IND vs BAN: ಗಿಲ್ ಸಿಡಿಸಿದ ಸಿಕ್ಸರ್​ಗೆ ಸಾರಾ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ

Sara Tendulkar- Shubman Gill: ಆರಂಭಿಕ ಶುಭ್​ಮನ್ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ವೇಳೆ ಶುಭ್​ಮನ್ ಗಿಲ್ ಬಾರಿಸಿದ ಸಿಕ್ಸರ್​ಗೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ನೀಡಿದ ಪ್ರತಿಕ್ರಿಯೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

IND vs BAN: ಗಿಲ್ ಸಿಡಿಸಿದ ಸಿಕ್ಸರ್​ಗೆ ಸಾರಾ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ
ಶುಭಮನ್ ಗಿಲ್, ಸಾರಾ ತೆಂಡೂಲ್ಕರ್
Follow us
ಪೃಥ್ವಿಶಂಕರ
|

Updated on: Oct 19, 2023 | 8:34 PM

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವಿನ ವಿಶ್ವಕಪ್ ಪಂದ್ಯದಲ್ಲಿ ಈ ಹಂತದವರೆಗೆ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಈ ವಿಶ್ವಕಪ್​ನಲ್ಲಿ (ICC World Cup 2023) ನಾಲ್ಕನೇ ಪಂದ್ಯವನ್ನಾಡುತ್ತಿರುವ ರೋಹಿತ್ ಪಡೆ ಗೆಲುವಿನ ಸನಿಹದಲ್ಲಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿರುವ 256 ರನ್​ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ. ಭಾರತದ ಆರಂಭಿಕರಿಬ್ಬರು 88 ರನ್​ಗಳ ಜೊತೆಯಾಟ ನೀಡಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಅರ್ಧಶತಕ ವಂಚಿತರಾದರೆ, ಮತ್ತೊಬ್ಬ ಆರಂಭಿಕ ಶುಭ್​ಮನ್ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ವೇಳೆ ಶುಭ್​ಮನ್ ಗಿಲ್ (Shubman Gill) ಬಾರಿಸಿದ ಸಿಕ್ಸರ್​ಗೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ನೀಡಿದ ಪ್ರತಿಕ್ರಿಯೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಚಪ್ಪಾಳೆ ತಟ್ಟುತ್ತ ಸಂಭ್ರಮಿಸಿದ ಸಾರಾ

ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದ ಗಿಲ್, ನಂತರ ರೋಹಿತ್​ರಂತೆ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಇದೇ ವೇಳೆ ಭಾರತದ ಇನ್ನಿಂಗ್ಸ್​ನ 4ನೇ ಓವರ್​ 4ನೇ ಎಸೆತವನ್ನು ಎದುರಿಸಿದ ಗಿಲ್, ಆ ಎಸೆತವನ್ನು ಲಾಂಗ್ ಆಫ್​ನಲ್ಲಿ ಸೀದಾ ಸಿಕ್ಸರ್​ಗಟ್ಟಿದರು. ಗಿಲ್​ ಅವರ ಈ ಸಿಕ್ಸರ್​ಗೆ ಇಡೀ ಮೈದಾನವೇ ಹುಚ್ಚೆದು ಕುಣಿಯಿತು. ಅದರಲ್ಲೂ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿರುವ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಚಪ್ಪಾಳೆ ತಟ್ಟುತ್ತ ನಗುವಿನೊಂದಿಗೆ ಸಂಭ್ರಮಾಚರಣೆ ಮಾಡಿದರು. ಸಾರಾ ನೀಡಿರುವ ಈ ರಿಯಾಕ್ಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ತಂಡ ಸೇರಿಕೊಳ್ಳಲು ಅಹಮದಾಬಾದ್ ತಲುಪಿದ ಶುಭ್​ಮನ್ ಗಿಲ್; ಪಾಕ್ ವಿರುದ್ಧ ಕಣಕ್ಕೆ?

ಗಿಲ್ ಹಿಡಿದ ಕ್ಯಾಚ್​ಗೂ ಸಾರಾ ಹರ್ಷ

ಬಾಂಗ್ಲಾ ಇನಿಂಗ್ಸ್‌ನ 38ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಗಿಲ್ ತೌಹೀದ್ ಹೃದಯ್ ಅವರ ಕ್ಯಾಚ್ ಪಡೆದರು. ಈ ಕ್ಯಾಚ್‌ನ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದೆ. ಶಾರ್ದೂಲ್ ಬೌಲ್ ಮಾಡಿದ ಓವರ್‌ನ ಎರಡನೇ ಎಸೆತವನ್ನು ಹೃದಯ್, ಲೆಗ್ ಸೈಡ್‌ನಲ್ಲಿ ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಮೇಲ್ಭಾಗಕ್ಕೆ ಬಡಿದು ಗಾಳಿಯಲ್ಲಿ ಹೋಗಿ ನೇರವಾಗಿ ಶುಭ್​ಮನ್ ಗಿಲ್ ಕೈ ಸೇರಿತು. ಆಗಲೂ ಸಹ ಸಾರಾ ಚಪ್ಪಾಳೆ ತಟ್ಟುವ ಮೂಲಕ ಗೆಳೆಯರೊಂದಿಗೆ ಸಂಭ್ರಮಿಸಿದ್ದರು.

ಗಿಲ್- ಸಾರಾ ನಡುವೆ ಪ್ರೀತಿ?

ವಾಸ್ತವವಾಗಿ ಸಾರಾ ತೆಂಡೂಲ್ಕರ್ ಅವರ ವಿಡಿಯೋ ಈ ಪರಿ ವೈರಲ್ ಆಗಲು ಕಾರಣವೂ ಇದೆ. ಟೀಂ ಇಂಡಿಯಾ ಯುವ ಕ್ರಿಕೆಟಿಗ ಶುಭ್​ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಬಹಳ ದಿನಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಈ ಇಬ್ಬರು ಸಹ ಹೋಟೆಲ್​ಗಳಲ್ಲಿ ಹಾಗೂ ವಿದೇಶಗಳಲ್ಲಿ ಒಟ್ಟಾಗಿ ಕಾಣಸಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರ ನಡುವೆ ಪ್ರೀತಿ ಇದೆ ಎಂಬುದು ಹಲವರ ಮಾತಾಗಿದೆ. ಆದರೆ ಈ ವದಂತಿಯ ಬಗ್ಗೆ ಈ ಇಬ್ಬರು ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ