WPL: 409 ಆಟಗಾರ್ತಿಯರ ಹೆಸರು ಅಂತಿಮ; ಹರಾಜು ನಡೆಯುವ ದಿನ, ಸ್ಥಳ, ನೇರ ಪ್ರಸಾರದ ಪೂರ್ಣ ವಿವರ ಇಲ್ಲಿದೆ

WPL 2023: ಪ್ರತಿ ಫ್ರಾಂಚೈಸಿಯೂ 12 ಕೋಟಿ ರೂ.ಗಳ ಹರಾಜು ಪರ್ಸ್ ಹೊಂದಿದೆ. ಅಂದರೆ ಒಟ್ಟು 18 ಆಟಗಾರರನ್ನು ಖರೀದಿಸಲು ಪ್ರತಿ ಫ್ರಾಂಚೈಸಿಗೆ 12 ಕೋಟಿ ರೂ. ನೀಡಲಾಗುತ್ತದೆ.

WPL: 409 ಆಟಗಾರ್ತಿಯರ ಹೆಸರು ಅಂತಿಮ; ಹರಾಜು ನಡೆಯುವ ದಿನ, ಸ್ಥಳ, ನೇರ ಪ್ರಸಾರದ ಪೂರ್ಣ ವಿವರ ಇಲ್ಲಿದೆ
ಮಹಿಳೆಯರ ಪ್ರೀಮಿಯರ್ ಲೀಗ್Image Credit source: insidesport
Follow us
TV9 Web
| Updated By: ಪೃಥ್ವಿಶಂಕರ

Updated on:Feb 11, 2023 | 10:10 AM

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದ್ದು, ಟೂರ್ನಿಯ ಮೊದಲ ಸೀಸನ್ ಕಣ್ತುಂಬಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ. ಟೂರ್ನಿ ಆರಂಭವಾಗಲು ಇನ್ನೂ ಸುಮಾರು 3 ವಾರ ಬಾಕಿ ಇದ್ದು ಅದಕ್ಕೂ ಮುನ್ನ ಆಟಗಾರ್ತಿಯರ ಹರಾಜು (WPL auction) ಪ್ರಕ್ರಿಯೆ ಗರಿಗೆದರಿದೆ. ಐಪಿಎಲ್ (IPL) ಮಾದರಿಯಲ್ಲೇ ಡಬ್ಲ್ಯುಪಿಎಲ್​ನಲ್ಲೂ ಆಟಗಾರ್ತಿಯರನ್ನು ಹರಾಜು ಮಾಡಲಾಗುತ್ತದೆ. ಬಿಸಿಸಿಐ (BCCI) ಕೂಡ ಇತ್ತೀಚೆಗೆ ಆಟಗಾರ್ತಿಯರ ಪಟ್ಟಿ, ಹರಾಜಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಪ್ರಕಟಿಸಿತ್ತು. ಒಟ್ಟು 5 ತಂಡಗಳಿರುವ ಡಬ್ಲ್ಯುಪಿಎಲ್ ಹರಾಜು ಯಾವಾಗ ನಡೆಯಲಿದೆ, ಎಲ್ಲಿ ನಡೆಯಲಿದೆ, ಎಷ್ಟು ಆಟಗಾರ್ತಿಯರನ್ನು ಖರೀದಿಸಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹರಾಜಿನಲ್ಲಿ ಎಷ್ಟು ತಂಡಗಳು?

ಟೂರ್ನಿಯ ಮೊದಲ ಸೀಸನ್‌ನಲ್ಲಿ ಒಟ್ಟು 5 ತಂಡಗಳಿದ್ದು, ಜನವರಿ 26 ರಂದು ಹರಾಜಿನ ಮೂಲಕ 5 ಫ್ರಾಂಚೈಸಿಗಳನ್ನು ಬಿಸಿಸಿಐ ಅಂತಿಮಗೊಳಿಸಿತ್ತು. ಈ ಐದು ತಂಡಗಳೆಂದರೆ ಗುಜರಾತ್ ಜೈಂಟ್ಸ್ (ಅದಾನಿ ಸ್ಪೋರ್ಟ್ಸ್‌ಲೈನ್), ಮುಂಬೈ ಇಂಡಿಯನ್ಸ್ (ಇಂಡಿಯಾವಿನ್ ಸ್ಪೋರ್ಟ್ಸ್ ರಿಲಯನ್ಸ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ ಸ್ಪೋರ್ಟ್ಸ್), ಡೆಲ್ಲಿ ಕ್ಯಾಪಿಟಲ್ಸ್ (ಜಿಎಂಆರ್-ಜೆಎಸ್‌ಡಬ್ಲ್ಯೂ) ಮತ್ತು ಲಕ್ನೋದ ಯುಪಿ ವಾರಿಯರ್ಸ್ (ಕ್ಯಾಪ್ರಿ ಗ್ಲೋಬಲ್).

WPL ಹರಾಜು- ದಿನಾಂಕ ಮತ್ತು ಸಮಯ

ಟೂರ್ನಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಫೆಬ್ರವರಿ 13 ಸೋಮವಾರದಂದು ನಡೆಯಲಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹರಾಜು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಧ್ಯಾಹ್ನ 2.30 ರಿಂದ ಪ್ರಾರಂಭವಾಗುತ್ತದೆ.

T20 World Cup: ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ಪಾಕ್ ವಿರುದ್ಧದ ಪಂದ್ಯಕ್ಕೆ ಸ್ಮೃತಿ ಅಲಭ್ಯ..!

ಹರಾಜಿನಲ್ಲಿ ಒಟ್ಟು ಎಷ್ಟು ಆಟಗಾರ್ತಿಯರು?

ಒಟ್ಟು 1525 ಆಟಗಾರ್ತಿಯರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಇತ್ತೀಚೆಗೆ ಮಾಹಿತಿ ನೀಡಿತ್ತು. ಈ ಪೈಕಿ 409 ಆಟಗಾರ್ತಿಯರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈ ಆಟಗಾರ್ತಿಯರ ಖರೀದಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ 246 ಭಾರತೀಯರು, 163 ವಿದೇಶಿಯರು ಇದ್ದಾರೆ. ಈ ವಿದೇಶಿಯರಲ್ಲಿ 8 ಆಟಗಾರ್ತಿಯರು ಸಹ ಸದಸ್ಯ ರಾಷ್ಟ್ರಗಳಿಂದ ಬಂದವರಾಗಿದ್ದಾರೆ.

ತಂಡದಲ್ಲಿ ಎಷ್ಟು ಆಟಗಾರ್ತಿಯರಿರಬಹುದು?

ಡಬ್ಲ್ಯುಪಿಎಲ್‌ನಲ್ಲಿ ಗರಿಷ್ಠ 18 ಆಟಗಾರ್ತಿಯರು ಒಂದು ತಂಡದಲ್ಲಿರಬಹುದಾಗಿದೆ. ಈ ರೀತಿಯಾಗಿ, ಐದು ಫ್ರಾಂಚೈಸಿಗಳು ಒಟ್ಟಾಗಿ 90 ಆಟಗಾರ್ತಿಯರನ್ನು ಮಾತ್ರ ಖರೀದಿಸಬಹುದಾಗಿದೆ. ಇದರಲ್ಲಿ ಒಟ್ಟು 30 ಆಟಗಾರ್ತಿಯರು ವಿದೇಶಿಯರಾಗಿರಲಿದ್ದು, ಈ ವಿದೇಶಿಯರಲ್ಲಿಯೂ ಸಹ, ಪ್ರತಿ ತಂಡವು ಕನಿಷ್ಠ ಒಬ್ಬ ಸಹಾಯಕ ಸದಸ್ಯರನ್ನಾದರೂ ಖರೀದಿಸಬೇಕಾಗುತ್ತದೆ.

ಪ್ರತಿ ತಂಡದ ಪರ್ಸ್ ಮತ್ತು ಮೂಲ ಬೆಲೆ ಎಷ್ಟು?

ಪ್ರತಿ ಫ್ರಾಂಚೈಸಿಯೂ 12 ಕೋಟಿ ರೂ.ಗಳ ಹರಾಜು ಪರ್ಸ್ ಹೊಂದಿದೆ. ಅಂದರೆ ಒಟ್ಟು 18 ಆಟಗಾರ್ತಿಯರನ್ನು ಖರೀದಿಸಲು ಪ್ರತಿ ಫ್ರಾಂಚೈಸಿಗೆ 12 ಕೋಟಿ ರೂ. ನೀಡಲಾಗುತ್ತದೆ. ಮೂಲ ಬೆಲೆಗೆ ಸಂಬಂಧಿಸಿದಂತೆ, ಹರಾಜಿನಲ್ಲಿ ಆಟಗಾರ್ತಿಯ ಅತ್ಯಧಿಕ ಮೂಲ ಬೆಲೆ 50 ಲಕ್ಷ ರೂ. ಆಗಿದ್ದು, ಇದಲ್ಲದೇ 40 ಲಕ್ಷ, 20 ಲಕ್ಷ ಮತ್ತು 10 ಲಕ್ಷ ಮೂಲ ಬೆಲೆಯಲ್ಲಿಯೂ ಆಟಗಾರ್ತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಹರಾಜಿನಲ್ಲಿರುವ ಪ್ರಮುಖ ಹೆಸರುಗಳಿವು

ಮಹಿಳಾ ಐಪಿಎಲ್ ಹರಾಜಿನಲ್ಲಿರುವ ಪ್ರಮುಖ ಹೆಸರುಗಳಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಆಸ್ಟ್ರೇಲಿಯಾದ ಅನುಭವಿ ಆಟಗಾರ್ತಿ ಆಲಿಸ್ ಪ್ಯಾರಿ, ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಸೇರಿದಂತೆ ಒಟ್ಟು 24 ಆಟಗಾರ್ತಿಯರಿದ್ದಾರೆ.

ಹರಾಜು ಪ್ರಕ್ರಿಯೆ ಟೆಲಿಕಾಸ್ಟ್ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಪಂದ್ಯಾವಳಿಯ ಪ್ರಸಾರ ಹಕ್ಕುಗಳನ್ನು ನೆಟ್‌ವರ್ಕ್ 18 ರೂ. 951 ಕೋಟಿಗೆ ಖರೀದಿಸಿದೆ. ಆದ್ದರಿಂದ ಲೈವ್ ಸ್ಟ್ರೀಮಿಂಗ್ ಅನ್ನು ಅದರ ಟಿವಿ ಚಾನೆಲ್ ಸ್ಪೋರ್ಟ್ಸ್-18 ನಲ್ಲಿ ಹೊರತುಪಡಿಸಿ ಜಿಯೋ ಸಿನಿಮಾದ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

ಪಂದ್ಯಾವಳಿ ಪ್ರಾರಂಭ ಯಾವಾಗ?

ಡಬ್ಲ್ಯುಪಿಎಲ್​ನ ಮೊದಲ ಸೀಸನ್ ಮಾರ್ಚ್ 4ರಿಂದ ಆರಂಭವಾಗಲಿದ್ದು, ಮಾರ್ಚ್ 26ರಂದು ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಸೇರಿದಂತೆ ಒಟ್ಟು 22 ಪಂದ್ಯಗಳು ಟೂರ್ನಿಯಲ್ಲಿ ನಡೆಯಲಿವೆ. ಟೂರ್ನಿಯ ಎಲ್ಲಾ ಪಂದ್ಯಗಳು ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಮತ್ತು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 am, Sat, 11 February 23

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್