವೆನ್: ಸ್ಯಾಮ್ ಕೊನ್ಸ್ಟಾಸ್ , ಕ್ಯಾಂಪ್ಬೆಲ್ ಕೆಲ್ಲಾವೇ , ನಾಥನ್ ಮೆಕ್‌ಸ್ವೀನಿ (ನಾಯಕ) , ಆಲಿವರ್ ಪೀಕ್ , ಕೂಪರ್ ಕೊನೊಲಿ , ಜೋಶ್ ಫಿಲಿಪ್ (ವಿಕೆಟ್ ಕೀಪರ್) , ಜ್ಯಾಕ್ ಎಡ್ವರ್ಡ್ಸ್ , ವಿಲ್ ಸದರ್ಲ್ಯಾಂಡ್ , ಕೋರಿ ರೋಚಿಸಿಯೋಲಿ , ಟಾಡ್ ಮರ್ಫಿ , ಹೆನ್ರಿ ಥಾರ್ನ್‌ಟನ್.

ಇದನ್ನೂ ಓದಿ: ಡಕ್​ಮ್ಯಾನ್… ಅನಗತ್ಯ ವಿಶ್ವ ದಾಖಲೆ ಬರೆದ ದಸುನ್ ಶಾನಕ

ಭಾರತ ಎ ಪ್ಲೇಯಿಂಗ್ ಇಲೆವೆನ್: ಎನ್ ಜಗದೀಸನ್ , ಕೆಎಲ್ ರಾಹುಲ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ನಿತೀಶ್ ಕುಮಾರ್ ರೆಡ್ಡಿ , ಧ್ರುವ್ ಜುರೆಲ್ (ನಾಯಕ) , ಆಯುಷ್ ಬದೋನಿ , ಪ್ರಸಿದ್ಧ್ ಕೃಷ್ಣ , ಮೊಹಮ್ಮದ್ ಸಿರಾಜ್ , ಗುರ್ನೂರ್ ಬ್ರಾರ್ , ಮಾನವ್ ಸುತಾರ್.