IND vs ENG: ಕಪಿಲ್ ದೇವ್ ಸೃಷ್ಟಿಸಿದ್ದ 41 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ ಬುಮ್ರಾ..!
Jasprit Bumrah: ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ 6 ವಿಕೆಟ್ ಉರುಳಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ಪ್ರಮುಖವಾದದ್ದು, ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರ 41 ವರ್ಷಗಳ ಹಳೆಯ ದಾಖಲೆಯೂ ಒಂದಾಗಿದೆ.
1 / 8
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ 6 ವಿಕೆಟ್ ಉರುಳಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ಪ್ರಮುಖವಾದದ್ದು, ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರ 41 ವರ್ಷಗಳ ಹಳೆಯ ದಾಖಲೆಯೂ ಒಂದಾಗಿದೆ.
2 / 8
ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದರು. ಅವರು ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ ಮತ್ತು ಟಾಮ್ ವಿಲಿಯಂ ಹಾರ್ಟ್ಲಿ ಹಾಗೂ ಜೇಮ್ಸ್ ಅಂಡರ್ಸನ್ ವಿಕೆಟ್ ಪಡೆದರು.
3 / 8
ಬುಮ್ರಾ ಪಡೆದ ಈ 6 ವಿಕೆಟ್ಗಳಲ್ಲಿ 4 ವಿಕೆಟ್ಗಳು 3 ರಿಂದ 6 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಆಟಗಾರರದ್ದಾಗಿತ್ತು. 1983 ರ ನಂತರ ಭಾರತದಲ್ಲಿ ವೇಗದ ಬೌಲರ್ 3, ನಂಬರ್ 4, ನಂಬರ್ 5 ಮತ್ತು ನಂಬರ್ 6 ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದದ್ದು ಇದೇ ಮೊದಲು.
4 / 8
ಇದಕ್ಕೂ ಮೊದಲು ಕಪಿಲ್ ದೇವ್ 1983ರಲ್ಲಿ ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂತಹ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಕಪಿಲ್ ದೇವ್ 83 ರನ್ ನೀಡಿ 9 ವಿಕೆಟ್ ಪಡೆದಿದ್ದರು.
5 / 8
ಇದೀಗ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ವೇಗಿ ಎನಿಸಿಕೊಂಡಿದ್ದಾರೆ. ಈ ಮೂಲಕ ಕಪಿಲ್ ದೇವ್ ಅವರ 41 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಟೆಸ್ಟ್ನಲ್ಲಿ 150 ವಿಕೆಟ್ ಪಡೆದ 8ನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ
6 / 8
ಹಾಗೆಯೇ ಅತಿ ಕಡಿಮೆ ಎಸೆತಗಳಲ್ಲಿ 150 ವಿಕೆಟ್ ಪೂರೈಸಿದ ಮೊದಲ ಬೌಲರ್ ಎಂಬ ದಾಖಲೆಯನ್ನು ಬುಮ್ರಾ ನಿರ್ಮಿಸಿದ್ದಾರೆ. ಬುಮ್ರಾ 6781 ಎಸೆತಗಳಲ್ಲಿ 150 ವಿಕೆಟ್ಗಳ ಮೈಲಿಗಲ್ಲನ್ನು ದಾಟಿದ್ದಾರೆ.
7 / 8
ಬುಮ್ರಾಗೂ ಮೊದಲು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ವೇಗಿ ಉಮೇಶ್ ಯಾದವ್ 7661 ಎಸೆತಗಳಲ್ಲಿ 150 ವಿಕೆಟ್ ಪಡೆದಿದ್ದರು. ಇದೀಗ ಈ ಪಟ್ಟಿಯಲ್ಲಿ ಬುಮ್ರಾ ಅಗ್ರಸ್ಥಾನಕ್ಕೇರಿದರೆ, ಉಮೇಶ್ ಯಾದವ್ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.
8 / 8
ಈ ಇಬ್ಬರನ್ನು ಹೊರತುಪಡಿಸಿ ಅತಿ ಕಡಿಮೆ ಎಸೆತಗಳಲ್ಲಿ 150 ವಿಕೆಟ್ ಪೂರೈಸಿದ ಭಾರತದ ವೇಗಿಗಳ ಪೈಕಿ ಮೂರನೇ ಸ್ಥಾನದಲ್ಲಿರುವ ಮೊಹಮ್ಮದ್ ಶಮಿ, 7755 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. 8378 ಎಸೆತಗಳಲ್ಲಿ 150 ವಿಕೆಟ್ ಪಡೆದಿದ್ದ ಕಪಿಲ್ ದೇವ್ ನಾಲ್ಕನೇ ಸ್ಥಾನದಲ್ಲಿದ್ದಾರೆ.