IND vs PAK: ಒಂದು ತಪ್ಪಿನಿಂದ ಸೋಲುಂಡ ಟೀಮ್ ಇಂಡಿಯಾ..!

India vs Pakistan: ಟೀಮ್ ಇಂಡಿಯಾ ನೀಡಿದ ಈ ಕಠಿಣ ಟಾರ್ಗೆಟ್ ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಬಾರಿಸಿದರು.

IND vs PAK: ಒಂದು ತಪ್ಪಿನಿಂದ ಸೋಲುಂಡ ಟೀಮ್ ಇಂಡಿಯಾ..!
Team India
Updated By: ಝಾಹಿರ್ ಯೂಸುಫ್

Updated on: Sep 04, 2022 | 11:53 PM

Asia Cup 2022: ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್​ನ ಸೂಪರ್-4 ಹಂತದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ದ ಪಾಕಿಸ್ತಾನ್ (India vs Pakistan) ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್​ ಕಲೆಹಾಕಿತು. ಈ ಕಠಿಣ ಟಾರ್ಗೆಟ್ ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಬಾರಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಅದರಂತೆ ಕೊನೆಯ ಓವರ್​ನಲ್ಲಿ 7 ರನ್​ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು 1 ಎಸೆತ ಬಾಕಿಯಿರುವಾಗ 182 ರನ್​ಗಳ ಗುರಿ ಮುಟ್ಟುವ ಮೂಲಕ 5 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಟೀಮ್ ಇಂಡಿಯಾದ ಈ ಸೋಲಿಗೆ ಹಲವು ಕಾರಣಗಳಿದ್ದರೂ, ಅಂತಿಮ ಹಂತದಲ್ಲಿ ಅರ್ಷದೀಪ್ ಸಿಂಗ್ ಮಾಡಿದ ದೊಡ್ಡ ತಪ್ಪಿನಿಂದಾಗಿ ಭಾರತ ತಂಡ ಸೋಲನುಭವಿಸಬೇಕಾಯಿತು ಎಂದರೆ ತಪ್ಪಾಗಲಾರದು. ಏಕೆಂದರೆ ಒತ್ತಡದ ಸನ್ನಿವೇಶದಲ್ಲಿ ಕೈಗೆ ಬಂದ ಸುಲಭ ಕ್ಯಾಚ್ ಅನ್ನು ಅರ್ಷದೀಪ್ ಸಿಂಗ್ ಕೈಚೆಲ್ಲಿದ್ದರು. ರವಿ ಬಿಷ್ಣೋಯ್ ಎಸೆದ 18ನೇ ಓವರ್​ನಲ್ಲಿ ಆಸೀಫ್ ಅಲಿ ಕ್ಯಾಚ್ ನೀಡಿದ್ದರು.

ಅತ್ಯಂತ ಸುಲಭವಾಗಿ ಹಿಡಿಯಬಹುದಾಗಿದ್ದ ಈ ಕ್ಯಾಚ್ ಅನ್ನು ಅರ್ಷದೀಪ್ ಸಿಂಗ್ ಡ್ರಾಪ್ ಮಾಡಿದ್ದರು.
ವಿಶೇಷ ಎಂದರೆ ಈ ವೇಳೆ ಆಸೀಫ್ ಅಲಿ ಒಂದೇ ಒಂದು ರನ್​ಗಳಿಸಿರಲಿಲ್ಲ. ಹೀಗೆ 18ನೇ ಓವರ್​ನಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಆಸೀಫ್ ಅಲಿ 8 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 16 ರನ್​ ಬಾರಿಸುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ಪರಿಣಾಮ ಕೊನೆಯ ಓವರ್​ನಲ್ಲಿ ಪಾಕ್ ತಂಡಕ್ಕೆ ಗೆಲ್ಲಲು 7 ರನ್​ಗಳ ಸುಲಭ ಗುರಿ ಸಿಕ್ಕಿತು. ಅಂದರೆ ಅಂತಿಮ ಹಂತದಲ್ಲಿ ಕ್ಯಾಚ್ ಕೈಚೆಲ್ಲುವ ಮೂಲಕ ಟೀಮ್ ಇಂಡಿಯಾ ಪಂದ್ಯವನ್ನೇ ಕೈಚೆಲ್ಲಿತು ಎಂದರೆ ತಪ್ಪಾಗಲಾರದು.