ಬಾರ್ಡರ್- ಗವಾಸ್ಕರ್ (Border-Gavaskar Trophy) ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತನ್ನ ಗೆಲುವಿನ ಖಾತೆ ತೆರೆದಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು (India Vs Australia) 9 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ಗೂ ಲಗ್ಗೆ ಇಟ್ಟಿದೆ. ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರವಾಸಿ ತಂಡಕ್ಕೆ 76 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡವು ಒಂದು ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಸಾಧಿಸಿತು. ಮೂರನೆ ಟೆಸ್ಟ್ ಕೂಡ ಎರಡೇ ದಿನಗಳಲ್ಲಿ ಮುಕ್ತಾಯವಾಗಿದ್ದು, ಪಿಚ್ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಸರಣಿಯ ಎರಡೂ ಆರಂಭಿಕ ಟೆಸ್ಟ್‌ಗಳು ಕೂಡ ಕೇವಲ 3 ದಿನಗಳಲ್ಲೇ ಮುಕ್ತಾಯವಾಗಿತ್ತು. ಹೀಗಾಗಿ ಕ್ರಿಕೆಟ್ ಪಂಡಿತರು ಭಾರತದ ಪಿಚ್ಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ 3ನೇ ಟೆಸ್ಟ್ ಸೋತ ಬಳಿಕ ಮಾತನಾಡಿರುವ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಪಂದ್ಯಗಳು ಮೂರೇ ದಿನದಲ್ಲಿ ಮುಕ್ತಾಯಗೊಳ್ಳುತ್ತಿರುವ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದೋರ್ ಟೆಸ್ಟ್ನಲ್ಲಿ ಸೋತ ನಂತರ ಮಾತನಾಡಿದ ನಾಯಕ ರೋಹಿತ್, ‘ಸೋಲು ಸ್ವೀಕಾರಾರ್ಹ, ಆದರೆ ಪಾಕಿಸ್ತಾನದಂತೆ ನಾವು ಜನರಿಗೆ ಬೋರ್ ಹೊಡೆಸುವುದಿಲ್ಲ ಅಂದಿದ್ದಾರೆ. ಅಲ್ಲದೆ ಟೆಸ್ಟ್ ಪಂದ್ಯಗಳು ಮೂರೇ ದಿನಕ್ಕೆ ಮುಕ್ತಾಯವಾಗುತ್ತಿರುವುದು ಕೇವಲ ಭಾರತದಲ್ಲಿ ಮಾತ್ರವಲ್ಲ. ಬದಲಿಗೆ ಭಾರತದ ಹೊರಗೆ ಕೂಡ 5 ದಿನಗಳ ಕಾಲ ಟೆಸ್ಟ್ ಪಂದ್ಯಗಳು ನಡೆಯುತ್ತಿಲ್ಲ ಎಂದಿದ್ದಾರೆ.
IND vs AUS: WTC ಫೈನಲ್‌ಗೆ ಎಂಟ್ರಿಕೊಟ್ಟ ಆಸ್ಟ್ರೇಲಿಯಾ; ಸೋತ ಟೀಂ ಇಂಡಿಯಾದ ಕಥೆ ಏನು?
ಮುಂದುವರೆದು ಮಾತನಾಡಿದ ರೋಹಿತ್, ‘ಈ ಹಿಂದೆ ಪಾಕಿಸ್ತಾನದಲ್ಲಿ ನಡೆದ 3 ಟೆಸ್ಟ್ ಪಂದ್ಯಗಳನ್ನು ಅಲ್ಲಿನ ಜನರು ನೀರಸ ಎಂದು ಕರೆದರು. ಆದರೆ ನಾವು ಅದನ್ನು ಆಸಕ್ತಿದಾಯಕವಾಗಿ ಮಾಡುತ್ತಿದ್ದೇವೆ’ ಎಂದಿದ್ದಾರೆ. ವಾಸ್ತವವಾಗಿ, ಪಾಕಿಸ್ತಾನ ತನ್ನ ಕೊನೆಯ 5 ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಆಡಿತ್ತು. ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್ ಮತ್ತು ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 3 ಟೆಸ್ಟ್ ಪಂದ್ಯಗಳು ಸಂಪೂರ್ಣ 5 ದಿನಗಳ ಕಾಲ ನಡೆದವು. ಆದರೂ ನ್ಯೂಜಿಲೆಂಡ್ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳು ಡ್ರಾ ಆಗಿದ್ದವು. ಹೀಗಾಗಿ ಸಂಪೂರ್ಣ 5 ದಿನ ನಡೆದರೂ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದ್ದು, ಪಾಕ್ ಫ್ಯಾನ್ಸ್ಗೆ ಬೇಸರ ತಂದಿತ್ತು.
Australia win the Third Test by 9 wickets. #TeamIndia ?? will aim to bounce back in the fourth and final #INDvAUS Test at the Narendra Modi Stadium in Ahmedabad ????
Scorecard ▶️ https://t.co/t0IGbs2qyj @mastercardindia pic.twitter.com/M7acVTo7ch
— BCCI (@BCCI) March 3, 2023
ಬಳಿಕ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಮಾತನಾಡಿದ ರೋಹಿತ್, ಸೋಲನ್ನು ಒಪ್ಪಿಕೊಂಡಿದಲ್ಲದೆ, ನಾವು ಇನ್ನೂ ಕೆಲವು ರನ್ ಗಳಿಸಬೇಕಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ನಾವು ಅತ್ಯಂತ ಕಳಪೆ ಕ್ರಿಕೆಟ್ ಆಡಿದ್ದೇವೆ ಎಂದಿದ್ದಾರೆ. ಇದರೊಂದಿಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 11 ವಿಕೆಟ್ ಪಡೆದ ನಾಥನ್ ಲಿಯಾನ್ ಅವರನ್ನು ಶ್ಲಾಘಿಸಿದ ಟೀಂ ಇಂಡಿಯಾ ನಾಯಕ, ನಾನು ಶೇನ್ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್ ಅವರನ್ನು ಎದುರಿಸಿಲ್ಲ, ಆದರೆ ಭಾರತದಲ್ಲಿ ನಾನು ಎದುರಿಸಿದ ಅತ್ಯುತ್ತಮ ವಿದೇಶಿ ಸ್ಪಿನ್ನರ್ ಎಂದರೆ ಅದು ನಾಥನ್ ಲಿಯಾನ್ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Fri, 3 March 23