ಇಂದೋರ್ ಟೆಸ್ಟ್‌ನಲ್ಲಿ 9 ವಿಕೆಟ್‌ಗಳಿಂದ ಸೋತ ಭಾರತ (India Vs Australia) ಇದೀಗ ಮಾ.9ರಿಂದ ಆರಂಭವಾಗುವ ಟೆಸ್ಟ್ ಪಂದ್ಯದತ್ತ ಗಮನ ಹರಿಸಲಾರಂಭಿಸಿದೆ. ಏಕೆಂದರೆ ಇಡೀ ಟೂರ್ನಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಕೈಕೊಡುತ್ತಿರುವುದು ನಾಯಕ ರೋಹಿತ್ ಶರ್ಮಾಗೆ (Rohit Sharma) ತಲೆನೋವು ಹೆಚ್ಚಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಪೂಜಾರ, ಗಿಲ್, ಶ್ರೇಯಸ್ ಅಯ್ಯರ್ನಂತಹ ದಾಂಡಿಗರಿದ್ದರೂ, ಭಾರತಕ್ಕೆ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ಬ್ಯಾಟ್ಸ್ಮನ್ಗಳ ವೈಫಲ್ಯ 3ನೇ ಟೆಸ್ಟ್ನಲ್ಲೂ ಮುಂದುವರೆದಿದ್ದು, ಟೀಂ ಇಂಡಿಯಾ ಪರ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (Cheteshwar Pujara) ಒಬ್ಬರನ್ನು ಬಿಟ್ಟರೆ, ಮತ್ತ್ಯಾರು ತಮ್ಮ ಸಾಮಥ್ಯ್ರ ತೋರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 1 ರನ್ಗೆ ಸುಸ್ತಾಗಿದ್ದ ಪೂಜಾರ, ಎರಡನೇ ಇನ್ನಿಂಗ್ಸ್‌ನಲ್ಲಿ 142 ಎಸೆತಗಳಲ್ಲಿ 59 ರನ್ ಗಳಿಸಿದರು. ತಮ್ಮ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ ಪೂಜಾರ, ಐಸಿಸಿಯಿಂದ ವಿಶೇಷ ಉಡುಗೊರೆ ಪಡೆದಿದ್ದು, ಈ ಪ್ರಶಸ್ತಿ ಸ್ವತಃ ಪೂಜಾರಗೂ ಆಶ್ಚರ್ಯ ತಂದಿದೆ.
ವಾಸ್ತವವಾಗಿ, ಇಂದೋರ್ ಟೆಸ್ಟ್‌ನಲ್ಲಿ ಭಾರತ ನೀಡಿದ 78 ರನ್‌ಗಳ ಗುರಿಯಲ್ಲಿ ಪೂಜಾರ ಪಾಲು 59 ರನ್ ಆಗಿತ್ತು. ಅಂತಿಮವಾಗಿ ಭಾರತದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಪೂಜಾರ ಅವರ ಶ್ರಮಕ್ಕೆ ಅರ್ಥವಿಲ್ಲದಂತೆ ಮಾಡಿತು. ಆದರೆ ಪೂಜಾರ ತಮ್ಮ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ಹೊಡೆದ ಏಕೈಕ ಸಿಕ್ಸರ್ ಅವರಿಗೆ ಒಂದು ವಿಶೇಷ ಪ್ರಶಸ್ತಿ ಸಿಗುವಂತೆ ಮಾಡಿದೆ. ಈ ಪ್ರಶಸ್ತಿ ನೋಡಿ ಸ್ವತಃ ಪೂಜಾರಗೂ ಶಾಕ್ ಆಗಿದೆ.
Cheteshwar Pujara wins an award for hitting the longest six in the match. pic.twitter.com/zreNh34U7R
— Mufaddal Vohra (@mufaddal_vohra) March 3, 2023
ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ ಪೂಜಾರ, ತಮ್ಮ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 16 ನೇ ಸಿಕ್ಸರ್ ಬಾರಿಸಿದರು. ಆ ಒಂದು ಸಿಕ್ಸರ್ ಇದೀಗ ಪೂಜಾರಗೆ ಪ್ರಶಸ್ತಿ ತಂದುಕೊಟ್ಟಿರುವುದಲ್ಲದೆ, 1 ಲಕ್ಷ ರೂಪಾಯಿ ಬಹುಮಾನ ಕೂಡ ತಂದುಕೊಟ್ಟಿದೆ. ಇಂದೋರ್ ಟೆಸ್ಟ್‌ನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಪೂಜಾರಗೆ ಈ ಪ್ರಶಸ್ತಿ ನೀಡಲಾಗಿದ್ದು, ಪೂಜಾರ ಅವರನ್ನು ಈ ಪಂದ್ಯದ ಅತ್ಯಂತ ಪ್ರಬಲ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಮ್ಮ ಅರ್ಧಶತಕ ಇನ್ನಿಂಗ್ಸ್‌ನಲ್ಲಿ 79 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ ಪೂಜಾರಗೆ ಟ್ರೋಫಿ ಜತೆಗೆ 1 ಲಕ್ಷ ರೂ.ಗಳ ಚೆಕ್ ಕೂಡ ನೀಡಲಾಗಿದೆ.
IND vs AUS: ‘ಪಾಕಿಸ್ತಾನದಂತೆ ಫ್ಯಾನ್ಸ್ಗೆ ಬೋರ್ ಹೊಡೆಸುವುದಿಲ್ಲ’; ಸೋತ ಬಳಿಕ ರೋಹಿತ್ ಅಚ್ಚರಿ ಹೇಳಿಕೆ
ಇಂದೋರ್ ಟೆಸ್ಟ್ ಪೂಜಾರ ಅವರ ಟೆಸ್ಟ್ ವೃತ್ತಿಜೀವನದ 101 ನೇ ಟೆಸ್ಟ್ ಆಗಿತ್ತು. ಕಳೆದ ತಿಂಗಳು ದೆಹಲಿಯಲ್ಲಿ ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಆಡಿದ್ದ ಪೂಜಾರ, ಆಸ್ಟ್ರೇಲಿಯಾ ವಿರುದ್ಧದ 3 ಟೆಸ್ಟ್‌ಗಳ 5 ಇನ್ನಿಂಗ್ಸ್‌ಗಳಲ್ಲಿ, ಕೇವಲ ಒಂದು ಅರ್ಧಶತಕ ಮಾತ್ರ ಬಾರಿಸಿದ್ದಾರೆ. ಅಲ್ಲದೆ 3 ಇನ್ನಿಂಗ್ಸ್‌ಗಳಲ್ಲಿ ಪೂಜಾರಗೆ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ ಎಂಬುದು ಅವರ ಫಾರ್ಮ್ ಬಗ್ಗೆ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Fri, 3 March 23