AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನ್ಯೂಝಿಲೆಂಡ್​ಗೆ ಆಘಾತ!

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯು ನವೆಂಬರ್ 19 ರಿಂದ ಶುರುವಾಗಲಿದೆ. ಎರಡು ಪಂದ್ಯಗಳ ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಟೀಮ್ ಇಂಡಿಯಾಗೆ ನಿರ್ಣಾಯಕವಾಗಿದ್ದು, ಈ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದರೆ ಫೈನಲ್ ಹಾದಿ ಸುಗಮವಾಗಲಿದೆ.

ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನ್ಯೂಝಿಲೆಂಡ್​ಗೆ ಆಘಾತ!
New Zealand Image Credit source: GettyImages
ಝಾಹಿರ್ ಯೂಸುಫ್
|

Updated on: Nov 17, 2026 | 8:00 AM

Share

ಭಾರತ ವಿರುದ್ಧ ನವೆಂಬರ್ 19ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ನ್ಯೂಝಿಲೆಂಡ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಬಲಗೈ ಮೂಳೆ ಮುರಿತಕ್ಕೆ  ಒಳಗಾಗಿದ್ದು, ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಸ್ಪಿನ್ ಆಲ್‌ರೌಂಡರ್ ಡೀನ್ ಫಾಕ್ಸ್‌ಕ್ರಾಫ್ಟ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಗಾಯವಾಗಿದ್ದು ಹೇಗೆ?

ಭಾನುವಾರ (ನವೆಂಬರ್ 15) ಮೌಂಟ್ ಮೌಂಗನುಯಿಯಲ್ಲಿ ನಡೆದ ಭಾರತ ವಿರುದ್ಧದ ಐದನೇ ಏಕದಿನ ಪಂದ್ಯದ ವೇಳೆ ಸ್ಯಾಂಟ್ನರ್ ಗಾಯಗೊಂಡಿದ್ದರು. ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಭಾರತದ ವೇಗಿ ಅರ್ಷದೀಪ್ ಸಿಂಗ್ ಎಸೆದ ಚೆಂಡು ಸ್ಯಾಂಟ್ನರ್ ಅವರ ಬಲಗೈ ಹಿಂಭಾಗಕ್ಕೆ ಬಲವಾಗಿ ಬಡಿದಿತ್ತು. ನೋವಿನ ನಡುವೆಯೂ ಬ್ಯಾಟಿಂಗ್ ಮುಂದುವರಿಸಿ 24 ರನ್ ಗಳಿಸಿದ್ದ ಅವರನ್ನು ಪಂದ್ಯದ ಬಳಿಕ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿತ್ತು.

ವೈದ್ಯಕೀಯ ವರದಿಯಲ್ಲಿ ಸ್ಯಾಂಟ್ನರ್ ಅವರ ಮೂಳೆ ಮುರಿತವಾಗಿರುವುದು ದೃಢಪಟ್ಟಿರುವುದಾಗಿ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ (NZC) ತಿಳಿಸಿದೆ. ಸ್ಯಾಂಟ್ನರ್ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ವೈದ್ಯಕೀಯ ತಂಡ ಪರಿಶೀಲಿಸುತ್ತಿದ್ದು, ಡಿಸೆಂಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೂ ಅವರು ಲಭ್ಯರಾಗುವುದು ಅನುಮಾನವಾಗಿದೆ.

ತಂಡದ ಮೇಲಾಗುವ ಪರಿಣಾಮ:

ಸ್ಯಾಂಟ್ನರ್ ಅನುಪಸ್ಥಿತಿಯು ಕಿವೀಸ್ ಪಡೆಯ ಸ್ಪಿನ್ ವಿಭಾಗವನ್ನು ದುರ್ಬಲಗೊಳಿಸಿದೆ. ತಂಡದಲ್ಲಿ ಈಗ ಪೂರ್ಣ ಪ್ರಮಾಣದ ತಜ್ಞ ಸ್ಪಿನ್ನರ್‌ಗಳ ಕೊರತೆಯಿದ್ದು, ರಚಿನ್ ರವೀಂದ್ರ ಮತ್ತು ಗ್ಲೆನ್ ಫಿಲಿಪ್ಸ್ ಅವರಂತಹ ಪಾರ್ಟ್-ಟೈಮ್ ಸ್ಪಿನ್ನರ್‌ಗಳೊಂದಿಗೆ ಡೀನ್ ಫಾಕ್ಸ್‌ಕ್ರಾಫ್ಟ್ ಸ್ಪಿನ್ ಜವಾಬ್ದಾರಿ ಹೊರಬೇಕಿದೆ.

ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡದ ಆಟಗಾರನಾಗಿರುವ ಫಾಕ್ಸ್‌ಕ್ರಾಫ್ಟ್, ಈ ವರ್ಷದ ಮೇ ತಿಂಗಳಲ್ಲಿ ಐರ್ಲೆಂಡ್ ವಿರುದ್ಧ ಪಾದಾರ್ಪಣೆ ಟೆಸ್ಟ್ ಪಂದ್ಯವಾಡಿ 98 ರನ್ ಗಳಿಸಿದ್ದರು. ಹಾಗೆಯೇ ಈ ವರ್ಷದ ಆರಂಭದಲ್ಲಿ ಭಾರತ ‘ಎ’ ತಂಡದ ವಿರುದ್ಧದ ರೆಡ್ ಬಾಲ್​ ಪಂದ್ಯಗಳಲ್ಲಿ 51, 42, 93 ಮತ್ತು ಅಜೇಯ 10 ರನ್ ಗಳಿಸಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು. ಹೀಗಾಗಿ ಮಿಚೆಲ್ ಸ್ಯಾಂಟ್ನರ್ ಬದಲಿಗೆ ಡೀನ್ ಫಾಕ್ಸ್‌ಕ್ರಾಫ್ಟ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಭಾರತ vs ನ್ಯೂಝಿಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:

  1. ಮೊದಲ ಟೆಸ್ಟ್: ನವೆಂಬರ್ 19 – 23 (ಬೇಸಿನ್ ರಿಸರ್ವ್, ವೆಲ್ಲಿಂಗ್ಟನ್)
  2. ಎರಡನೇ ಟೆಸ್ಟ್: ನವೆಂಬರ್ 27 – ಡಿಸೆಂಬರ್ 1 (ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್)

ಇದನ್ನೂ ಓದಿ: ಧೋನಿ ನಿವೃತ್ತಿ? ಸಿಎಸ್​ಕೆ ಅಭಿಮಾನಿಗಳಿಗೆ ಕಾದಿದ್ಯಾ ಬಿಗ್ ಶಾಕ್!

ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್‌ ಲ್ಯಾಥಮ್‌ (ನಾಯಕ), ಟಾಮ್‌ ಬ್ಲಂಡೆಲ್‌, ಡೆವೊನ್‌ ಕಾನ್ವೇ, ಜೇಕಬ್‌ ಡಫಿ, ಮ್ಯಾಟ್‌ ಹೆನ್ರಿ, ಕೈಲ್‌ ಜೇಮಿಸನ್‌, ಡ್ಯಾರಿಲ್‌ ಮಿಚೆಲ್‌, ಹೆನ್ರಿ ನಿಕೋಲ್ಸ್‌, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ನಾಥನ್‌ ಸ್ಮಿತ್‌, ಬ್ಲೇರ್‌ ಟಿಕ್ನರ್‌, ವಿಲ್‌ ಯಂಗ್‌, ಡೀನ್ ಫಾಕ್ಸ್‌ಕ್ರಾಫ್ಟ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಎಲ್ಲಾ ಆನೆಗಳನ್ನ ಓಡಿಸುತ್ತೇವೆ ಎಂದ ಸಚಿವ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಎಲ್ಲಾ ಆನೆಗಳನ್ನ ಓಡಿಸುತ್ತೇವೆ ಎಂದ ಸಚಿವ
ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ
ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ
ಸ್ಟಿಂಗ್ ಆಪರೇಷನ್ ಕೇಸ್​: ಸಿಸಿಬಿ ಮುಂದೆ ಕೃಪಾ ಆಳ್ವಾ ಹಾಜರ್
ಸ್ಟಿಂಗ್ ಆಪರೇಷನ್ ಕೇಸ್​: ಸಿಸಿಬಿ ಮುಂದೆ ಕೃಪಾ ಆಳ್ವಾ ಹಾಜರ್
ಸೋನಿಯಾ ಗಾಂಧಿಯ ಆತ್ಮಕತೆ ಇಂದು ಅಧಿಕೃತ ಬಿಡುಗಡೆ
ಸೋನಿಯಾ ಗಾಂಧಿಯ ಆತ್ಮಕತೆ ಇಂದು ಅಧಿಕೃತ ಬಿಡುಗಡೆ
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮದ್ಯ ಮಾರಾಟ ನಿಷೇಧ
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮದ್ಯ ಮಾರಾಟ ನಿಷೇಧ