ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ (Ravindra Jadeja) ತಮ್ಮ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ (India vs Bangladesh) ಚಿರತೆಯಂತೆ ಎಗರಿದ ಜಡೇಜಾ, ಮುಶ್ಫಿಕರ್ ರಹೀಮ್ (Mushfiqur Rahim) ಅವರ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಬಾಂಗ್ಲಾದೇಶ ಇನ್ನಿಂಗ್ಸ್ನ 43ನೇ ಓವರ್ ಬೌಲಿಂಗ್ ಮಾಡಲು ಜಸ್ಪ್ರೀತ್ ಬುಮ್ರಾ (Jasprit Bumrah) ಬಂದರು. ಈ ವೇಳೆ 38 ರನ್ ಗಳಿಸಿ ಬಾಂಗ್ಲಾ ಇನ್ನಿಂಗ್ಸ್ಗೆ ಆಸರೆಯಾಗಿದ್ದ ಮುಶ್ಫಿಕರ್ ರಹೀಮ್ (38) ಅವರ ವಿಕೆಟ್ ಉರುಳಿಸಿದರು.
ಮಹಮ್ಮದುಲ್ಲಾ ಅವರೊಂದಿಗೆ ಉತ್ತಮ ಜೊತೆಯಾಟ ಕಟ್ಟಿದ ಮುಶ್ಫಿಕರ್, ಅರ್ಧಶತಕದ ಸಮೀಪದಲ್ಲಿದ್ದರು. ಈ ವೇಳೆ ಬುಮ್ರಾ ಬೌಲ್ ಮಾಡಿದ 43ನೇ ಓವರ್ನಲ್ಲಿ ರವೀಂದ್ರ ಜಡೇಜಾ ನಿಂತಿದ್ದ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಮುಶ್ಫಿಕರ್ ಶಾಟ್ ಆಡಿದರು. ಕೂಡಲೇ ಜಡೇಜಾ ತಮ್ಮ ಬಲಕ್ಕೆ ಅದ್ಭುತ ಡೈವ್ ಮಾಡಿ, ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಬಾಂಗ್ಲಾ ತಂಡದ 6ನೇ ವಿಕೆಟ್ ಪತನವಾದರೆ, ಭಾರತಕ್ಕೆ ಸ್ಟಾರ್ ಆಟಗಾರನ ವಿಕೆಟ್ ಸಿಕ್ಕಿತು.
Jadeja- The Fielder is beast🔥#indiavsbangladesh #CWC23 pic.twitter.com/uvlErrBeqG
— Zee (@mjzee921) October 19, 2023
ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಜಡೇಜಾ, ಮೈದಾನದಲ್ಲಿ ಅನೇಕ ಬಾರಿ ಇಂತಹ ಸಾಹಸಗಳನ್ನು ಪ್ರದರ್ಶಿಸುವುದನ್ನು ನಾವು ನೋಡಿದ್ದೇವೆ. ಈ ವೇಳೆ ಜಡೇಜಾ ಮುಶ್ಫಿಕರ್ ಕ್ಯಾಚ್ ಹಿಡಿದ ತಕ್ಷಣ ಭಾರತ ತಂಡದ ಫೀಲ್ಡಿಂಗ್ ಕೋಚ್, ಅಂಪೈರ್ ಮರೈಸ್ ಎರಾಸ್ಮಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋ ಭಾರಿ ವೈರಲ್ ಆಗಿದ್ದು, ಅದರಲ್ಲಿ ಅಂಪೈರ್ ಎರಾಸ್ಮಸ್, ಭಾರತದ ಫೀಲ್ಡಿಂಗ್ ಕೋಚ್‌ಗೆ ಪದಕ ನೀಡುವಂತೆ ಸನ್ನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯದ ನಂತರ ಭಾರತ ತಂಡದ ಆಡಳಿತ ಮಂಡಳಿ ತನ್ನ ಅತ್ಯುತ್ತಮ ಫೀಲ್ಡರ್‌ಗಳಿಗೆ ಬಹುಮಾನ ನೀಡುವ ಯೋಜನೆ ಹಾಕಿಕೊಂಡಿದೆ. ಅದರಂತೆ ಈ ಹಿಂದೆ ನಡೆದ ಪಂದ್ಯಗಳಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ಟೀಂ ಇಂಡಿಯಾ ಆಟಗಾರರಿಗೆ ಡ್ರೆಸ್ಸಿಂಗ್ ಕೋಣೆಯಲ್ಲಿ ಈ ಪದಕ ಹಾಕಿ ಸನ್ಮಾನಿಸಲಾಗುತ್ತದೆ. ಇದಕ್ಕೂ ಮುನ್ನ ಈ ಪದಕವನ್ನು ಶಾರ್ದೂಲ್ ಠಾಕೂರ್ ಮತ್ತು ಕೆಎಲ್ ರಾಹುಲ್ ಅವರಿಗೆ ನೀಡಲಾಗಿದೆ.
Ravindra Jadeja: ಭಾರತದ ನೆಲದಲ್ಲಿ ಶತಕದ ಸಾಧನೆ ಮಾಡಿದ ರವೀಂದ್ರ ಜಡೇಜಾ..!
ಇನ್ನು ಪಂದ್ಯದ ಕುರಿತು ಹೇಳುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ರನ್ ಕಲೆಹಾಕಿದೆ. ಬಾಂಗ್ಲಾದೇಶ ಪರ ಆರಂಭಿಕರಾದ ತಂಜಿದ್ ಅಸನ್ (51) ಮತ್ತು ಲಿಟನ್ ದಾಸ್ (66) ಅರ್ಧಶತಕ ಗಳಿಸಿದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಹಮ್ಮದುಲ್ಲಾ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 46 ರನ್ ಸಿಡಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:14 pm, Thu, 19 October 23