AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಯಿಂದ ಶುಭ್​ಮನ್ ಗಿಲ್ ಡಿಸ್ಚಾರ್ಜ್; ಪಾಕ್ ವಿರುದ್ಧದ ಪಂದ್ಯಕ್ಕೆ ಲಭ್ಯ?

Shubman Gill Health Update: ಪ್ಲೇಟ್‌ಲೆಟ್ ಎಣಿಕೆ ಕಡಿಮೆ ಇರುವ ಕಾರಣದಿಂದಾಗಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಗಿಲ್, ಅರ್ಧ ಗಂಟೆಯ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದ ನಂತರ ಗಿಲ್ ಹೋಟೆಲ್‌ಗೆ ಮರಳಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಆಸ್ಪತ್ರೆಯಿಂದ ಶುಭ್​ಮನ್ ಗಿಲ್ ಡಿಸ್ಚಾರ್ಜ್; ಪಾಕ್ ವಿರುದ್ಧದ ಪಂದ್ಯಕ್ಕೆ ಲಭ್ಯ?
ಶುಭ್​ಮನ್ ಗಿಲ್
ಪೃಥ್ವಿಶಂಕರ
|

Updated on:Oct 11, 2023 | 7:54 AM

Share

ವಿಶ್ವಕಪ್ (ICC World Cup 2023) ಆರಂಭಕ್ಕೂ ಮುನ್ನವೆ ಡೆಂಗ್ಯೂಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್​ಮನ್ ಗಿಲ್ (Shubman Gill) ಅವರ ಆರೋಗ್ಯದ ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಿದೆ. ಪ್ಲೇಟ್‌ಲೆಟ್ ಎಣಿಕೆ ಕಡಿಮೆ ಇರುವ ಕಾರಣದಿಂದಾಗಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಗಿಲ್, ಅರ್ಧ ಗಂಟೆಯ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದ ನಂತರ ಗಿಲ್ ಹೋಟೆಲ್‌ಗೆ ಮರಳಿದ್ದಾರೆ ಎಂದು ಬಿಸಿಸಿಐ (BCCI) ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕಳೆದ ಎರಡು ದಿನಗಳಿಂದ ಚೆನ್ನೈನ ಹೋಟೆಲ್‌ನಲ್ಲಿ ಶುಭ್​ಮನ್ ಗಿಲ್ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಅವರ ಪ್ಲೇಟ್‌ಲೆಟ್ ಸಂಖ್ಯೆ 70,000 ಕ್ಕೆ ಇಳಿದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಗ್ಯೂಗೆ ತುತ್ತಾದವರ ಪ್ಲೇಟ್‌ಲೆಟ್ ಎಣಿಕೆ 100,000 ಕ್ಕಿಂತ ಕಡಿಮೆಯಾದರೆ, ಅಂತಹವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಗಿಲ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಾಸ್ತವವಾಗಿ ಮೇಲೆ ಹೇಳಿದಂತೆ ವಿಶ್ವಕಪ್ ಪ್ರಾರಂಭವಾಗುವ ಮೊದಲೇ ಶುಭ್​ಮನ್ ಗಿಲ್ ಡೆಂಗ್ಯೂಗೆ ತುತ್ತಾಗಿದ್ದರು. ಅಂದಿನಿಂದ ಅವರು ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ಅನಾರೋಗ್ಯದಿಂದಾಗಿ ಗಿಲ್, ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನು ಆಡಿರಲಿಲ್ಲ.

Shubman Gill Hospitalised: ಶುಭ್​ಮನ್ ಗಿಲ್ ಆಸ್ಪತ್ರೆಗೆ ದಾಖಲು: ಟೀಮ್ ಇಂಡಿಯಾ ಪಾಳಯದಲ್ಲಿ ಆತಂಕ

ಪಾಕ್ ಪಂದ್ಯಕ್ಕೆ ಡೌಟ್

ಹಾಗೆಯೇ ಇಂದು ನಡೆಯಲ್ಲಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಗಿಲ್ ಆಡುವುದಿಲ್ಲ. ಈಗಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಗಿಲ್, ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲ್ಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೂ ಆಡುವ ಸಾಧ್ಯತೆ ತೀರ ಕಡಿಮೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ಟೀಂ ಇಂಡಿಯಾ, ಚೆನ್ನೈನಲ್ಲಿ ಗಿಲ್

ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯ ಆಡಿದ ನಂತರ ಟೀಂ ಇಂಡಿಯಾ ಎರಡನೇ ಪಂದ್ಯಕ್ಕಾಗಿ ದೆಹಲಿಗೆ ಪ್ರಯಾಣ ಬೆಳೆಸಿದೆ. ಆದರೆ, ಹದಗೆಟ್ಟ ಆರೋಗ್ಯದ ಕಾರಣ, ಗಿಲ್ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚೆನ್ನೈನಲ್ಲಿ ಉಳಿಯಬೇಕಾಯಿತು. ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ವರದಿ ಪ್ರಕಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಗಿಲ್ ಆಡುವ ಸಾಧ್ಯತೆಗಳಿಲ್ಲ ಎಂದು ತಿಳಿದುಬಂದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:53 am, Wed, 11 October 23