
ಕಟಕ್ ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹ ಆಟಗಾರನ ವಿರುದ್ಧ ರೇಗಾಡಿದ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿತ್ತು. ಭರ್ಜರಿ ಆರಂಭದೊಂದಿಗೆ ಆಂಗ್ಲರ ಪಡೆ 30 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡ 163 ರನ್ ಕಲೆಹಾಕಿತ್ತು.
ಈ ಹಂತದಲ್ಲಿ 32ನೇ ಓವರ್ ಎಸೆಯಲು ಬಂದ ಹರ್ಷಿತ್ ರಾಣಾ ಓವರ್ ಥ್ರೋ ಮೂಲಕ ಫೋರ್ ನೀಡಿದ್ದಾರೆ. ರಾಣಾ ಎಸೆತದಲ್ಲಿ ಜೋಸ್ ಬಟ್ಲರ್ ರಕ್ಷಣಾತ್ಮಕವಾಗಿ ಆಡಿದ್ದರು. ಇತ್ತ ಚೆಂಡು ಕೈಗೆ ಸಿಗುತ್ತಿದ್ದಂತೆ ಸ್ಟ್ರೈಕ್ ನಲ್ಲಿದ್ದ ಬಟ್ಲರ್ ನನ್ನು ರನೌಟ್ ಮಾಡಲು ರಾಣಾ ಮುಂದಾಗಿದ್ದಾರೆ.
ಹರ್ಷಿತ್ ರಾಣಾ ಎಸೆದ ಥ್ರೋ ನೇರವಾಗಿ ಬೌಂಡಿಯತ್ತ ಸಾಗಿದೆ. ಇದರಿಂದ ಕುಪಿತಗೊಂಡ ರೋಹಿತ್ ಶರ್ಮಾ ನಿನಗೇನು ಬುದ್ದಿಯಿಲ್ವಾ ಎಂಬರ್ಥದಲ್ಲಿ ಹರ್ಷಿತ್ ವಿರುದ್ಧ ರೇಗಾಡಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರ ಮೈದಾನದಲ್ಲಿನ ಕೋಪ-ತಾಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Rohit to Harshit: Dimag kidhar hai tera
Heis so pure guy 😭 pic.twitter.com/bJSV5Uk9ql
— MAHI (@mahiiii45) February 9, 2025
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 49.5 ಓವರುಗಳಲ್ಲಿ 304 ರನ್ ಗಳಿಸಿ ಆಲೌಟ್ ಆಗಿದೆ. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (119) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಸೆಂಚುರಿ ನೆರವಿನಿಂದ ಭಾರತ ತಂಡವು 44.3 ಓವರುಗಳಲ್ಲಿ 308 ರನ್ ಬಾರಿಸಿ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಸಪಡಿಸಿಕೊಂಡಿದೆ. ಇನ್ನು ಈ ಸರಣಿಯ ಮೂರನೇ ಮ್ಯಾಚ್ ಫೆಬ್ರವರಿ 12 ರಂದು ನಡೆಯಲಿದೆ.