ಇಷ್ಟು ದಿನ ಕಿಂಗ್ ಕೊಹ್ಲಿಯ (Virat Kohli) ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದ ಟೀಂ ಇಂಡಿಯಾ ಅಭಿಮಾನಿಗಳಿಗೆ ಅವರು ಬೌಲಿಂಗ್ ಮಾಡುವ ಸುವರ್ಣ ಗಳಿಕೆಯನ್ನು ನೋಡುವ ಅವಕಾಶವೂ ಒದಗಿ ಬಂದಿದೆ. ಪುಣೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಿನ ವಿಶ್ವಕಪ್ (ICC World Cup 2023) ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಕೇವಲ ಮೂರೇ ಮೂರು ಎಸೆತಗಳನ್ನು ಬೌಲ್ ಮಾಡುವ ಮೂಲಕ ಇಡೀ ಕ್ರೀಡಾಂಗಣವೇ ಹುಚ್ಚೆದು ಕುಣಿಯುವಂತೆ ಮಾಡಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಮಾಡುವ ವೇಳೆ ಇಂಜುರಿಗೊಳಗಾಗಿದ್ದರಿಂದ ಓವರ್ ಅನ್ನು ಪೂರ್ಣಗೊಳಿಸುವ ಜವಬ್ದಾರಿಯನ್ನು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ನೀಡಿದರು.
ಬಾಂಗ್ಲಾದೇಶ ಇನ್ನಿಂಗ್ಸ್ನ 9ನೇ ಓವರ್ ಬೌಲ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ಓವರ್ನ ಮೂರನೇ ಎಸೆತವನ್ನು ಬೌಂಡರಿಗೆ ಹೊಗದಂತೆ ತಡೆಯುವ ಯತ್ನದಲ್ಲಿ ತಮ್ಮ ಕಾಲಿಗೆ ಗಾಯ ಮಾಡಿಕೊಂಡರು. ಹೀಗಾಗಿ ಪಾಂಡ್ಯಗೆ ಓವರ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅತೀವ ನೋವಿನಿಂದ ಬಳಲುತ್ತಿದ್ದ ಪಾಂಡ್ಯ ಪಿಸಿಯೋ ಸಹಾಯದಿಂದ ಮೈದಾನ ಕೂಡ ತೊರೆದರು. ಹೀಗಾಗಿ 9ನೇ ಓವರ್ನಲ್ಲಿ ಉಳಿದ ಮೂರು ಎಸೆತಗಳನ್ನು ಎಸೆಯಲು ವಿರಾಟ್ ಕೊಹ್ಲಿ ಅಖಾಡಕ್ಕಿಳಿದರು.
Breaking: ಬೌಲಿಂಗ್ ಮಾಡುವ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದ ಹಾರ್ದಿಕ್ ಪಾಂಡ್ಯ..!
ಈ ಮೂಲಕ ಬರೋಬ್ಬರಿ 6 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಬೌಲರ್ ಆಗಿ ಕಾಣಿಸಿಕೊಂಡ ಕೊಹ್ಲಿ, 3 ಎಸೆತಗಳಲ್ಲಿ 2ರನ್ ನೀಡಿದರು. ಕೊಹ್ಲಿ ಕೊನೆಯ ಬಾರಿಗೆ 2017 ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆದಿದ್ದ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರು. ಆ ಪಂದ್ಯದಲ್ಲಿ ಪೂರ್ಣ ಎರಡು ಓವರ್ ಬೌಲ್ ಮಾಡಿದ್ದ ಕೊಹ್ಲಿ, ಯಾವುದೇ ವಿಕೆಟ್ ಪಡೆಯದೆ 12 ರನ್ ನೀಡಿದ್ದರು.
ಅದಕ್ಕೂ ಮೊದಲು 2014 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಬೌಲಿಂಗ್ ಮಾಡಿದ್ದ ಕೊಹ್ಲಿ, ಆ ಪಂದ್ಯದಲ್ಲಿ ಕಿವೀಸ್ ತಂಡದ ಸ್ಫೋಟಕ ಬ್ಯಾಟರ್ ಬ್ರೆಂಡನ್ ಮೆಕಲಮ್ ಅವರನ್ನು ಔಟ್ ಮಾಡಿದ್ದರು. ಆ ಪಂದ್ಯದಲ್ಲಿ ಕೊಹ್ಲಿ ಒಟ್ಟು 7 ಓವರ್ ಬೌಲ್ ಮಾಡಿದ್ದರು.
Virat Kohli bowling in a World Cup match:
– In 2011 WC Quarterfinal vs Australia.
– In 2011 WC Final vs Sri Lanka.
– In 2015 WC Semifinal vs Australia.
– In 2023 WC Match vs Bangladesh. pic.twitter.com/4zNFpK2B28— CricketMAN2 (@ImTanujSingh) October 19, 2023
STOP PRESS!!!
Virat Kohli, the right-arm quick bowler, is here 🚨#PlayBold #INDvBAN
— Royal Challengers Bangalore (@RCBTweets) October 19, 2023
Virat Kohli The Bowler Bowling Right arm quick bowling for India 🔥#INDvsBANpic.twitter.com/21gST0kuHC
— ANSH. (@KohliPeak) October 19, 2023
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಹೆಚ್ಚಾಗಿ ಬ್ಯಾಟರ್ ಆಗಿ ಕಾಣಿಸಿಕೊಂಡಿರುವ ವಿರಾಟ್, ಅವಕಾಶ ಸಿಕ್ಕಾಗಲೆಲ್ಲ ಬೌಲರ್ ಆಗಿಯೂ ಕೊಡುಗೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 175 ಎಸೆತಗಳನ್ನು ಬೌಲ್ ಮಾಡಿರುವ ವಿರಾಟ್, ಏಕದಿನ ಮಾದರಿಯಲ್ಲಿ 641 ಎಸತೆಗಳನ್ನು ಬೌಲ್ ಮಾಡಿ 4 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 15 ರನ್ಗಳಿಗೆ 1 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಹಾಗೆಯೇ ಟಿ20 ಮಾದರಿಯಲ್ಲಿ 152 ಎಸೆತಗಳನ್ನು ಬೌಲ್ ಮಾಡಿರುವ ಕೊಹ್ಲಿ, 4 ವಿಕೆಟ್ ಪಡೆದಿದ್ದು, 13 ರನ್ಗಳಿಗೆ 1 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Thu, 19 October 23