IND vs ENG: ತಂಡದ ಹೀನಾಯ ಸೋಲಿಗೆ ನಾಯಕ ರೋಹಿತ್ ದೂರಿದ್ದು ಯಾರನ್ನ?

|

Updated on: Jan 28, 2024 | 9:18 PM

IND vs ENG: ಸರಣಿಯ ಮೊದಲ ಟೆಸ್ಟ್‌ನಲ್ಲಿನ ನಿರಾಶಾದಾಯಕ ಸೋಲಿನ ನಂತರ, ಭಾರತ ತಂಡದ ನಾಯಕ ರೋಹಿತ್, ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್​ನಲ್ಲಿ ಮಾತನಾಡಿದ್ದು, ಪ್ರದರ್ಶನದ ಬಗ್ಗೆ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

IND vs ENG: ತಂಡದ ಹೀನಾಯ ಸೋಲಿಗೆ ನಾಯಕ ರೋಹಿತ್ ದೂರಿದ್ದು ಯಾರನ್ನ?
ರೋಹಿತ್ ಶರ್ಮಾ
Follow us on

ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ (India vs England) ವಿರುದ್ಧ 28 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೂರನೇ ದಿನದವರೆಗೂ ತನ್ನ ಹಿಡಿತವನ್ನು ಕಾಯ್ದುಕೊಂಡಿತ್ತು. ಆದರೆ ಒಲಿ ಪೋಪ್ ಅವರ ಬಲಿಷ್ಠ ಬ್ಯಾಟಿಂಗ್‌ನಿಂದಾಗಿ ಪಂದ್ಯ ಟೀಂ ಇಂಡಿಯಾ (Team India) ಕೈಯಿಂದ ಜಾರಿತು. ಸರಣಿಯ ಮೊದಲ ಟೆಸ್ಟ್‌ನಲ್ಲಿನ ನಿರಾಶಾದಾಯಕ ಸೋಲಿನ ನಂತರ, ಭಾರತ ತಂಡದ ನಾಯಕ ರೋಹಿತ್ (Rohit Sharma), ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್​ನಲ್ಲಿ ಮಾತನಾಡಿದ್ದು, ಪ್ರದರ್ಶನದ ಬಗ್ಗೆ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮ ಇನ್ನಿಂಗ್ಸ್ ಇದಾಗಿತ್ತು

ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, ಈ ಪಂದ್ಯ ನಾಲ್ಕು ದಿನಗಳ ಕಾಲ ನಡೆಯಿತು. ಆದ್ದರಿಂದ ಎಲ್ಲಿ ತಪ್ಪಾಗಿದೆ ಎಂದು ಕಂಡುಹಿಡಿಯುವುದು ಕಷ್ಟ. 190 ರನ್‌ಗಳ ಮುನ್ನಡೆಯೊಂದಿಗೆ, ನಾವು ಗೆಲುವಿನ ಸಮೀಪದಲ್ಲಿದ್ದೇವೆ ಎಂದು ನಾವು ಭಾವಿಸಿದ್ದೇವು. ಆದರೆ ಒಲಿ ಪೋಪ್ ಇಂಗ್ಲೆಂಡ್‌ ಪರ ಅದ್ಭುತ ಇನ್ನಿಂಗ್ಸ್ ಆಡಿದರು. ಅಪರೂಪವಾಗಿ ನಾನು ಭಾರತದ ನೆಲದಲ್ಲಿ ವಿದೇಶಿ ಬ್ಯಾಟ್ಸ್‌ಮನ್‌ನಿಂದ ನಾನು ನೋಡಿದ ಅತ್ಯುತ್ತಮ ಇನ್ನಿಂಗ್ಸ್ ಇದಾಗಿತ್ತು ಎಂದು ರೋಹಿತ್ ಆಂಗ್ಲ ಬ್ಯಾಟರ್​ನನ್ನು ಹೊಗಳಿದರು.

IND vs ENG: ಹೈದರಾಬಾದ್‌ನಲ್ಲಿ ಭಾರತ ಎಡವಿದ್ದೆಲ್ಲಿ? ಸೋಲಿನ ಕಥೆ ಹೇಳುತ್ತಿವೆ ತಂಡ ಮಾಡಿದ ಈ 4 ತಪ್ಪುಗಳು

ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ

ನಾಲ್ಕನೇ ಇನ್ನಿಂಗ್ಸ್‌ನಲ್ಲಿ 230 ರನ್ ಗುರಿಯನ್ನು ನಾವು ಬೆನ್ನಟ್ಟಬಹುದಿತ್ತು. ಪಿಚ್‌ನಲ್ಲಿ ಅಂತಹದ್ದೇನೂ ಇರಲಿಲ್ಲ. ಆದರೆ ನಾವು ರನ್ ಗಳಿಸುವಲ್ಲಿ ಉತ್ತಮವಾಗಿರಲಿಲ್ಲ. ನಾನು ಬೌಲಿಂಗ್ ಅನ್ನು ವಿಶ್ಲೇಷಿಸಿದ್ದೇನೆ, ನಾವು ಸರಿಯಾದ ಲೈನ್ ಅಂಡ್ ಲೆಂಗ್ತ್​ನಲ್ಲಿ ಚೆಂಡನ್ನು ಬೌಲ್ ಮಾಡಿದ್ದೇವು. ಆದರೆ ನಾವು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನಮ್ಮ ಬೌಲರ್‌ಗಳು ನಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಿದರು. ಆದರೆ ಪೋಪ್ ಅವರ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿತ್ತು. ಅದೊಂದು ಅದ್ಭುತ ಇನ್ನಿಂಗ್ಸ್ ಆಗಿತ್ತು.

ಒಟ್ಟಾರೆ, ನಾವು ತಂಡವಾಗಿ ವಿಫಲರಾಗಿದ್ದೇವೆ. ಅವರ ಮೊದಲ ಇನ್ನಿಂಗ್ಸ್ ಮತ್ತು ನಮ್ಮ ಬ್ಯಾಟಿಂಗ್ ನಂತರ, ನಾವು ಗೆಲುವಿನ ಸಮೀಪದಲ್ಲಿದ್ದೇವೆ ಎಂದು ನಾವು ಭಾವಿಸಿದ್ದೇವೆ. ಆದರೆ ಗೆಲುವಿನ ರನ್ ಗಳಿಸುವಲ್ಲಿ ನಾವು ಯಶಸ್ವಿಯಾಗಲಿಲ್ಲ. ಸಿರಾಜ್ ಮತ್ತು ಬುಮ್ರಾ ಪಂದ್ಯವನ್ನು ಐದನೇ ದಿನಕ್ಕೆ ಕೊಂಡೊಯ್ಯಬೇಕೆಂದು ನಾನು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ.

ಗೆಲುವಿಗಾಗಿ ಹೋರಾಡಬೇಕು

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಗೆಲುವಿಗಾಗಿ ಹೋರಾಟ ನೀಡುವ ಮೂಲಕ ನೀವು ಕೂಡ ಗೆಲುವಿಗಾಗಿ ಹೋರಾಡಬೇಕು ಎಂಬುದನ್ನು ಅಗ್ರ ಕ್ರಮಾಂಕದ ಬ್ಯಾಟರ್​ಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದು ಸರಣಿಯ ಮೊದಲ ಪಂದ್ಯವಾಗಿರುವುದರಿಂದ ಆಟಗಾರರು ಮುಂದಿನ ದಿನಗಳಲ್ಲಿ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ