AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಭಾರತ- ಆಸೀಸ್ ಪಂದ್ಯದ ವೇಳೆ ಕಳ್ಳಾಟಕ್ಕೆ ಯತ್ನ; ಕ್ರೀಡಾಂಗಣದಲ್ಲೇ ನಾಲ್ವರು ಬುಕ್ಕಿಗಳ ಬಂಧನ!

IND vs AUS: ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ ಮತ್ತು ಟಿವಿ, ಮೊಬೈಲ್‌ನಲ್ಲಿ ಅದರ ನೇರ ಪ್ರಸಾರದ ನಡುವಿನ ಕೆಲವು ಸೆಕೆಂಡುಗಳ ಅಂತರದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದ ಆರೋಪಿಗಳು ಪಂದ್ಯದ ಮಾಹಿತಿಯನ್ನು ಕ್ರೀಡಾಂಗಣದ ಹೊರಗಿದ್ದ ಬೇರೆ ಬುಕ್ಕಿಗಳಿಗೆ ಕಳುಹಿಸುತ್ತಿದ್ದರು ಎಂದು ತಿಳಿದುಬಂದಿದೆ.

IND vs AUS: ಭಾರತ- ಆಸೀಸ್ ಪಂದ್ಯದ ವೇಳೆ ಕಳ್ಳಾಟಕ್ಕೆ ಯತ್ನ; ಕ್ರೀಡಾಂಗಣದಲ್ಲೇ ನಾಲ್ವರು ಬುಕ್ಕಿಗಳ ಬಂಧನ!
ಕ್ರೀಡಾಂಗಣದಲ್ಲೇ ನಾಲ್ವರು ಬುಕ್ಕಿಗಳ ಬಂಧನ
TV9 Web
| Edited By: |

Updated on:Feb 11, 2023 | 10:34 AM

Share

ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ (Border-Gavaskar Trophy) ಸರಣಿಗೆ ಬುಕ್ಕಿಗಳ ಕಾಟ ಎದುರಾಗಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿರುವ ಪ್ರಕಾರ, ನಾಗ್ಪುರ ಟೆಸ್ಟ್‌ನಲ್ಲಿ ಬೆಟ್ಟಿಂಗ್ ಮಾಡಲು ಪ್ರಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ, ಫೆಬ್ರವರಿ 10 ರಂದು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ, ನಾಗ್ಪುರ ಪೊಲೀಸರ ಅಪರಾಧ ವಿಭಾಗವು ವಿದರ್ಭ ಕ್ರಿಕೆಟ್ ಸಂಸ್ಥೆಯ (ವಿಸಿಎ) ಜಮ್ತಾ ಕ್ರೀಡಾಂಗಣದಲ್ಲಿ ನಾಲ್ವರು ಕ್ರಿಕೆಟ್ ಬುಕ್ಕಿಗಳನ್ನು ಬಂಧಿಸಿದೆ ಎಂದು ವರದಿಯಾಗಿದೆ.

ಕ್ರೀಡಾಂಗಣದಲೇ ಬಂಧನ

ವರದಿಯ ಪ್ರಕಾರ, ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ, ಟಿವಿ ಮತ್ತು ಮೊಬೈಲ್‌ನಲ್ಲಿ ಅದರ ನೇರ ಪ್ರಸಾರದ ನಡುವಿನ ಕೆಲವು ಸೆಕೆಂಡುಗಳ ಅಂತರದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದ ಆರೋಪಿಗಳು ಪಂದ್ಯದ ಮಾಹಿತಿಯನ್ನು ಕ್ರೀಡಾಂಗಣದ ಹೊರಗಿದ್ದ ಬೇರೆ ಬುಕ್ಕಿಗಳಿಗೆ ಕಳುಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳು ಮುಂಬೈ, ಭಂಡಾರಾ ಮತ್ತು ನಾಗ್ಪುರ ನಿವಾಸಿಗಳಾಗಿದ್ದು, ಆರೋಪಿಗಳ ವಿರುದ್ಧ ಹಿಂಗ್ನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಹಲವು ಕ್ರಿಕೆಟಿಗರ ವೃತ್ತಿ ಜೀವನವೇ ಅಂತ್ಯಗೊಂಡಿದೆ

ಕ್ರಿಕೆಟ್ ಆಟದಲ್ಲಿ ಬೆಟ್ಟಿಂಗ್ ಯತ್ನಗಳು ಆಗಾಗ ನಡೆಯುತ್ತಿದ್ದು, ಹಲವು ದೊಡ್ಡ ಬೆಟ್ಟಿಂಗ್ ಗ್ಯಾಂಗ್​ಗಳು ಬೆಟ್ಟಿಂಗ್ ಮೂಲಕ ಹಣ ಗಳಿಸಲು ಮುಂದಾಗಿವೆ. ಇದರಿಂದಾಗಿ ಮ್ಯಾಚ್ ಫಿಕ್ಸಿಂಗ್‌ನಿಂದ ಸ್ಪಾಟ್ ಫಿಕ್ಸಿಂಗ್‌ನಂತಹ ಅನೇಕ ಘಟನೆಗಳು ಕಂಡುಬಂದಿದ್ದು, ಇದು ಆಟದ ಮೇಲೆ ದುಷ್ಪರಿಣಾಮವನ್ನುಂಟುಮಾಡಿದೆ. ಅಲ್ಲದೆ ಇದರಿಂದ ಅನೇಕ ಆಟಗಾರರ ವೃತ್ತಿಜೀವನವೂ ಅಂತ್ಯಗೊಂಡಿದೆ. ಐಸಿಸಿಯಿಂದ ಬಿಸಿಸಿಐ ಮತ್ತು ಇತರ ದೇಶಗಳ ಕ್ರಿಕೆಟ್ ಮಂಡಳಿಗಳು ಬೆಟ್ಟಿಂಗ್ ಮತ್ತು ಫಿಕ್ಸಿಂಗ್‌ನಂತಹ ಪ್ರಕರಣಗಳನ್ನು ತಡೆಯಲು ನಾನಾಕ್ರಮಗಳನ್ನು ಕೈಗೊಂಡಿವೆ.

WPL: 409 ಆಟಗಾರ್ತಿಯರ ಹೆಸರು ಅಂತಿಮ; ಹರಾಜು ನಡೆಯುವ ದಿನ, ಸ್ಥಳ, ನೇರ ಪ್ರಸಾರದ ಪೂರ್ಣ ವಿವರ ಇಲ್ಲಿದೆ

ಎರಡನೇ ದಿನದ ಆಟ ಹೀಗಿತ್ತು

ನಾಗ್ಪುರ ಟೆಸ್ಟ್ ವಿಚಾರಕ್ಕೆ ಬಂದರೆ, ಎರಡನೇ ದಿನವೂ ಟೀಂ ಇಂಡಿಯಾ ಅದ್ಭುತ ಆಟ ಪ್ರದರ್ಶಿಸಿತು. ಎರಡನೇ ದಿನ 1 ವಿಕೆಟ್‌ಗೆ 77 ರನ್‌ಗಳಿಂದ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 321 ರನ್ ಗಳಿಸಿದೆ. ಈ ಮೂಲಕ ಭಾರತ 144 ರನ್‌ಗಳ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಪರ ಎರಡನೇ ದಿನ ನಾಯಕ ರೋಹಿತ್ ಶರ್ಮಾ (120) ಭರ್ಜರಿ ಶತಕ ಸಿಡಿಸಿದರೆ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Sat, 11 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ