IND vs AFG T20I Series: ಭಾರತ-ಅಫ್ಘಾನಿಸ್ತಾನ ಟಿ20I ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌, ವಿಕೆಟ್‌ ಪಡೆದವರು ಯಾರು?

|

Updated on: Jan 08, 2024 | 9:18 AM

India Vs Afghanistan T20I Records: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ದ್ವಿಪಕ್ಷೀಯ ಟಿ20I ಸರಣಿಯ ಪ್ರಾರಂಭದ ಮೊದಲು, ಇಲ್ಲಿಯವರೆಗೆ ಆಡಿದ ಐದು ಟಿ20I ಗಳಲ್ಲಿ ಈ ಎರಡು ತಂಡಗಳು ಪರಸ್ಪರರ ಹೇಗೆ ಪ್ರದರ್ಶನ ನೀಡಿವೆ ಎಂಬುದನ್ನು ನೋಡೋಣ.

IND vs AFG T20I Series: ಭಾರತ-ಅಫ್ಘಾನಿಸ್ತಾನ ಟಿ20I ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌, ವಿಕೆಟ್‌ ಪಡೆದವರು ಯಾರು?
IND vs AFG
Follow us on

ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಮ್ ಇಂಡಿಯಾ ಗುರುವಾರದಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಜನವರಿ 11 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿವೆ. ಉಳಿದ ಎರಡು ಪಂದ್ಯಗಳು ಕ್ರಮವಾಗಿ ಜನವರಿ 14 ಮತ್ತು 17 ರಂದು ಇಂದೋರ್ ಮತ್ತು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಬಿಸಿಸಿಐ ಭಾನುವಾರ ದ್ವಿಪಕ್ಷೀಯ ಸರಣಿಗಾಗಿ ಭಾರತದ 16 ಸದಸ್ಯರ ತಂಡವನ್ನು ಪ್ರಕಟಿಸಿತು. ಈ ಮೂಲಕ ರೋಹಿತ್ ಮತ್ತು ವಿರಾಟ್ ಕೊಹ್ಲಿ 14 ತಿಂಗಳ ಅಂತರದ ನಂತರ ಭಾರತದ ಟಿ20I ತಂಡಕ್ಕೆ ಮರಳಿದರು. 2022 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ, ಇಂಗ್ಲೆಂಡ್ ವಿರುದ್ಧ ನವೆಂಬರ್ 10, 2022 ರಂದು ಇವರಿಬ್ಬರು ಕೊನೆಯದಾಗಿ ಭಾರತಕ್ಕಾಗಿ ಟಿ20I ಆಡಿದ್ದರು. ಸದ್ಯ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ದ್ವಿಪಕ್ಷೀಯ ಟಿ20I ಸರಣಿಯ ಪ್ರಾರಂಭದ ಮೊದಲು, ಇಲ್ಲಿಯವರೆಗೆ ಆಡಿದ ಐದು ಟಿ20I ಗಳಲ್ಲಿ ಈ ಎರಡು ತಂಡಗಳು ಪರಸ್ಪರರ ಹೇಗೆ ಪ್ರದರ್ಶನ ನೀಡಿವೆ ಎಂಬುದನ್ನು ನೋಡೋಣ:

Rohit Sharma: ರೋಹಿತ್ ಶರ್ಮಾ ರಿಎಂಟ್ರಿ: ಹಾರ್ದಿಕ್ ಪಾಂಡ್ಯ ಕನಸು ಭಗ್ನ..!

ಇದನ್ನೂ ಓದಿ
IND vs AFG ಟಿ20 ಸರಣಿ ಯಾವಾಗ ಆರಂಭ?, ಎಷ್ಟು ಗಂಟೆಗೆ?, ಲೈವ್ ಯಾವುದರಲ್ಲಿ?
Ranji Trophy 2024: ಕರ್ನಾಟಕ ವಿರುದ್ಧ ಪಂಜಾಬ್ ತಂಡದಿಂದ ದಿಟ್ಟ ಹೋರಾಟ
India T20 Squad: ಭಾರತ ತಂಡದಿಂದ 10 ಆಟಗಾರರು ಹೊರಕ್ಕೆ..!
KL Rahul: ಟಿ20 ತಂಡದಿಂದ ಕನ್ನಡಿಗ ಕೆಎಲ್ ರಾಹುಲ್ ಔಟ್..!

ಹೆಚ್ಚಿನ ಗೆಲುವುಗಳು: ಭಾರತ (5 T20I ಗಳಲ್ಲಿ 4 ಜಯ)

ಗರಿಷ್ಠ ಮೊತ್ತ: ಸೆಪ್ಟೆಂಬರ್ 8, 2022 ರಂದು ದುಬೈನಲ್ಲಿ ಭಾರತದಿಂದ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 212 ರನ್.

ಕಡಿಮೆ ಮೊತ್ತ: ಸೆಪ್ಟೆಂಬರ್ 8, 2022 ರಂದು ದುಬೈನಲ್ಲಿ ಅಫ್ಘಾನಿಸ್ತಾನದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111 ರನ್.

ದೊಡ್ಡ ಗೆಲುವು: ಭಾರತವು ಸೆಪ್ಟೆಂಬರ್ 8, 2022 ರಂದು ದುಬೈನಲ್ಲಿ ಅಫ್ಘಾನಿಸ್ತಾನವನ್ನು 101 ರನ್‌ಗಳಿಂದ ಸೋಲಿಸಿತು.

ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ ಅವರಿಂದ 3 T20I ಗಳಲ್ಲಿ 172 ರನ್.

ಗರಿಷ್ಠ ವೈಯಕ್ತಿಕ ಸ್ಕೋರ್: ಸೆಪ್ಟೆಂಬರ್ 8, 2022 ರಂದು ದುಬೈನಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 122* ರನ್.

ಅತಿ ಹೆಚ್ಚು 100: ವಿರಾಟ್ ಕೊಹ್ಲಿಯಿಂದ ಮೂರು T20I ಗಳಲ್ಲಿ 1 ಶತಕ.

ಹೆಚ್ಚು 50: ಕೆಎಲ್ ರಾಹುಲ್ ಅವರಿಂದ ಎರಡು T20I ಗಳಲ್ಲಿ 2 ಅರ್ಧಶತಕ.

ಅತಿ ಹೆಚ್ಚು ಸಿಕ್ಸರ್‌ಗಳು: ವಿರಾಟ್ ಕೊಹ್ಲಿಯಿಂದ ಮೂರು T20I ಗಳಲ್ಲಿ 8 ಸಿಕ್ಸರ್.

ಹೆಚ್ಚು ವಿಕೆಟ್: ಭುವನೇಶ್ವರ್ ಕುಮಾರ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 5 ವಿಕೆಟ್.

ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು: ಸೆಪ್ಟೆಂಬರ್ 8, 2022 ರಂದು ದುಬೈನಲ್ಲಿ ಭುವನೇಶ್ವರ್ ಕುಮಾರ್ ನಾಲ್ಕು ಓವರ್‌ಗಳಲ್ಲಿ ನಾಲ್ಕು ರನ್‌ಗಳಿಗೆ 5 ವಿಕೆಟ್ ಪಡೆದರು.

ಅತಿ ಹೆಚ್ಚು ಐದು ವಿಕೆಟ್ ಗೊಂಚಲು: 1 ಭುವನೇಶ್ವರ್ ಕುಮಾರ್.

ಹೆಚ್ಚಿನ ಕ್ಯಾಚ್‌ಗಳು: ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) ಅವರಿಂದ ನಾಲ್ಕು T20I ಗಳಲ್ಲಿ 3 ಕ್ಯಾಚ್.

ಗರಿಷ್ಠ ಜೊತೆಯಾಟ: ನವೆಂಬರ್ 3, 2021 ರಂದು ಅಬುಧಾಬಿಯಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ನಡುವೆ 1 ನೇ ವಿಕೆಟ್‌ಗೆ 140 ರನ್ ಜೊತೆಯಾಟ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಐದು T20I ಪಂದ್ಯಗಳ ಫಲಿತಾಂಶಗಳು

  • ಮೇ 1, 2010 ರಂದು ಗ್ರಾಸ್ ಐಲೆಟ್ (2010 T20 ವಿಶ್ವಕಪ್) ನಲ್ಲಿ ಭಾರತವು ಅಫ್ಘಾನಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು.
  • ಭಾರತವು ಸೆಪ್ಟೆಂಬರ್ 19, 2012 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ (2012 T20 ವಿಶ್ವಕಪ್) ಅಫ್ಘಾನಿಸ್ತಾನವನ್ನು 23 ರನ್‌ಗಳಿಂದ ಸೋಲಿಸಿತು.
  • ನವೆಂಬರ್ 3, 2021 ರಂದು ಅಬುಧಾಬಿಯಲ್ಲಿ (2021 T20 ವಿಶ್ವಕಪ್) ಭಾರತವು ಅಫ್ಘಾನಿಸ್ತಾನವನ್ನು 66 ರನ್‌ಗಳಿಂದ ಸೋಲಿಸಿತು.
  • ಭಾರತವು ಸೆಪ್ಟೆಂಬರ್ 8, 2022 ರಂದು ದುಬೈನಲ್ಲಿ (ಏಷ್ಯಾ ಕಪ್ 2022) ಅಫ್ಘಾನಿಸ್ತಾನವನ್ನು 101 ರನ್‌ಗಳಿಂದ ಸೋಲಿಸಿತು.
  • ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ-ಅಫ್ಘಾನಿಸ್ತಾನ T20I ಅನ್ನು ಅಕ್ಟೋಬರ್ 7, 2023 ರಂದು ಹ್ಯಾಂಗ್‌ಝೌನಲ್ಲಿ ಮಳೆಯಿಂದಾಗಿ ರದ್ದಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ