IND VS AUS, 1st ODI Highlights: ಭಾರತದ ಸಾಂಘಿಕ ಆಟಕ್ಕೆ ಬಾಲ ಮುದುರಿದ ಕಾಂಗರೂಗಳು

Vinay Bhat
| Updated By: ಪೃಥ್ವಿಶಂಕರ

Updated on:Sep 22, 2023 | 10:04 PM

India vs Australia, 1st ODI Match Highlights: ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಾಯಕ ರಾಹುಲ್, ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್ ಮತ್ತು ಸೂರ್ಯಕುಮಾರ್ ಯಾದವ್ ತಂಡದ ಪರ ತಲಾ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

IND VS AUS, 1st ODI Highlights: ಭಾರತದ ಸಾಂಘಿಕ ಆಟಕ್ಕೆ ಬಾಲ ಮುದುರಿದ ಕಾಂಗರೂಗಳು
IND vs AUS 1st ODI Live

ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಾಯಕ ರಾಹುಲ್, ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್ ಮತ್ತು ಸೂರ್ಯಕುಮಾರ್ ಯಾದವ್ ತಂಡದ ಪರ ತಲಾ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು ಬೌಲಿಂಗ್​ನಲ್ಲಿ ಮಾರಕ ದಾಳಿ ನಡೆಸಿದ ಶಮಿ 5 ವಿಕೆಟ್ ಪಡೆದು ಕಾಂಗರೂಗಳನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

LIVE Cricket Score & Updates

The liveblog has ended.
  • 22 Sep 2023 09:48 PM (IST)

    ರಾಹುಲ್ ಅರ್ಧಶತಕ, ಭಾರತಕ್ಕೆ ಜಯ

    ನಾಯಕನ ಇನ್ನಿಂಗ್ಸ್ ಆಡಿದ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. 49ನೇ ಓವರ್​ನಲ್ಲಿ ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ ರಾಹುಲ್ ತಮ್ಮ ಅರ್ಧಶತಕ ಪೂರೈಸಿದಲ್ಲದೆ, ತಂಡಕ್ಕೆ 5 ವಿಕೆಟ್​ಗಳ ಜಯ ತಂದುಕೊಟ್ಟರು.

  • 22 Sep 2023 09:35 PM (IST)

    ಅರ್ಧಶತಕ ಸಿಡಿಸಿ ಸೂರ್ಯ ಔಟ್

    ಏಕದಿನ ಮಾದರಿಯಲ್ಲಿ 3ನೇ ಅರ್ಧಶತಕ ಸಿಡಿಸಿದ ಸೂರ್ಯ ಅಂತಿಮವಾಗಿ 50 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಸೂರ್ಯ ಅವರ ಈ ಇನ್ನಿಂಗ್ಸ್​ನಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಸೇರಿತ್ತು.

  • 22 Sep 2023 09:21 PM (IST)

    6 ಓವರ್​ಗಳಲ್ಲಿ 30 ರನ್ ಬೇಕು

    ಟೀಂ ಇಂಡಿಯಾದ ಗೆಲುವಿಗೆ ಇನ್ನು 6 ಓವರ್​ಗಳಲ್ಲಿ 30 ರನ್​ಗಳ ಅಗತ್ಯವಿದೆ. ರಾಹುಲ್ ಅರ್ಧಶತಕ ಹೊಸ್ತಿಲಿನಲ್ಲಿದ್ದರೆ, ಸೂರ್ಯ ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.

    ಭಾರತ 247/4

  • 22 Sep 2023 09:12 PM (IST)

    ಸೂರ್ಯ-ರಾಹುಲ್ ಜೊತೆಯಾಟ

    ಟೀಂ ಇಂಡಿಯಾ ಗೆಲುವಿಗೆ ಕೇವಲ 50 ರನ್‌ಗಳ ಅಂತರದಲ್ಲಿದೆ. ನಾಯಕ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಜೋಡಿ ಕ್ರೀಸ್‌ನಲ್ಲಿ ನೆಲೆಯೂರಿದ್ದು, ಇಬ್ಬರ ನಡುವೆ 40ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಿದೆ. ಏಕದಿನ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡುತ್ತಿರುವ ಸೂರ್ಯಕುಮಾರ್ ಯಾದವ್ ಇಲ್ಲಿ ಉತ್ತಮ ಸ್ಪರ್ಶದಲ್ಲಿ ಕಾಣುತ್ತಿದ್ದಾರೆ.

  • 22 Sep 2023 09:03 PM (IST)

    ಕೊನೆಯ 10 ಓವರ್ ಬಾಕಿ

    ಭಾರತ ಗೆಲ್ಲಲು ಕೊನೆಯ 10 ಓವರ್​ಗಳಲ್ಲಿ 54 ರನ್ ಬಾರಿಸಬೇಕಿದೆ. ರಾಹುಲ್ ಹಾಗೂ ಸೂರ್ಯ ಕ್ರಮವಾಗಿ 29 ಮತ್ತು 25 ರನ್ ಗಳಿಸಿ ಆಡುತ್ತಿದ್ದಾರೆ.

  • 22 Sep 2023 09:01 PM (IST)

    ಭಾರತದ 200 ರನ್ ಪೂರ್ಣ

    36ನೇ ಓವರ್​ನಲ್ಲಿ ಭಾರತ ತನ್ನ ದ್ವಿಶತಕ ಪೂರ್ಣಗೊಳಿಸಿದೆ. ತಂಡದ ಪರ ರಾಹುಲ್ ಹಾಗೂ ಸೂರ್ಯ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ.

  • 22 Sep 2023 08:29 PM (IST)

    ಕಿಶನ್ ಔಟ್

    ಇಲ್ಲದ ರನ್ ಕಲೆಹಾಕುವ ಯತ್ನದಲ್ಲಿ ಇಶಾನ್ ಕಿಶನ್ ಕೀಪರ್ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ. ಇದರೊಂದಿಗೆ ಭಾರತದ 4ನೇ ವಿಕೆಟ್ ಪತನವಾಗಿದೆ. ಇಲ್ಲಿಂದ ಭಾರತ ಗೆಲ್ಲಬೇಕೆಂದರೆ, ಸೂರ್ಯ ಹಾಗೂ ರಾಹುಲ್​ರಿಂದ ಉತ್ತಮ ಜೊತೆಯಾಟ ಬೇಕಾಗಿದೆ.

  • 22 Sep 2023 07:58 PM (IST)

    ಗಿಲ್ ಔಟ್. ಭಾರತ 154/3

    ಭಾರತದ ಮೂರನೇ ವಿಕೆಟ್ ಪತನವಾಗಿದೆ. ಲೆಟ್ ಕಟ್ ಆಡುವ ಯತ್ನದಲ್ಲಿ ಗಿಲ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಝಂಪಾಗೆ ಇದು 2ನೇ ವಿಕೆಟ್.

    ಗಿಲ್: 74 ರನ್

  • 22 Sep 2023 07:49 PM (IST)

    ಅಯ್ಯರ್ ರನ್ ಔಟ್

    ಇಲ್ಲದ ರನ್ ಕದಿಯಲು ಹೋಗಿ ಶ್ರೇಯಸ್ ಅಯ್ಯರ್ ರನೌಟ್ ಆಗಿದ್ದಾರೆ. ಈ ಮೂಲಕ ಭಾರತದ 2ನೇ ವಿಕೆಟ್ ಪತನವಾಗಿದೆ.

    ಭಾರತ: 148/ 2

  • 22 Sep 2023 07:40 PM (IST)

    ರುತುರಾಜ್ ಔಟ್, ಭಾರತ 143/1

    ಭಾರತದ ಮೊದಲ ವಿಕೆಟ್ ಪತನವಾಗಿದೆ. 71 ರನ್ ಗಳಿಸಿ ಶತಕದತ್ತ ಸಾಗುತ್ತಿದ್ದ ರುತುರಾಜ್, ಝಂಪಾ ಬೌಲಿಂಗ್​ನಲ್ಲಿ ಸ್ವಿಪ್ ಮಾಡುವ ಯತ್ನದಲ್ಲಿ ಎಲ್​ಬಿ ಬಲೆಗೆ ಬಿದ್ದರು.

  • 22 Sep 2023 07:26 PM (IST)

    ಗಾಯಕ್ವಾಡ್ ಅರ್ಧ ಶತಕ

    ರುತುರಾಜ್ ಗಾಯಕ್ವಾಡ್ ಕೂಡ ಅರ್ಧಶತಕ ಪೂರೈಸಿದ್ದಾರೆ. ಬಲಗೈ ಆರಂಭಿಕ ಆಟಗಾರ 60 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ರುತುರಾಜ್ ತಮ್ಮ ಮೂರನೇ ಏಕದಿನದಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರ್ಣಗೊಳಿಸಿದರು.

  • 22 Sep 2023 07:18 PM (IST)

    ಗಿಲ್-ರಿತುರಾಜ್ ನಡುವೆ 100 ರನ್ ಜೊತೆಯಾಟ

    ಶುಭಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಮೊದಲ ವಿಕೆಟ್‌ಗೆ 100 ರನ್ ಜೊತೆಯಾಟ ನಡೆಸಿದ್ದಾರೆ. ಇಬ್ಬರೂ ತಂಡಕ್ಕೆ ಬಲಿಷ್ಠ ಆರಂಭ ಒದಗಿಸಿದ್ದಾರೆ. ಗಿಲ್ ಅರ್ಧಶತಕ ಪೂರೈಸಿದ್ದರೆ, ರುತುರಾಜ್ ಐವತ್ತರ ಹಾದಿಯಲ್ಲಿದ್ದಾರೆ.

  • 22 Sep 2023 07:07 PM (IST)

    ಗಿಲ್ ಅರ್ಧಶತಕ

    ಶುಭಮನ್ ಗಿಲ್ 37 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಇದು ಅವರ ವೃತ್ತಿಜೀವನದ ಒಂಬತ್ತನೇ ಏಕದಿನ ಅರ್ಧಶತಕವಾಗಿದೆ. ಗಿಲ್ ಮ್ಯಾಥ್ಯೂ ಶಾರ್ಟ್ ಎಸೆತದಲ್ಲಿ ಸಿಕ್ಸರ್ ಬಾರಿಸಿ ಅರ್ಧಶತಕ ಪೂರೈಸಿದರು.

  • 22 Sep 2023 06:45 PM (IST)

    ಪವರ್ ಪ್ಲೇ ಮುಗಿದಿದೆ

    ಭಾರತದ ಪಾಲಿನ ಪವರ್ ಪ್ಲೇ ಮುಗಿದಿದೆ. ಈ 10 ಓವರ್​ಗಳಲ್ಲಿ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 66 ರನ್ ಕಲೆಹಾಕಿದೆ.

    ಗಿಲ್: 32 ರನ್

    ರುತುರಾಜ್: 32 ರನ್

  • 22 Sep 2023 06:30 PM (IST)

    ಭಾರತ 5 ಓವರ್‌ಗಳಲ್ಲಿ 33/0

    ಭಾರತದ ಇನಿಂಗ್ಸ್‌ನ ಮೊದಲ 5 ಓವರ್‌ಗಳು ಮುಗಿದಿವೆ. ಆರಂಭಿಕ ಜೋಡಿ ಶುಬ್ಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ 33 ರನ್ ಗಳಿಸಿದ್ದಾರೆ. ಈ ಪಂದ್ಯವನ್ನು ಗೆಲ್ಲಲು ಭಾರತ ಉಳಿದ 45 ಓವರ್‌ಗಳಲ್ಲಿ 244 ರನ್ ಗಳಿಸಬೇಕಾಗಿದೆ.

  • 22 Sep 2023 06:11 PM (IST)

    ಭಾರತದ ಇನ್ನಿಂಗ್ಸ್ ಆರಂಭ

    ಟೀಂ ಇಂಡಿಯಾದ ಬ್ಯಾಟಿಂಗ್ ಆರಂಭವಾಗಿದೆ, ಶುಭಮನ್ ಗಿಲ್ ಅವರೊಂದಿಗೆ ರುತುರಾಜ್ ಗಾಯಕ್ವಾಡ್ ಓಪನಿಂಗ್‌ಗೆ ಬಂದಿದ್ದಾರೆ. ಆಸ್ಟ್ರೇಲಿಯಾ ಭಾರತಕ್ಕೆ 277 ರನ್ ಟಾರ್ಗೆಟ್ ನೀಡಿದೆ.

  • 22 Sep 2023 05:58 PM (IST)

    ಭಾರತಕ್ಕೆ 277 ರನ್ ಗುರಿ

    ಆಸ್ಟ್ರೇಲಿಯ ತಂಡ 276 ರನ್‌ಗೆ ಆಲೌಟ್ ಆಗಿದ್ದರೆ, ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಆಡಮ್ ಝಂಪಾ ರನೌಟ್ ಆದರು. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಅತ್ಯಧಿಕ 52 ರನ್ ಗಳಿಸಿದರು, ಅವರನ್ನು ಹೊರತುಪಡಿಸಿ ಜೋಶ್ ಇಂಗ್ಲಿಸ್ (45), ಸ್ಟೀವ್ ಸ್ಮಿತ್ (41) ಪ್ರಮುಖ ಇನ್ನಿಂಗ್ಸ್ ಆಡಿದರು. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 5 ವಿಕೆಟ್ ಪಡೆದರೆ, ಬುಮ್ರಾ-ಅಶ್ವಿನ್-ಜಡೇಜಾ ತಲಾ ಒಂದು ವಿಕೆಟ್ ಪಡೆದರು.

  • 22 Sep 2023 05:29 PM (IST)

    ಶಮಿಗೆ 5 ವಿಕೆಟ್

    ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದರು. ಶಮಿ ಅವರ ಸ್ಫೋಟಕ ಬೌಲಿಂಗ್​ನಿಂದಾಗಿ ಕಾಂಗರೂ ತಂಡಕ್ಕೆ ಕೊನೆಯಲ್ಲಿ ಬೇಗ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಶಮಿ ತಮ್ಮ 10 ಓವರ್‌ಗಳಲ್ಲಿ 51 ರನ್ ನೀಡಿ ಐದು ವಿಕೆಟ್ ಪಡೆದರು, ಇದು ಅವರ ಏಕದಿನ ವೃತ್ತಿಜೀವನದ ಎರಡನೇ ಐದು ವಿಕೆಟ್ ಸಾಧನೆಯಾಗಿದೆ.

  • 22 Sep 2023 05:20 PM (IST)

    ಬುಮ್ರಾಗೆ ವಿಕೆಟ್

    ಜಸ್ಪ್ರೀತ್ ಬುಮ್ರಾ ಅವರ ಸ್ಪೆಲ್‌ನ ಕೊನೆಯ ಓವರ್‌ನಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು. 45 ರನ್ ಗಳಿಸಿದ್ದ ಜೋಶ್ ಇಂಗ್ಲಿಷ್ ಅವರನ್ನು ಬುಮ್ರಾ ಔಟ್ ಮಾಡಿದರು. ಆಸ್ಟ್ರೇಲಿಯಾದ ಸ್ಕೋರ್ 250/7

  • 22 Sep 2023 05:11 PM (IST)

    ಸ್ಟೋಯ್ನಿಸ್ ಔಟ್

    47ನೇ ಓವರ್​ನ 4ನೇ ಎಸೆತದಲ್ಲಿ ಶಮಿ, ಸ್ಟೋಯ್ನಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದಕ್ಕೂ ಮುನ್ನ ಸ್ಟೋಯ್ನಿಸ್ ಈ ಓವರ್​ನಲ್ಲಿ 2 ಬೌಂಡರಿ ಬಾರಿಸಿದ್ದರು.

  • 22 Sep 2023 05:07 PM (IST)

    ಇಂಗ್ಲಿಸ್ ಸಿಕ್ಸರ್

    ಆಸ್ಟ್ರೇಲಿಯಾ ಸ್ಕೋರ್ 43.4 ಓವರ್‌ಗಳಲ್ಲಿ ಐದು ವಿಕೆಟ್‌ಗೆ 224 ರನ್ ಕಲೆಹಾಕಿದೆ. ಜೋಶ್ ಇಂಗ್ಲಿಸ್ 33 ಮತ್ತು ಮಾರ್ಕಸ್ ಸ್ಟೊಯಿನಿಸ್ 18 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್​ನಲ್ಲಿ ಇಂಗ್ಲಿಸ್ ಭರ್ಜರಿ ಸಿಕ್ಸರ್ ಕೂಡ ಬಾರಿಸಿದರು.

  • 22 Sep 2023 04:55 PM (IST)

    200 ರನ್ ಪೂರೈಸಿದ ಆಸೀಸ್

    ಆಸ್ಟ್ರೇಲಿಯಾ 42 ಓವರ್‌ಗಳಲ್ಲಿ 5 ವಿಕೆಟ್‌ಗೆ 204 ರನ್ ಗಳಿಸಿದೆ. ಮಾರ್ಕಸ್ ಸ್ಟೊಯಿನಿಸ್ (14*) ಮತ್ತು ಜೋಶ್ ಇಂಗ್ಲಿಷ್ (17*) ಕ್ರೀಸ್‌ನಲ್ಲಿದ್ದಾರೆ.

  • 22 Sep 2023 04:38 PM (IST)

    ಗ್ರೀನ್ ರನೌಟ್

    ಆಸ್ಟ್ರೇಲಿಯಾದ 4ನೇ ವಿಕೆಟ್ ಪತನವಾಗಿದೆ. ಕ್ಯಾಮರೂನ್ ಗ್ರೀನ್ ರನೌಟ್ ಆಗಿದ್ದಾರೆ. ಇನ್ನಿಂಗ್ಸ್​ನ 40 ನೇ ಓವರ್​ನಲ್ಲಿ ಎರಡನೇ ರನ್ ಕದಿಯುವ ಯತ್ನದಲ್ಲಿ 30 ರನ್ ಬಾರಿಸಿದ್ದ ಗ್ರೀನ್ ರನೌಟ್ ಆದರು.

    ಆಸೀಸ್ : 185/4

  • 22 Sep 2023 04:33 PM (IST)

    ಪಂದ್ಯ ಪುನರಾರಂಭ

    ಮತ್ತೊಮ್ಮೆ ಪಂದ್ಯ ಆರಂಭವಾಗಿದ್ದು, ಇದೀಗ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ಆರಂಭಿಕ ಶಾಕ್ ನೀಡಲು ಯತ್ನಿಸಲಿದೆ. ಈ ಪಂದ್ಯದಲ್ಲಿ ಭಾರತದ ಪರ ಮೊಹಮ್ಮದ್ ಶಮಿ 2 ವಿಕೆಟ್, ಜಡೇಜಾ ಮತ್ತು ಅಶ್ವಿನ್ 1-1 ವಿಕೆಟ್ ಪಡೆದಿದ್ದಾರೆ.

  • 22 Sep 2023 04:16 PM (IST)

    ಮಳೆಯಿಂದಾಗಿ ಆಟ ನಿಂತಿದೆ

    ಮೊಹಾಲಿಯಲ್ಲಿ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಗಿದೆ. ಪಂದ್ಯ ನಿಲ್ಲುವ ವೇಳೆಗೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 35.4 ಓವರ್ ಗಳಲ್ಲಿ 166 ರನ್ ಗಳಿಸಿತ್ತು. ಸದ್ಯ ಜೋಶ್ ಇಂಗ್ಲಿಸ್ ಮತ್ತು ಕ್ಯಾಮರೂನ್ ಗ್ರೀನ್ ಕ್ರೀಸ್‌ನಲ್ಲಿದ್ದಾರೆ.

  • 22 Sep 2023 03:55 PM (IST)

    ಲಬುಶೇನ್ ಔಟ್

    ಆಸ್ಟ್ರೇಲಿಯಾದ 4ನೇ ವಿಕೆಟ್ ಪತನವಾಗಿದೆ. ಅಶ್ವಿನ್ ಬೌಲ್ ಮಾಡಿದ 34ನೇ ಓವರ್​ನಲ್ಲಿ ರಿವರ್​ಸ್ವಿಪ್ ಆಡುವ ಯತ್ನದಲ್ಲಿ ಲಬುಶೇನ್ ಸ್ಟಂಪ್ ಔಟ್ ಆದರು. ಲಬುಶೇನ್ 39 ರನ್ ಗಳಿಸಿ ಔಟಾದರು.

  • 22 Sep 2023 03:42 PM (IST)

    ಆಸ್ಟ್ರೇಲಿಯಾ ಸ್ಕೋರ್ 150/3

    ಈಗ ಕ್ಯಾಮೆರಾನ್ ಗ್ರೀನ್, ಮಾರ್ನಸ್ ಲಬುಶೇನ್ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ. 30 ಓವರ್‌ಗಳಲ್ಲಿ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 150 ರನ್ ಕಲೆಹಾಕಿದೆ.

  • 22 Sep 2023 03:15 PM (IST)

    ಸ್ಟೀವ್ ಸ್ಮಿತ್ ಔಟ್

    ಆಸ್ಟ್ರೇಲಿಯ 22ನೇ ಓವರ್‌ನಲ್ಲಿ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ತಂಡದ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಬೌಲ್ಡ್ ಆಗಿದ್ದಾರೆ. ಮೊಹಮ್ಮದ್ ಶಮಿ ಅವರ ಅಮೋಘ ಎಸೆತಕ್ಕೆ ಸ್ಮಿತ್‌ 60 ಎಸೆತಗಳಲ್ಲಿ 41 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದ್ದಾರೆ.

  • 22 Sep 2023 02:54 PM (IST)

    ವಾರ್ನರ್ ಔಟ್

    ಆಸೀಸ್ ತಂಡದ ಎರಡನೇ ವಿಕೆಟ್ ಪತನವಾಗಿದೆ. ಜೀವದಾನದ ಪಾಭ ಪಡೆದು ಅರ್ಧಶತಕ ಸಿಡಿಸಿದ್ದ ವಾರ್ನರ್ ಸಿಕ್ಸರ್ ಬಾರಿಸುವ ಯತ್ನದಲ್ಲಿ ಗಿಲ್​ಗೆ ಕ್ಯಾಚಿತ್ತು ಔಟಾಗಿದ್ದಾರೆ. ಜಡೇಜಾಗೆ ಈ ವಿಕೆಟ್ ಪಡೆದರು.

    ಡೇವಿಡ್ ವಾರ್ನರ್- 52 ರನ್, 53 ಎಸೆತಗಳು 6×4 2×6

  • 22 Sep 2023 02:50 PM (IST)

    ವಾರ್ನರ್ ಅರ್ಧಶತಕ

    ಡೇವಿಡ್ ವಾರ್ನರ್ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆಸ್ಟ್ರೇಲಿಯಾ 16 ಓವರ್‌ಗಳಲ್ಲಿ 1 ವಿಕೆಟ್‌ಗೆ 82 ರನ್ ಗಳಿಸಿದೆ. ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಕ್ರೀಸ್‌ನಲ್ಲಿದ್ದಾರೆ. ಸ್ಮಿತ್ 43 ಎಸೆತಗಳಲ್ಲಿ 23 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಾರ್ನರ್ 49 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ.

  • 22 Sep 2023 02:49 PM (IST)

    ಭಾರತಕ್ಕೆ ಬೇಕು ವಿಕೆಟ್

    ಇನ್ನಿಂಗ್ಸ್​ನ ಮೊದಲ ಓವರ್​ನಲ್ಲಿ ಮೊದಲ ವಿಕೆಟ್ ಪತನವಾದ ಬಳಿಕ ಭಾರತದ ಬೌಲರ್​ಗಳಿಂದ ಮತ್ತೊಂದು ವಿಕೆಟ್ ಸಾಧ್ಯವಾಗಿಲ್ಲ. ಅಯ್ಯರ್ ಸುಲಭದ ಕ್ಯಾಚ್ ಕೈಚೆಲ್ಲಿದರ ಲಾಭ ಪಡೆದ ವಾರ್ನರ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

  • 22 Sep 2023 02:15 PM (IST)

    ಪವರ್ ಪ್ಲೇ ಅಂತ್ಯ

    ಆಸೀಸ್ ಇನ್ನಿಂಗ್ಸ್​ನ ಪವರ್ ಪ್ಲೇ ಮುಗಿದಿದೆ. ಈ 10 ಓವರ್​ಗಳಲ್ಲಿ ಆಸೀಸ್ 1 ವಿಕೆಟ್ ಕಳೆದುಕೊಂಡು 42 ರನ್ ಕಲೆ ಹಾಕಿದೆ.

    ವಾರ್ನರ್: 17 ರನ್

    ಸ್ಮಿತ್: 17 ರನ್

  • 22 Sep 2023 02:11 PM (IST)

    ಸುಲಭ ಕ್ಯಾಚ್ ಡ್ರಾಪ್

    ಶ್ರೇಯಸ್ ಅಯ್ಯರ್ ಸುಲಭದ ಕ್ಯಾಚ್ ಕೈಚೆಲ್ಲಿದ್ದಾರೆ. ಶಾರ್ದೂಲ್ ಬೌಲ್ ಮಾಡಿದ 9ನೇ ಓವರ್​ನ ಕೊನೆಯ ಎಸೆತದಲ್ಲಿ ವಾರ್ನರ್ ಅವರ ಕ್ಯಾಚ್ ಅನ್ನು ಅಯ್ಯರ್ ಕೈಬಿಟ್ಟರು.

  • 22 Sep 2023 01:36 PM (IST)

    IND vs AUS 1st ODI Live Score: ಮೊದಲ ಓವರ್​ನಲ್ಲೇ ವಿಕೆಟ್

    ಮೊದಲ ಓವರ್​​ನಲ್ಲೇ ಆಸ್ಟ್ರೇಲಿಯಾ ವಿಕೆಟ್ ಪತನಗೊಂಡಿದೆ. ಶಮಿ ಬೌಲಿಂಗ್​ನ 4ನೇ ಎಸೆತದಲ್ಲಿ ಮಿಚೆಲ್ ಮಾರ್ಶ್ (4) ಅವರು ಗಿಲ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

    ಆಸ್ಟ್ರೇಲಿಯಾ: 5-1 (1 ಓವರ್)

  • 22 Sep 2023 01:12 PM (IST)

    IND vs AUS 1st ODI Live Score: ಅಶ್ವಿನ್​ಗೆ ಅವಕಾಶ

    ಈ ಸರಣಿಯ ಮೂಲಕ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾಗೆ ಮರಳಿದ್ದಾರೆ. ಅಂದರೆ ಏಷ್ಯಾಕಪ್ ಟೂರ್ನಿಗೆ ಅಶ್ವಿನ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿ ಪ್ಲೇಯಿಂಗ್ ಇಲೆವೆನ್​ನಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ. ಇಲ್ಲಿ ಅದ್ಭುತ ಪ್ರದರ್ಶನ ತೋರಿದರೆ ಏಕದಿನ ವಿಶ್ವಕಪ್​ಗೂ ಆಯ್ಕೆ ಆಗುವ ಸಾಧ್ಯತೆ ಇದೆ.

  • 22 Sep 2023 01:08 PM (IST)

    IND vs AUS 1st ODI Live Score: ಆಸ್ಟ್ರೇಲಿಯಾ ಪ್ಲೇಯಿಂಗ್ 11

    ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಟ್ ಶಾರ್ಟ್, ಸೀನ್ ಅಬಾಟ್, ಆ್ಯಡಮ್ ಝಂಪಾ.

  • 22 Sep 2023 01:04 PM (IST)

    IND vs AUS 1st ODI Live Score: ಭಾರತದ ಪ್ಲೇಯಿಂಗ್ 11

    ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ (ನಾಯಕ), ಶುಭ್​ಮನ್ ಗಿಲ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.

  • 22 Sep 2023 01:02 PM (IST)

    IND vs AUS 1st ODI Live Score: ಟಾಸ್ ಗೆದ್ದ ಭಾರತ

    ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 22 Sep 2023 12:55 PM (IST)

    IND vs AUS 1st ODI Live Score: ಟಾಸ್​ಗೆ ಕ್ಷಣಗಣನೆ

    ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆಗೆ ಕೆಲವೇ ಕ್ಷಣಗಳು ಬಾಕಿ ಇದೆ.

  • Published On - Sep 22,2023 12:52 PM

    Follow us
    ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
    ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
    ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
    ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
    ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
    ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
    ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
    ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
    ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
    Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
    ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
    ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ