IND vs ENG: ಟೀಂ ಇಂಡಿಯಾಗೆ ಸಿಹಿ ಸುದ್ದಿ; ಅಭ್ಯಾಸ ಆರಂಭಿಸಿದ ರಾಹುಲ್! ತಂಡದಲ್ಲಿ ಆಡುವುದು ಖಚಿತ

KL Rahul: ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ರಾಹುಲ್​ರನ್ನು ವಿಶಾಖಪಟ್ಟಣಂ ಟೆಸ್ಟ್​ನಿಂದ ಹೊರಗಿಡಲಾಗಿತ್ತು. ಇದಾದ ನಂತರ ರಾಹುಲ್ ರಿಹ್ಯಾಬ್​ಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿಕೊಂಡಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿರುವ ರಾಹುಲ್, ರಾಜ್ ಕೋಟ್​ ಟೆಸ್ಟ್​ನಲ್ಲಿ ಆಡುವ ಸಾಧ್ಯತೆಗಳಿವೆ.

IND vs ENG: ಟೀಂ ಇಂಡಿಯಾಗೆ ಸಿಹಿ ಸುದ್ದಿ; ಅಭ್ಯಾಸ ಆರಂಭಿಸಿದ ರಾಹುಲ್! ತಂಡದಲ್ಲಿ ಆಡುವುದು ಖಚಿತ
ಕೆಎಲ್ ರಾಹುಲ್

Updated on: Feb 11, 2024 | 7:57 PM

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಿಗೆ ಭಾರತ ತಂಡವನ್ನು (India vs England) ಆಯ್ಕೆಗಾರರು ಪ್ರಕಟಿಸಿದ್ದಾರೆ. ಅದರಂತೆ ಸರಣಿಯ ಮೊದಲ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ (KL Rahul) ಹಾಗೂ ರವೀಂದ್ರ ಜಡೇಜಾ (Ravindra Jadeja) ಇಬ್ಬರೂ ಮತ್ತೆ ತಂಡ ಸೇರಿಕೊಂಡಿದ್ದಾರೆ. ಆದರೆ ಈ ಇಬ್ಬರು ಪೂರ್ಣ ಫಿಟ್ ಎಂಬುದನ್ನು ಎನ್​ಸಿಎ (NCA) ಖಚಿತ ಪಡಿಸಿದರೆ ಮಾತ್ರ ಇವರಿಬ್ಬರು ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಲ್ಲಿದ್ದಾರೆ ಎಂದು ಬಿಸಿಸಿಐ (BCCI) ತಿಳಿಸಿತ್ತು. ಈ ನಡುವೆ ನಾನು ಸಂಪೂರ್ಣ ಫಿಟ್ ಎಂಬುದನ್ನು ಸಾಭೀತುಪಡಿಸುವ ಸಲುವಾಗಿ ಸ್ಟಾರ್ ಬ್ಯಾಟ್ಸ್​ಮನ್ ಕೆಎಲ್ ರಾಹುಲ್ ನೆಟ್ಸ್​ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ತಮ್ಮ ಅಭ್ಯಾಸದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್, ತಾನು ಪಂದ್ಯವನ್ನಾಡಲು ಸಿದ್ಧ ಎಂಬ ಸೂಚನೆಯನ್ನು ಬಿಸಿಸಿಐಗೆ ರವಾನಿಸಿದ್ದಾರೆ.

ವಾಸ್ತವವಾಗಿ ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ರಾಹುಲ್​ರನ್ನು ವಿಶಾಖಪಟ್ಟಣಂ ಟೆಸ್ಟ್​ನಿಂದ ಹೊರಗಿಡಲಾಗಿತ್ತು. ಇದಾದ ನಂತರ ರಾಹುಲ್ ರಿಹ್ಯಾಬ್​ಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿಕೊಂಡಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿರುವ ರಾಹುಲ್, ರಾಜ್ ಕೋಟ್​ ಟೆಸ್ಟ್​ನಲ್ಲಿ ಆಡುವ ಸಾಧ್ಯತೆಗಳಿವೆ.

ಬಲಿಷ್ಠವಾಗಲಿದೆ ಮಧ್ಯಮ ಕ್ರಮಾಂಕ

ಒಂದು ವೇಳೆ ರಾಹುಲ್ ತಂಡಕ್ಕೆ ಎಂಟ್ರಿಕೊಟ್ಟರೆ ಟೀಂ ಇಂಡಿಯಾದ ಬಲ ಇನ್ನಷ್ಟು ಹೆಚ್ಚಲಿದೆ. ಏಕೆಂದರೆ ತಂಡದ ಪ್ರಮುಖ ಬ್ಯಾಟರ್ ವಿರಾಟ್​ ಕೊಹ್ಲಿ ಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇವರಲ್ಲದೆ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಇಂಜುರಿಂದಾಗಿ ತಂಡ ತೊರೆದಿದ್ದಾರೆ. ಹೀಗಾಗಿ ಈ ಇಬ್ಬರು ಪ್ರಮುಖ ಬ್ಯಾಟರ್​ಗಳ ಅಲಭ್ಯತೆಯಿಂದ ಮಧ್ಯಮ ಕ್ರಮಾಂಕದಲ್ಲಿ ಬಲ ಹೀನವಾಗಿದ್ದ ಟೀಂ ಇಂಡಿಯಾಕ್ಕೆ ರಾಹುಲ್ ಆಗಮನ ಕೊಂಚ ನಿರಾಳ ತಂದಿದೆ.

IND vs ENG: ಶತಕ ವಂಚಿತರಾದರೂ ತವರಿನಲ್ಲಿ ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್..!

ಜಡೇಜಾಆಡುವ ಸಾಧ್ಯತೆಯೂ ಹೆಚ್ಚಿದೆ

ಕೆಎಲ್ ರಾಹುಲ್ ಹೊರತಾಗಿ, ರವೀಂದ್ರ ಜಡೇಜಾ ಕೂಡ ಮಂಡಿರಜ್ಜು ಗಾಯದಿಂದಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಅವರು ಇಡೀ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇತ್ತು. ಆದರೆ, ಜಡೇಜಾ ಅವರು ಸರಣಿಯ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲೂ ಆಡುವ ನಿರೀಕ್ಷೆಯಿದೆ.

ಕೊನೆಯ 3 ಟೆಸ್ಟ್‌ಗಳಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ