IND vs BAN: ಭಾರತ ಮೊದಲು ಬೌಲಿಂಗ್; ನಾಯಕನಿಲ್ಲದೆ ಕಣಕ್ಕಿಳಿದ ಬಾಂಗ್ಲಾ; ಉಭಯ ತಂಡಗಳು ಹೀಗಿವೆ

|

Updated on: Oct 19, 2023 | 2:50 PM

IND vs BAN, ICC World Cup 2023: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ 17ನೇ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

IND vs BAN: ಭಾರತ ಮೊದಲು ಬೌಲಿಂಗ್; ನಾಯಕನಿಲ್ಲದೆ ಕಣಕ್ಕಿಳಿದ ಬಾಂಗ್ಲಾ; ಉಭಯ ತಂಡಗಳು ಹೀಗಿವೆ
ಭಾರತ- ಬಾಂಗ್ಲಾದೇಶ
Follow us on

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಿನ ವಿಶ್ವಕಪ್ (ICC World Cup 2023) 17ನೇ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪುಣೆಯಲ್ಲಿ ನಡೆಯುತ್ತಿರುವ ಈ ಪಂದ್ಯವು ಐತಿಹಾಸಿಕವಾಗಿದ್ದು, ಬಾಂಗ್ಲಾದೇಶ ತಂಡ ಬರೋಬ್ಬರಿ 25 ವರ್ಷಗಳ ಬಳಿಕ ಟೀಂ ಇಂಡಿಯಾ (Team India) ವಿರುದ್ಧ ಭಾರತದ ನೆಲದಲ್ಲಿ ಏಕದಿನ ಪಂದ್ಯ ಆಡುತ್ತಿದೆ. ಬಾಂಗ್ಲಾದೇಶ 1998 ರಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಟೀಂ ಇಂಡಿಯಾ ವಿರುದ್ಧ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿತ್ತು.

ಟಾಸ್ ಬಳಿಕ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಹೊರಬಿದ್ದಿದ್ದು, ಟೀಂ ಇಂಡಿಯಾ ಎಂದಿನಂತೆ ತನ್ನ ಗೆಲುವಿನ ಸಂಯೋಜನೆಯನ್ನು ಮುಂದುವರೆಸಿದೆ. ಅಂದರೆ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಬಾಂಗ್ಲಾದೇಶ ತಂಡದಲ್ಲಿ ಬದಲಾವಣೆಯಾಗಿದ್ದು,ಇಂಜುರಿಯಿಂದ ಬಳಲುತ್ತಿರುವ ಖಾಯಂ ನಾಯಕ ಶಕೀಬ್ ಅಲ್ ಹಸನ್ ಬದಲಿಗೆ ನಜ್ಮುಲ್ ಹೊಸೈನ್ ಶಾಂಟೊ ನಾಯಕತ್ವ ವಹಿಸಿದ್ದಾರೆ. ಹಾಗೆಯೇ ಬೌಲಿಂಗ್ ವಿಭಾಗದಲ್ಲಿಯೂ ತಸ್ಕಿನ್ ಅಹ್ಮದ್ ಬದಲಿಗೆ ನಸುಮ್ ಅಹ್ಮದ್ ಅವಕಾಶ ಪಡೆದಿದ್ದಾರೆ.

ಬಾಂಗ್ಲಾದೇಶ ತಂಡ: ನಜ್ಮುಲ್ ಹುಸೇನ್ ಶಾಂಟೊ (ನಾಯಕ), ಲಿಟನ್ ದಾಸ್, ತಂಝೀದ್ ಹಸನ್, ಮೆಹದಿ ಹಸನ್ ಮಿರಾಜ್, ತೌಹೀದ್ ಹೃದಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರಹಮಾನ್ ಮತ್ತು ಶರೀಫುಲ್ ಇಸ್ಲಾಂ.

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

Published On - 2:36 pm, Thu, 19 October 23