AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಮ್ಯಾನ್ ರವೀಂದ್ರ; ಜಡೇಜಾಗೆ ಪದಕ ನೀಡಿ ಎಂದ ಅಂಪೈರ್ ಎರಾಸ್ಮಸ್! ವಿಡಿಯೋ ನೋಡಿ

Ravindra Jadeja, ICC World Cup 2023: ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ತಮ್ಮ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚಿರತೆಯಂತೆ ಎಗರಿದ ಜಡೇಜಾ, ಮುಶ್ಫಿಕರ್ ರಹೀಮ್ ಅವರ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

ಸೂಪರ್ ಮ್ಯಾನ್ ರವೀಂದ್ರ; ಜಡೇಜಾಗೆ ಪದಕ ನೀಡಿ ಎಂದ ಅಂಪೈರ್ ಎರಾಸ್ಮಸ್! ವಿಡಿಯೋ ನೋಡಿ
ರವೀಂದ್ರ ಜಡೇಜಾ
ಪೃಥ್ವಿಶಂಕರ
|

Updated on:Oct 19, 2023 | 7:15 PM

Share

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ (Ravindra Jadeja) ತಮ್ಮ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ (India vs Bangladesh) ಚಿರತೆಯಂತೆ ಎಗರಿದ ಜಡೇಜಾ, ಮುಶ್ಫಿಕರ್ ರಹೀಮ್ (Mushfiqur Rahim) ಅವರ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಬಾಂಗ್ಲಾದೇಶ ಇನ್ನಿಂಗ್ಸ್​ನ 43ನೇ ಓವರ್ ಬೌಲಿಂಗ್ ಮಾಡಲು ಜಸ್ಪ್ರೀತ್ ಬುಮ್ರಾ (Jasprit Bumrah) ಬಂದರು. ಈ ವೇಳೆ 38 ರನ್ ಗಳಿಸಿ ಬಾಂಗ್ಲಾ ಇನ್ನಿಂಗ್ಸ್​ಗೆ ಆಸರೆಯಾಗಿದ್ದ ಮುಶ್ಫಿಕರ್ ರಹೀಮ್ (38) ಅವರ ವಿಕೆಟ್ ಉರುಳಿಸಿದರು.

ಅದ್ಭುತ ಡೈವ್ ಮಾಡಿ ಕ್ಯಾಚ್ ಹಿಡಿದ ಜಡೇಜಾ

ಮಹಮ್ಮದುಲ್ಲಾ ಅವರೊಂದಿಗೆ ಉತ್ತಮ ಜೊತೆಯಾಟ ಕಟ್ಟಿದ ಮುಶ್ಫಿಕರ್, ಅರ್ಧಶತಕದ ಸಮೀಪದಲ್ಲಿದ್ದರು. ಈ ವೇಳೆ ಬುಮ್ರಾ ಬೌಲ್ ಮಾಡಿದ 43ನೇ ಓವರ್​ನಲ್ಲಿ ರವೀಂದ್ರ ಜಡೇಜಾ ನಿಂತಿದ್ದ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಮುಶ್ಫಿಕರ್ ಶಾಟ್ ಆಡಿದರು. ಕೂಡಲೇ ಜಡೇಜಾ ತಮ್ಮ ಬಲಕ್ಕೆ ಅದ್ಭುತ ಡೈವ್ ಮಾಡಿ, ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಬಾಂಗ್ಲಾ ತಂಡದ 6ನೇ ವಿಕೆಟ್ ಪತನವಾದರೆ, ಭಾರತಕ್ಕೆ ಸ್ಟಾರ್ ಆಟಗಾರನ ವಿಕೆಟ್ ಸಿಕ್ಕಿತು.

ಎರಾಸ್ಮಸ್ ಅಚ್ಚರಿ

ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಜಡೇಜಾ, ಮೈದಾನದಲ್ಲಿ ಅನೇಕ ಬಾರಿ ಇಂತಹ ಸಾಹಸಗಳನ್ನು ಪ್ರದರ್ಶಿಸುವುದನ್ನು ನಾವು ನೋಡಿದ್ದೇವೆ. ಈ ವೇಳೆ ಜಡೇಜಾ ಮುಶ್ಫಿಕರ್ ಕ್ಯಾಚ್ ಹಿಡಿದ ತಕ್ಷಣ ಭಾರತ ತಂಡದ ಫೀಲ್ಡಿಂಗ್ ಕೋಚ್, ಅಂಪೈರ್ ಮರೈಸ್ ಎರಾಸ್ಮಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋ ಭಾರಿ ವೈರಲ್ ಆಗಿದ್ದು, ಅದರಲ್ಲಿ ಅಂಪೈರ್ ಎರಾಸ್ಮಸ್, ಭಾರತದ ಫೀಲ್ಡಿಂಗ್ ಕೋಚ್‌ಗೆ ಪದಕ ನೀಡುವಂತೆ ಸನ್ನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

Ravindra Jadeja pulled off a stunning catch to dismiss Mushfiqur Rahim in IND vs BAN World Cup tie, sends unique celebration to T Dilip

ಅತ್ಯುತ್ತಮ ಫೀಲ್ಡರ್‌ಗಳಿಗೆ ಪದಕ

ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯದ ನಂತರ ಭಾರತ ತಂಡದ ಆಡಳಿತ ಮಂಡಳಿ ತನ್ನ ಅತ್ಯುತ್ತಮ ಫೀಲ್ಡರ್‌ಗಳಿಗೆ ಬಹುಮಾನ ನೀಡುವ ಯೋಜನೆ ಹಾಕಿಕೊಂಡಿದೆ. ಅದರಂತೆ ಈ ಹಿಂದೆ ನಡೆದ ಪಂದ್ಯಗಳಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ಟೀಂ ಇಂಡಿಯಾ ಆಟಗಾರರಿಗೆ ಡ್ರೆಸ್ಸಿಂಗ್ ಕೋಣೆಯಲ್ಲಿ ಈ ಪದಕ ಹಾಕಿ ಸನ್ಮಾನಿಸಲಾಗುತ್ತದೆ. ಇದಕ್ಕೂ ಮುನ್ನ ಈ ಪದಕವನ್ನು ಶಾರ್ದೂಲ್ ಠಾಕೂರ್ ಮತ್ತು ಕೆಎಲ್ ರಾಹುಲ್ ಅವರಿಗೆ ನೀಡಲಾಗಿದೆ.

Ravindra Jadeja: ಭಾರತದ ನೆಲದಲ್ಲಿ ಶತಕದ ಸಾಧನೆ ಮಾಡಿದ ರವೀಂದ್ರ ಜಡೇಜಾ..!

256 ರನ್ ಟಾರ್ಗೆಟ್

ಇನ್ನು ಪಂದ್ಯದ ಕುರಿತು ಹೇಳುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ರನ್ ಕಲೆಹಾಕಿದೆ. ಬಾಂಗ್ಲಾದೇಶ ಪರ ಆರಂಭಿಕರಾದ ತಂಜಿದ್ ಅಸನ್ (51) ಮತ್ತು ಲಿಟನ್ ದಾಸ್ (66) ಅರ್ಧಶತಕ ಗಳಿಸಿದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಹಮ್ಮದುಲ್ಲಾ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 46 ರನ್ ಸಿಡಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Thu, 19 October 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ