ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿ ಅಂಗವಾಗಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಕಾಂಗರೂಗಳ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ. ತಂಡದ ಪರ ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ (Rohit Sharma, Ravindra Jadeja and Ravichandran Ashwin) ಅದ್ಭುತ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡವನ್ನು ಬಲಿಷ್ಠ ಸ್ಥಿತಿಗೆ ಕೊಂಡೊಯ್ದ ಈ ಮೂವರ ಆಟಕ್ಕೆ ಟೀಂ ಇಂಡಿಯಾದ ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ (Sachin Tendulkar) ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಮೂವರ ಬಗ್ಗೆ ಕ್ರಿಕೆಟ್ ದೇವರು ಮಾಡಿರುವ ಟ್ವೀಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಪಂದ್ಯದ ಎರಡನೇ ದಿನದ ಎರಡನೇ ಸೆಷನ್‌ನಲ್ಲಿ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾದ ಈ ಮೂವರನ್ನು RRR ಎಂದು ಬಣ್ಣಿಸಿದ್ದಾರೆ. ಇದೀಗ ಸಚಿನ್ ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಮೂವರು ಮೊದಲ ಟೆಸ್ಟ್‌ನಲ್ಲಿ ಭಾರತ ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರೋಹಿತ್ ಶತಕ ಸಿಡಿಸಿದರೆ, ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಪ್ರಮುಖ ವಿಕೆಟ್ ಪಡೆದಿದ್ದು ಗೊತ್ತೇ ಇದೆ. ಅಲ್ಲದೆ ಜಡೇಜಾ ಬ್ಯಾಟಿಂಗ್ನಲ್ಲೂ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.
??? ? ?
The trio of Rohit, Ravindra & Ravichandran have helped India get ahead in this Test.@ImRo45 has led from the front with his 100 while @ashwinravi99 & @imjadeja have got us important breakthroughs.#INDvAUS pic.twitter.com/JTipYmxpKt
— Sachin Tendulkar (@sachin_rt) February 10, 2023
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಬಳಗಕ್ಕೆ ಜಡೇಜಾ ಮತ್ತು ಅಶ್ವಿನ್ ಜೋಡಿ ಮಾರಕವಾಯಿತು. ಇವರಿಬ್ಬರೂ ಆಸ್ಟ್ರೇಲಿಯಾದ ಬ್ಯಾಟಿಂಗ್ ಕ್ರಮಾಂಕವನ್ನು ಧ್ವಂಸ ಮಾಡುವುದರೊಂದಿಗೆ 8 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಹೀಗಾಗಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 177 ರನ್ ಗಳಿಸಲಷ್ಟೇ ಶಕ್ತವಾಯಿತು. ಅದೇ ಸಮಯದಲ್ಲಿ ನಾಯಕ ರೋಹಿತ್ ಶರ್ಮಾ ಶತಕ ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
IND vs AUS: ಭಾರತ- ಆಸೀಸ್ ಪಂದ್ಯದ ವೇಳೆ ಕಳ್ಳಾಟಕ್ಕೆ ಯತ್ನ; ಕ್ರೀಡಾಂಗಣದಲ್ಲೇ ನಾಲ್ವರು ಬುಕ್ಕಿಗಳ ಬಂಧನ!
ನಾಗ್ಪುರ ಟೆಸ್ಟ್ ವಿಚಾರಕ್ಕೆ ಬಂದರೆ, ಎರಡನೇ ದಿನವೂ ಟೀಂ ಇಂಡಿಯಾ ಅದ್ಭುತ ಆಟ ಪ್ರದರ್ಶಿಸಿತು. ಎರಡನೇ ದಿನ 1 ವಿಕೆಟ್‌ಗೆ 77 ರನ್‌ಗಳಿಂದ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 321 ರನ್ ಗಳಿಸಿದೆ. ಈ ಮೂಲಕ ಭಾರತ 144 ರನ್‌ಗಳ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಪರ ಎರಡನೇ ದಿನ ನಾಯಕ ರೋಹಿತ್ ಶರ್ಮಾ (120) ಭರ್ಜರಿ ಶತಕ ಸಿಡಿಸಿದರೆ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Sat, 11 February 23