ತಂಡ ಸೇರಿಕೊಳ್ಳಲು ಅಹಮದಾಬಾದ್ ತಲುಪಿದ ಶುಭ್ಮನ್ ಗಿಲ್; ಪಾಕ್ ವಿರುದ್ಧ ಕಣಕ್ಕೆ?
Shubman Gill Health Update: ಇದೀಗ ವರದಿಯಾಗಿರುವಂತೆ ಶುಭ್ಮನ್ ಗಿಲ್ ಆರೋಗ್ಯವಾಗಿದ್ದು, ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ಆದರೆ ಗಿಲ್ ಚೇತರಿಸಿಕೊಂಡಿದ್ದರೂ ಗುರುವಾರ ಅಭ್ಯಾಸ ನಡೆಸುವುದಿಲ್ಲ ಎಂಬುದು ಸುದ್ದಿ. ಹಾಗಿದ್ದಲ್ಲಿ, ಪಾಕಿಸ್ತಾನದ ವಿರುದ್ಧ ಆಡುವುದು ಅವರಿಗೆ ಕಷ್ಟಕರವೆಂದು ತೋರುತ್ತದೆ.
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC world cup 2023) ಅಫ್ಘಾನಿಸ್ತಾನ ವಿರುದ್ಧ ಗೆದ್ದು ಬೀಗಿರುವ ಟೀಂ ಇಂಡಿಯಾ (India Vs Afghanistan) ಇದೀಗ ತನ್ನ ಮುಂದಿನ ಪಂದ್ಯಕ್ಕಾಗಿ ತಯಾರಿ ಆರಂಭಿಸಿದೆ. ಅಕ್ಟೋಬರ್ 14 ರಂದು ನಡೆಯಲ್ಲಿರುವ ಹೈವೋಲ್ಟೇಜ್ ಕದನದಲ್ಲಿ ರೋಹಿತ್ ಪಡೆ ಬದ್ಧವೈರಿ ಪಾಕಿಸ್ತಾನವನ್ನು (India Vs Pakistan) ಎದುರಿಸಲಿದೆ. ಈ ಪಂದ್ಯಕ್ಕಾಗಿ ಬಾಬರ್ ಪಡೆ ಈಗಾಗಲೇ ಅಹಮದಾಬಾದ್ ತಲುಪಿದೆ. ಟೀಂ ಇಂಡಿಯಾ (Team India) ಕೂಡ ಇಷ್ಟರಲ್ಲೇ ಅಹಮದಾಬಾದ್‌ಗೆ ತೆರಳಲಿದೆ. ಈ ನಡುವೆ ಟೀಂ ಇಂಡಿಯಾ ಪಾಳಯದಿಂದ ಶುಭ ಸುದ್ದಿ ಹೊರಬಿದ್ದಿದ್ದು, ಡೆಂಗ್ಯೂಗೆ ತುತ್ತಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill) ಇದೀಗ ತಂಡವನ್ನು ಸೇರಿಕೊಳ್ಳಲು ಅಹಮದಾಬಾದ್‌ಗೆ ಬಂದಿಳಿದಿದ್ದಾರೆ.
ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸುವುದಕ್ಕೂ ಮುನ್ನವೇ ಶುಭ್ಮನ್ ಗಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೊದಲ 2 ಪಂದ್ಯಗಳಿಂದ ಹೊರಗಿಡಲಾಗಿತ್ತು. ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಗಿಲ್ರನ್ನು ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ ಕೆಲವು ಗಂಟೆಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.
ಆಸ್ಪತ್ರೆಯಿಂದ ಶುಭ್ಮನ್ ಗಿಲ್ ಡಿಸ್ಚಾರ್ಜ್; ಪಾಕ್ ವಿರುದ್ಧದ ಪಂದ್ಯಕ್ಕೆ ಲಭ್ಯ?
ಗಿಲ್ ಆರೋಗ್ಯದ ಬಗ್ಗೆ ಮಾಹಿತಿ
ಇದೀಗ ವರದಿಯಾಗಿರುವಂತೆ ಶುಭ್ಮನ್ ಗಿಲ್ ಆರೋಗ್ಯವಾಗಿದ್ದು, ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ಆದರೆ ಗಿಲ್ ಚೇತರಿಸಿಕೊಂಡಿದ್ದರೂ ಗುರುವಾರ ಅಭ್ಯಾಸ ನಡೆಸುವುದಿಲ್ಲ ಎಂಬುದು ಸುದ್ದಿ. ಹಾಗಿದ್ದಲ್ಲಿ, ಪಾಕಿಸ್ತಾನದ ವಿರುದ್ಧ ಆಡುವುದು ಅವರಿಗೆ ಕಷ್ಟಕರವೆಂದು ತೋರುತ್ತದೆ. ಏಕೆಂದರೆ ಅವರ ಸ್ಥಾನದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ತಂಡದ ಆಡಳಿತ ಮಂಡಳಿ ಗಿಲ್ ವಿಚಾರದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಗಿಲ್ ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೇ ತಂಡದಲ್ಲಿ ಆಡಿಸಲು ತೀರ್ಮಾನಿಸಿದೆ. ಒಂದು ವೇಳೆ ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಲಭ್ಯವಾಗದಿದ್ದರೆ ಅವರ ಸ್ಥಾನದಲ್ಲಿ ಮತ್ತೊಮ್ಮೆ ಇಶಾನ್ ಕಿಶನ್ ಕಣಕ್ಕಿಳಿಯಲ್ಲಿದ್ದಾರೆ.
ಪಾಕ್ ವಿರುದ್ಧ ಕಣಕ್ಕೆ?
ಇದೇ ವೇಳೆ ತಂಡವನ್ನು ಸೇರಿಕೊಳ್ಳಲು ಅಹಮದಾಬಾದ್‌ಗೆ ಬಂದಿಳಿದ ಗಿಲ್ರನ್ನು ವಿಮಾನ ನಿಲ್ದಾಣದಲ್ಲಿ ನೀವು ಪಾಕಿಸ್ತಾನದ ವಿರುದ್ಧ ಆಡಲು ಫಿಟ್ ಆಗಿದ್ದೀರಾ? ಎಂದು ಪತ್ರಕರ್ತರು ಪಶ್ನಿಸಿದರು. ಇದಕ್ಕೆ ಶುಭ್ಮನ್ ಗಿಲ್ ಯಾವುದೇ ಉತ್ತರ ನೀಡದೆ ತೆರಳಿದರು.
So the @ShubmanGill reached Ahemdabad ,hope he will be fine soon and deliver good news asap #WorldCup2023 pic.twitter.com/f7NC1JR1KU
— vipul kashyap (@kashyapvipul) October 11, 2023
ವಿಶ್ವಕಪ್‌ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:33 am, Thu, 12 October 23