ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ (M. Chinnaswamy Stadium) ನಡೆಯುತ್ತಿರುವ ಭಾರತ ಹಾಗೂ ನೆದರ್ಲೆಂಡ್ಸ್ (India Vs Netherlands) ನಡುವಿನ ವಿಶ್ವಕಪ್ (ICC ODI World Cup 2023) ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ತಂಡದ ಟಾಪ್ ಐವರು ಬ್ಯಾಟರ್ಗಳ 50+ ಸ್ಕೋರ್ನಿಂದಾಗಿ ನೆದರ್ಲೆಂಡ್ಸ್ ತಂಡಕ್ಕೆ 411 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಇನ್ನು ಭಾರತ ನೀಡಿರುವ ಈ ಗುರಿ ಬೆನ್ನಟ್ಟಿರುವ ನೆದರ್ಲೆಂಡ್ಸ್ ತಂಡ ಆಗಾಗ್ಗೆ ವಿಕೆಟ್ ಕಳೆದುಕೊಳ್ಳುತ್ತ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ. ಕೇವಲ 100 ರನ್ಗಳಿಗೆ ತಂಡದ ಪ್ರಮುಖ 4 ವಿಕೆಟ್ ಪತನವಾಗಿದೆ. ಈ 4 ವಿಕೆಟ್ಗಳಲ್ಲಿ ಒಂದು ವಿಕೆಟ್ ಕಿಂಗ್ ಕೊಹ್ಲಿ (Virat Kohli) ಉರುಳಿಸಿದ್ದು ಎಂಬುದು ಎಲ್ಲರಲ್ಲೂ ಅಚ್ಚರಿ ಮೂಡಿಸುವ ಸಂಗತಿಯಾಗಿದೆ. ವಾಸ್ತವವಾಗಿ ಬರೋಬ್ಬರಿ 6 ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆಯುತ್ತಿರುವ ಕೊಹ್ಲಿ, ನೆದರ್ಲೆಂಡ್ಸ್ ವಿರುದ್ಧ ವಿಕೆಟ್ ಪಡೆದು ಮಿಂಚಿದ್ದಾರೆ. ವಿಶೇಷವೆಂದರೆ ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿಗೆ ಇದು ಮೊದಲ ವಿಕೆಟ್ ಸಹ ಆಗಿದೆ.
ವಾಸ್ತವವಾಗಿ 2023 ರ ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದು ಇದು ಎರಡನೇ ಬಾರಿಗೆ.ಇದಕ್ಕೂ ಮೊದಲು ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ 3 ಬಾಲ್ಗಳನ್ನು ಬೌಲ್ ಮಾಡಿದ್ದರು. ಅದಕ್ಕೆ ಕಾರಣವೂ ಇದ್ದು, ಹಾರ್ದಿಕ್ ಪಾಂಡ್ಯ ಇಂಜುರಿಯಿಂದಾಗಿ ಓವರ್ ಮಧ್ಯದಲ್ಲೇ ಮೈದಾನವನ್ನು ತೊರಿದಿದ್ದರಿಂದಾಗಿ ಪಾಂಡ್ಯ ಓವರ್ನ ಉಳಿದ 3 ಎಸೆತಗಳನ್ನು ಕೊಹ್ಲಿ ಬೌಲ್ ಮಾಡಿದ್ದರು. ಆದರೆ ಆ ವೇಳೆ ಕೊಹ್ಲಿಗೆ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ.
‘ನಿನ್ನಿಂದ ಮಾತ್ರ ಇದು ಸಾಧ್ಯ’; ಮ್ಯಾಕ್ಸ್ವೆಲ್ ದ್ವಿಶತಕದ ಆಟಕ್ಕೆ ಕಿಂಗ್ ಕೊಹ್ಲಿ ಕ್ಲೀನ್ ಬೌಲ್ಡ್
ಆದರೆ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ಕೊಹ್ಲಿ, ತಾವು ಬೌಲ್ ಮಾಡಿದ 2ನೇ ಓವರ್ನಲ್ಲೇ ವಿಕೆಟ್ ಪಡೆದಿದ್ದಾರೆ. ತಮ್ಮ ಖೋಟಾದ 2ನೇ ಓವರ್ ಬೌಲ್ ಮಾಡಲು ಬಂದ ಕೊಹ್ಲಿ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಬಲಿ ಪಡೆದರು. ತಮ್ಮ ಇನ್ನಿಂಗ್ಸ್ನಲ್ಲಿ 30 ಎಸೆತಗಳನ್ನು ಎದುರಿಸಿದ ಸ್ಕಾಟ್ ಎಡ್ವರ್ಡ್ಸ್ ಕೇವಲ 17 ರನ್ ಗಳಿಸಿ ಕೆಎಲ್ ರಾಹುಲ್ ಅವರಿಗೆ ಕ್ಯಾಚ್ ನೀಡಿದರು. ಇದು ಬರೋಬ್ಬರಿ 9 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಉರುಳಿಸಿದ ಮೊದಲ ವಿಕೆಟ್ ಆಗಿದೆ. ಇದಕ್ಕೂ ಮುನ್ನ ವಿರಾಟ್ 2014 ರಲ್ಲಿ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆದಿದ್ದರು.
Virat Kohli gets his first World Cup wicket 😭❤️ pic.twitter.com/nXfm4Jrcl5
— Mufadaal Vohra (@musafir_tha_yr) November 12, 2023
ಕೊಹ್ಲಿ ಬೌಲಿಂಗ್ ಮಾಡುವುದನ್ನು ಕುಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಅವರು ವಿಕೆಟ್ ಉರುಳಿಸಿದ್ದು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಅದರಲ್ಲೂ ಪಂದ್ಯ ವೀಕ್ಷಿಸಲು ಬಂದಿದ್ದ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ, ಕೊಹ್ಲಿ ವಿಕೆಟ್ ಪಡೆಯುತ್ತಿದ್ದಂತೆ ಚೇರ್ನಿಂದ ಮೇಲೆದ್ದು ಚಪ್ಪಾಳೆ ತಟ್ಟುತ್ತಾ ಸಂಭ್ರಮಾಚರಣೆ ಮಾಡಿದರು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
Love Mood ❤️😻#INDvNED #ViratKohli pic.twitter.com/AUEys7DBzN
— PRIYA💫 (@_ThisisPriya) November 12, 2023
I pay my internet bills for the moments like this 🤍😭#INDvNEDpic.twitter.com/Y4DfTIeAui
— Basit (@imkohIity) November 12, 2023
ಇನ್ನು ವಿರಾಟ್ ಕೊಹ್ಲಿಯ ಬೌಲಿಂಗ್ ವಿಚಾರಕ್ಕೆ ಬಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದುವರೆಗೆ 644 ಎಸೆತಗಳನ್ನು ಎಸೆದಿರುವ ಕೊಹ್ಲಿ, 677 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿಗೆ ಐದನೇ ವಿಕೆಟ್ ಆಗಿದೆ. ಅವರು ಈ ಹಿಂದೆ ಅಲೈಸ್ಟರ್ ಕುಕ್, ಕ್ರೇಗ್ ಕೀಸ್ವೆಟರ್, ಬ್ರೆಂಡನ್ ಮೆಕಲಮ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಪಡೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:43 pm, Sun, 12 November 23