IND vs ENG: ಟೀಂ ಇಂಡಿಯಾಕ್ಕೆ ಆಯ್ಕೆಯಾದ ಆಲ್‌ರೌಂಡರ್ ಸೌರಭ್ ಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು?

|

Updated on: Jan 29, 2024 | 7:38 PM

IND vs ENG: ಭಾರತ ಕ್ರಿಕೆಟ್​ನಲ್ಲಿ ಸರ್ಫರಾಜ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್​ ಹೆಸರನ್ನು ಕೇಳದವರಿಲ್ಲ. ಆದರೆ ಈ ಇಬ್ಬರೊಂದಿಗೆ ತಂಡಕ್ಕೆ ಆಯ್ಕೆಯಾಗಿರುವ ದೇಶಿ ಪ್ರತಿಭೆ ಸೌರಭ್ ಕುಮಾರ್ ಯಾರು ಎಂಬುದರ ವ್ಯಕ್ತಿ ಪರಿಚಯ ಇಲ್ಲಿದೆ.

IND vs ENG: ಟೀಂ ಇಂಡಿಯಾಕ್ಕೆ ಆಯ್ಕೆಯಾದ ಆಲ್‌ರೌಂಡರ್ ಸೌರಭ್ ಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು?
ಸೌರಭ್ ಕುಮಾರ್
Follow us on

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ (India vs England) 28 ರನ್​ಗಳ ಹೀನಾಯ ಸೋಲನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ವಿರಾಟ್ ಕೊಹ್ಲಿಯನ್ನು ಸಾಕಷ್ಟು ಮಿಸ್ ಮಾಡಿಕೊಂಡಿತ್ತು . ಇದೀಗ ಎರಡನೇ ಟೆಸ್ಟ್‌ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದ್ದು ಕೆಎಲ್ ರಾಹುಲ್ (KL Rahul) ಮತ್ತು ರವೀಂದ್ರ ಜಡೇಜಾ (Ravindra Jadeja) ವೈಜಾಗ್ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್ (Saurabh Kumar) ಸ್ಥಾನ ಪಡೆದಿದ್ದಾರೆ. ಭಾರತ ಕ್ರಿಕೆಟ್​ನಲ್ಲಿ ಸರ್ಫರಾಜ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್​ ಹೆಸರನ್ನು ಕೇಳದವರಿಲ್ಲ. ಆದರೆ ಈ ಇಬ್ಬರೊಂದಿಗೆ ತಂಡಕ್ಕೆ ಆಯ್ಕೆಯಾಗಿರುವ ದೇಶಿ ಪ್ರತಿಭೆ ಸೌರಭ್ ಕುಮಾರ್ ಯಾರು ಎಂಬುದರ ವ್ಯಕ್ತಿ ಪರಿಚಯ ಇಲ್ಲಿದೆ.

ಸೌರಭ್ ಕುಮಾರ್ ಯಾರು?

ಉತ್ತರಪ್ರದೇಶದ ಉದಯೋನ್ಮುಖ ತಾರೆ, ಸೌರಭ್ ಕುಮಾರ್ ಆಲ್ ರೌಂಡರ್ ಆಗಿದ್ದು, ಇದುವರೆಗಿನ ತಮ್ಮ ಅಲ್ಪಾವಧಿಯ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಒಮ್ಮೆ ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿಯಾಗಿದ್ದ ಸೌರಭ್ 2015 ರಲ್ಲಿ ಯುಪಿ ಪರ ಆಡುವ ಸಲುವಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತದ ಪರ 68 ಪಂದ್ಯಗಳನ್ನು ಆಡಿರುವ ಸೌರಭ್ ಎರಡು ಶತಕಗಳು ಸೇರಿದಂತೆ 2061 ರನ್ ಗಳಿಸಿದ್ದಾರೆ. ಅಷ್ಟೇ ಸಂಖ್ಯೆಯ ಪಂದ್ಯಗಳಲ್ಲಿ 290 ವಿಕೆಟ್‌ಗಳನ್ನು ಪಡೆದಿದ್ದಾರೆ. 30 ವರ್ಷದ ಸೌರಭ್ ಕುಮಾರ್ ಉತ್ತರ ಪ್ರದೇಶದ ಬಾಗ್ಪತ್ ನಿವಾಸಿಯಾಗಿದ್ದು, 2014 ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ ಅವರು ಯುಪಿಯಲ್ಲಿನ ವಿವಿಧ ತಂಡಗಳ ಪರ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.

IND vs ENG: ಇಬ್ಬರು ಔಟ್, ಮೂವರು ಇನ್; ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ

2021 ರ ಇಂಗ್ಲೆಂಡ್ ಸರಣಿಗೆ ಆಯ್ಕೆ

ಸೌರಭ್ ಕುಮಾರ್ ಎರಡನೇ ಬಾರಿಗೆ ಭಾರತದ ಪ್ರಮುಖ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು 2021 ರಲ್ಲಿ, ಅವರು ಇಂಗ್ಲೆಂಡ್‌ನ ಭಾರತ ಪ್ರವಾಸದ ಸಮಯದಲ್ಲಿ ನೆಟ್ ಬೌಲರ್ ಆಗಿ ತಂಡದೊಂದಿಗೆ ಇದ್ದರು. ನಂತರ ಅವರು 2022 ರಲ್ಲಿ ಶ್ರೀಲಂಕಾ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾದರೂ ಅವರಿಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ . ಈ ಬಾರಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಂಡಿರುವ ಸೌರಭ್​ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆಗಳಿವೆ.

ಐಪಿಎಲ್​ಗೂ ಎಂಟ್ರಿ

ಸೌರಭ್ ಕುಮಾರ್ ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್‌ ತಂಡದ ಪರ ಆಡುದ್ದಾರೆ. ಆದರೆ ಇಲ್ಲಿಯವರೆಗೆ ಅವರಿಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ. ಅವರು ರಣಜಿ ಮತ್ತು ದೇಶೀಯ ಕ್ರಿಕೆಟ್‌ನ ಇತರ ಸ್ವರೂಪಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸೌರಭ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 290 ವಿಕೆಟ್‌ಗಳನ್ನು ಮತ್ತು ಲಿಸ್ಟ್ A ನಲ್ಲಿ 35 ಪಂದ್ಯಗಳಲ್ಲಿ 49 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ