ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯ ಮಾರ್ಚ್ 7 ರಿಂದ ಮಾರ್ಚ್ 11 ರ ನಡುವೆ ನಡೆಯಲಿದೆ. ಭಾರತ ತಂಡ ಈಗಾಗಲೇ ಸರಣಿ ವಶಪಡಿಸಿಕೊಂಡಿದ್ದು, ಇಂಗ್ಲೆಂಡ್ ತಂಡ ಮುಜುಗರದಿಂದ ಪಾರಾಗಲು ಧರ್ಮಶಾಲಾ (Dharamshala) ಟೆಸ್ಟ್ ಗೆಲ್ಲುವ ಇರಾದೆಯೊಂದಿಗೆ ಮೈದಾನಕ್ಕಿಳಿಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ಧರ್ಮಶಾಲಾ ತಲುಪಿವೆ. ವಾಸ್ತವವಾಗಿ, ಭಾನುವಾರದಂದು ಸುದೀರ್ಘ ರಜೆಯ ನಂತರ ಎರಡೂ ತಂಡಗಳು ಧರ್ಮಶಾಲಾವನ್ನು ತಲುಪಿದ್ದು, ಸೋಮವಾರದಿಂದ ಅಭ್ಯಾಸ ಆರಂಭಿಸಲಿವೆ.
ಧರ್ಮಶಾಲಾ ಇಂಗ್ಲೆಂಡ್‌ನ ಎರಡನೇ ತವರಿಂದಂತೆ. ಏಕೆಂದರೆ ಪ್ರಸ್ತುತ ಧರ್ಮಶಾಲಾದ ಹವಾಮಾನವು ಲಂಡನ್‌ನ ಹವಾಮಾನಕ್ಕೆ ನಿಖರವಾಗಿ ಹೊಂದಿಕೆಯಾಗುತ್ತದೆ. ಇಂಗ್ಲೆಂಡ್ ತಂಡ ಭಾನುವಾರ ಧರ್ಮಶಾಲಾ ತಲುಪಿದಾಗ ಮಳೆ ಅವರನ್ನು ಸ್ವಾಗತಿಸಿತು. ಆದರೆ ಧರ್ಮಶಾಲಾ ಪಿಚ್‌ನಲ್ಲಿ ಹುಲ್ಲು ಇರುವುದರಿಂದ, ಭಾರತದ ಇತರ ಪಿಚ್‌ಗಳಿಗಿಂತ ವೇಗದ ಬೌಲರ್‌ಗಳು ಇಲ್ಲಿ ಹೆಚ್ಚಿನ ಸಹಾಯವನ್ನು ಪಡೆಯಲ್ಲಿದ್ದಾರೆ.
VIDEO | Indian and England cricket teams arrive in Himachal Pradesh’s Dharamshala.
The fifth test between the two teams will be played at the HPCA Stadium in Dharamshala from March 7.
(Full video available on PTI Videos – https://t.co/n147TvqRQz) pic.twitter.com/dc8D5uxOwC
— Press Trust of India (@PTI_News) March 3, 2024
IND vs ENG: ಧರ್ಮಶಾಲಾ ಟೆಸ್ಟ್ ಗೆದ್ದರೆ ಇತಿಹಾಸ ನಿರ್ಮಿಸಲಿದೆ ಟೀಂ ಇಂಡಿಯಾ..!
ಇಂಗ್ಲೆಂಡ್ ತಂಡ ಸೋಮವಾರ ಧರ್ಮಶಾಲಾದಲ್ಲಿ ಅಭ್ಯಾಸ ಆರಂಭಿಸಲಿದೆ. ಇಂಗ್ಲಿಷ್ ತಂಡದ ಈ ಸೆಷನ್ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಆದರೆ ಭಾರತದ ಅಭ್ಯಾಸ ಸೆಷನ್ ಬೆಳಗ್ಗೆ 9:30 ರಿಂದ ಆರಂಭವಾಗಲಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಲಾಗಿದೆ. ಈ ಪೈಕಿ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿತ್ತು. ಅದರ ನಂತರ, ಭಾರತ ತಂಡ ಅದ್ಭುತ ಪುನರಾಗಮನವನ್ನು ಮಾಡಿ ವಿಶಾಖಪಟ್ಟಣಂ, ರಾಜ್‌ಕೋಟ್ ಮತ್ತು ರಾಂಚಿ ಟೆಸ್ಟ್‌ಗಳನ್ನು ಗೆದ್ದು, ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿತು. ಈಗಾಗಲೇ ಸರಣಿ ಸೋತಿರುವ ಇಂಗ್ಲೆಂಡ್, ಈಗ ಧರ್ಮಶಾಲಾ ಟೆಸ್ಟ್‌ನಲ್ಲಿ ಗೆದ್ದು ತನ್ನ ಖ್ಯಾತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.
VIDEO | IND vs ENG, 5th Test: “Indian cricket team’s practice session will be held at 9.30 am tomorrow. Meanwhile, the England cricket team’s practice session will be held at 1.30 pm tomorrow,” says Himachal Pradesh Cricket Association’s Vishal Sharma.
The fifth test between… pic.twitter.com/EljPoiYR1Q
— Press Trust of India (@PTI_News) March 3, 2024
ಇಂಗ್ಲೆಂಡ್ ಹೊರತಾಗಿ ಭಾರತ ತಂಡವೂ ಧರ್ಮಶಾಲಾ ತಲುಪಿದೆ. ಧರ್ಮಶಾಲಾದಲ್ಲಿ ಸೋಮವಾರ ಬೆಳಗ್ಗೆ 9:30ರಿಂದ ಭಾರತ ಅಭ್ಯಾಸ ಸೆಷನ್‌ನಲ್ಲಿ ಭಾಗವಹಿಸಲಿದೆ. ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಸರಣಿಯನ್ನು 4-1 ಅಂತರದಿಂದ ಕೊನೆಗೊಳಿಸುವ ಗುರಿಯನ್ನು ಭಾರತ ಹೊಂದಿದೆ. ಅಲ್ಲದೆ ಭಾರತದ ಈ ಗೆಲುವು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ನಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲಿದೆ. ಪ್ರಸ್ತುತ ಭಾರತ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಧರ್ಮಶಾಲಾ ಟೆಸ್ಟ್ ಗೆಲ್ಲುವ ಮೂಲಕ ಈ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ರೋಹಿತ್ ಪಡೆ ಯತ್ನಿಸಲಿದೆ.
Published On - 5:16 pm, Sun, 3 March 24