CCL 2024: ಸಿಸಿಎಲ್ನಲ್ಲಿ ಅಬ್ಬರಿಸಲು ಸಜ್ಜಾದ ಪಂಜಾಬ್ ದಿ ಶೇರ್; ಮೊದಲ ಪಂದ್ಯ ಯಾವಾಗ ಗೊತ್ತಾ?
CCL 2024 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ಗೆ ದಿನಗಣನೆ ಆರಂಭವಾಗಿದ್ದು, ಭಾರತ ಚಿತ್ರರಂಗದ ದಿಗ್ಗಜರು ಇದೇ ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಫೆಬ್ರವರಿ 23 ರಿಂದ ಆರಂಭವಾಗುವ ಸಿಸಿಎಲ್ನ 10ನೇ ಸೀಸನ್ ಮಾರ್ಚ್ 17 ರವರೆಗೆ ನಡೆಯಲ್ಲಿದೆ.
ಭಾರತ ಚಿತ್ರರಂಗದ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಅಭಿಮಾನಿಗಳಿಗೆ ಮತ್ತೊಮ್ಮೆ ಒದಗಿ ಬಂದಿದೆ. 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ಗೆ (Celebrity Cricket League 2024) ದಿನಗಣನೆ ಆರಂಭವಾಗಿದ್ದು, ದೇಶದ ಸ್ಟಾರ್ ನಟರು ಇದೇ ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಫೆಬ್ರವರಿ 23 ರಿಂದ ಆರಂಭವಾಗುವ ಸಿಸಿಎಲ್ನ 10ನೇ ಸೀಸನ್ ಮಾರ್ಚ್ 17 ರವರೆಗೆ ನಡೆಯಲ್ಲಿದೆ. ಲೀಗ್ ಸುತ್ತು ಮಾರ್ಚ್ 10 ರವರೆಗೆ ನಡೆಯಲಿದ್ದು, ಈ ಸುತ್ತಿನಲ್ಲಿ 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇಆಫ್ ಸುತ್ತು ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನ (United Arab Emirates) ಶಾರ್ಜಾದಲ್ಲಿ ನಡೆಯಲ್ಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ.
5 ನಗರಗಳಲ್ಲಿ ನಡೆಯಲ್ಲಿದೆ ಲೀಗ್
ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪರ್‌ಸ್ಟಾರ್‌ಗಳನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಮೇಲೆ ಹೇಳಿದಂತೆ ಯುಎಇಯ ಶಾರ್ಜಾದಲ್ಲಿ ಲೀಗ್ನ ಮೂರು ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ. ಭಾರತದ ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್ನಲ್ಲಿ ಉಳಿದ ಪಂದ್ಯಗಳು ನಡೆಯಲ್ಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ. ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲ್ಲಿವೆ.
8 ತಂಡಗಳು ಹೀಗಿವೆ
- ಮುಂಬೈ ಹೀರೋಸ್
- ಕೇರಳ ಸ್ಟ್ರೈಕರ್ಸ್
- ತೆಲುಗು ವಾರಿಯರ್ಸ್
- ಭೋಜ್‌ಪುರಿ ದಬಾಂಗ್ಸ್
- ಕರ್ನಾಟಕ ಬುಲ್ಡೋಜರ್ಸ್
- ಬೆಂಗಾಲ್ ಟೈಗರ್ಸ್
- ಚೆನ್ನೈ ರೈನೋಸ್
- ಪಂಜಾಬ್ ದಿ ಶೇರ್
ಪಂಜಾಬ್ಗೆ ಸೋನು ನಾಯಕ
ಈ ಎಂಟು ಫ್ರಾಂಚೈಸಿಗಳ ಪೈಕಿ, ಪಂಜಾಬ್ ದಿ ಶೇರ್ ಈ ಬಾರಿ ಕಪ್ ಗೆಲ್ಲುವ ಸಲುವಾಗಿ ಬಲಿಷ್ಠ ತಂಡವನ್ನೇ ಕಟ್ಟಿಕೊಂಡು ಅಖಾಡಕ್ಕಿಳಿಯುತ್ತಿದೆ. ತಂಡದ ನಾಯಕತ್ವ ಬಾಲಿವುಡ್ ನಾಯಕ ನಟ ಸೋನು ಸೂದ್ ವಹಿಸಿಕೊಂಡಿದ್ದು, ತಂಡವು ಲೀಗ್ನ ಮೊದಲ ಪಂದ್ಯವನ್ನು ಫೆಬ್ರವರಿ 25 ರಂದು ಚೆನ್ನೈ ರೈನೋಸ್ ವಿರುದ್ಧ ಆಡಲಿದೆ.
ಅಭ್ಯಾಸ ಆರಂಭಿಸಿದ ಪಂಜಾಬ್
ಈ ಲೀಗ್ಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿರುವ ಪಂಜಾಬ್ ತಂಡವು, ಲೀಗ್ನ ಮೊದಲ ಪಂದ್ಯಕ್ಕೂ ಮುನ್ನ ಕೆಲವು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಅದರಂತೆ ಡಿಸೆಂಬರ್ 16 ರಂದು ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಪಂಜಾಬ್ ದಿ ಶೇರ್ ತಂಡ, ಪಂಜಾಬ್ ಎಜುಕೇಟರ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಆ ಬಳಿಕ ಜನವರಿ 27 ರಂದು IRS ಆಫೀಸರ್ಸ್ XI ತಂಡದ ವಿರುದ್ಧ ಎರಡನೇ ಅಭ್ಯಾಸ ಪಂದ್ಯವನ್ನು ಆಡಿತ್ತು. ಇನ್ನು ಫೆಬ್ರವರಿ ತಿಂಗಳಲ್ಲಿ ತಂಡ ಇನ್ನೂ 3 ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಆ ನಂತರ ಸಿಸಿಎಲ್ಗೆ ಲಗ್ಗೆ ಇಡಲಿದೆ. ಈ ಭಾರಿ ಬಲಿಷ್ಠವಾಗಿ ಕಾಣುತ್ತಿರುವ ಪಂಜಾಬ್ ದಿ ಶೇರ್ ತಂಡದ ಮಾಧ್ಯಮ ಪಾಲುದಾರಿಕೆಯನ್ನು ಟಿವಿ9 ನೆಟ್‌ವರ್ಕ್ ಮತ್ತು ನ್ಯೂಸ್ 9 ಪಡೆದುಕೊಂಡಿದೆ.
ಕ್ರಿಕೆಟ್‌ನೊಂದಿಗೆ ಟಿವಿ9 ನೆಟ್‌ವರ್ಕ್ ಒಡನಾಟ
ಏತನ್ಮಧ್ಯೆ, ಟಿವಿ9 ನೆಟ್‌ವರ್ಕ್ ಕ್ರಿಕೆಟ್ ಲೋಕದಲ್ಲೂ ತನ್ನ ಛಾಪು ಮೂಡಿಸಿದ್ದು, ಟಿವಿ9 ಗ್ರೂಪ್ ಈಗಾಗಲೇ ಕ್ರಿಕೆಟ್ನ ಮಿಲೇನಿಯರ್ ಕೂಸಾದ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳ ಪ್ರಾಯೋಜಕತ್ವವನ್ನು ನಿರ್ವಹಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Sun, 28 January 24